ಕ್ಯಾನ್ಸರ್‌ನಿಂದ ಸತ್ತ ವ್ಯಕ್ತಿಯ ಅಂತ್ಯಸಂಸ್ಕಾರಕ್ಕೆ ನೆರವಾಗಿದ್ದ ಬಂಧುಗಳಲ್ಲ... ಮತ್ತೆ ಯಾರು?

buland
Published on

ಮೇರಠ್: ಆತ ಕೆಲವು ವರ್ಷಗಳಿಂದ ಕ್ಯಾನ್ಸರ್‌ನಿಂದ ಬಳಲುತ್ತಿದ್ದ. ಆದರೆ ಆತ ಭಾನುವಾರ ಹಠಾತ್ತನೆ ಮೃತಪಟ್ಟ. ಬಡಕುಟುಂಬಕ್ಕೆ ಸೇರಿದ್ದ ಈತನ ಪುತ್ರ ಹತ್ತಿರದ ಸಂಬಂಧಿಗಳೆಲ್ಲರಿಗೂ ಸಾವಿನ ಸುದ್ದಿ ಮುಟ್ಟಿಸಿ, ಅಂತ್ಯಸಂಸ್ಕಾರಕ್ಕೆ ಸಿದ್ಧತೆ ಮಾಡಕೊಳ್ಳಲು ಆರಂಭಿಸಿದ. ಆದರೆ, ಕರೊನಾ ಸೋಂಕು ತಡೆಗೆ ರಾಷ್ಟ್ರಾದ್ಯಂತ ಲಾಕ್‌ಡೌನ್ ಇರುವ ಹಿನ್ನೆಲೆಯಲ್ಲಿ ಬಂಧುಗಳು ಅಂತ್ಯಸಂಸ್ಕಾರಕ್ಕೆ ಬರಲಿಲ್ಲ. ಆದರೆ, ಮೃತನ ಮನೆಯ ನೆರೆಹೊರೆಯಲ್ಲಿದ್ದ ಮುಸ್ಲಿಂ ಸಮುದಾಯದವರು, ಅಂತ್ಯಸಂಸ್ಕಾರದಲ್ಲಿ ಪಾಲ್ಗೊಂಡು ಹಿಂದು-ಮುಸ್ಲಿಂ ಮತೀಯ ಸೌಹಾರ್ದಕ್ಕೆ ಒಳ್ಳೆಯ ಉದಾಹರಣೆ ಒದಗಿಸಿದರು.

ಉತ್ತರ ಪ್ರದೇಶದ ಬುಲಂದ್‌ಶಹರ್‌ನ ಆನಂದವಿಹಾರದಲ್ಲಿ ಹೆಚ್ಚಿನ ಸಂಖ್ಯೆಯ ಮುಸ್ಲಿಮರು ನೆಲೆಸಿದ್ದಾರೆ. ಇದೇ ಬಡಾವಣೆಯಲ್ಲಿ ವಾಸವಾಗಿದ್ದ ರವಿಶಂಕರ್ ಹಲವು ವರ್ಷಗಳಿಂದ ಕ್ಯಾನ್ಸರ್‌ನಿಂದ ಬಳಲುತ್ತಿದ್ದ. ಬಡತನದ ಹಿನ್ನೆಲೆಯವರಾದರೂ ಈತನ ಚಿಕಿತ್ಸೆಗೆ ಕುಟುಂಬದವರು ಸಹಕರಿಸುತ್ತಿದ್ದರು. ಆದರೆ, ಈತ ಭಾನುವಾರ ಮೃತಪಟ್ಟ.

ಮಾಹಿತಿ ನೀಡಿದರೂ ಬಂಧುಬಾಂಧವರು ಲಾಕ್‌ಡೌನ್ ನೆಪವೊಡ್ಡಿ ಅಂತ್ಯಸಂಸ್ಕಾರದಲ್ಲಿ ಪಾಲ್ಗೊಳ್ಳಲು ನಿರಾಕರಿಸಿದರು. ಆದರೆ ಅಂತ್ಯಸಂಸ್ಕಾರಕ್ಕೆ ಅಗತ್ಯವಾದಷ್ಟು ಸಂಖ್ಯೆಯಲ್ಲಿ ಬಂದ ಮುಸ್ಲಿಂ ಸಮುದಾಯದವರು, ಮಾರ್ಗದುದ್ದಕ್ಕೂ ರಾಮ್ ನಾಮ್ ಸತ್ಯ ಹೈ ಎಂದು ಹೇಳುತ್ತಾ ಶವವನ್ನು ಸಾಗಿಸಿ, ಅಂತ್ಯಸಂಸ್ಕಾರ ನೆರವೇರಿಸಲು ನೆರವಾದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net