ಮಸ್ಕಿ ರಾಜರಾಜೇಶ್ವರಿ ಉಪಪ್ರತಿಷ್ಠೆ: ಡಿಕೆಶಿಗೆ ಮೊದಲ ಪರೀಕ್ಷೆ | ಮೈತ್ರಿ ಸುಳಿವಿಲ್ಲ | ಆಡಳಿತಾರೂಢ ಬಿಜೆಪಿಗೂ ಸವಾಲು

BJP Congress JDS For Web 6x4
Published on

ಬೆಂಗಳೂರು: ರಾಯಚೂರು ಜಿಲ್ಲೆ ಮಸ್ಕಿ ಹಾಗೂ ಬೆಂಗಳೂರಿನ ರಾಜರಾಜೇಶ್ವರಿನಗರ ವಿಧಾನ ಸಭಾ ಕ್ಷೇತ್ರಗಳ ಉಪಚುನಾವಣೆ ಮೇಲೆ ಎರಡೂ ರಾಷ್ಟ್ರೀಯ ಪಕ್ಷಗಳು ಚಿತೆôಸಿವೆ. ಏಪ್ರಿಲ್ 3ನೇ ವಾರದಲ್ಲಿ ಚುನಾವಣೆ ಯಾವಾಗ ಎಂಬುದು ಸ್ಪಷ್ಟವಾಗಲಿದ್ದು, ಅಷ್ಟರೊಳಗೆ ಪೂರ್ವತಯಾರಿ ಮುಗಿಸಿಕೊಳ್ಳುವ ಆಲೋಚನೆಯಲ್ಲಿವೆ.

ಚುನಾವಣೆ ತಕರಾರು ಅರ್ಜಿ ಬಾಕಿ ಇದ್ದರೂ ರಾಜರಾಜೇಶ್ವರಿನಗರ ಉಪಚುನಾವಣೆ ನಡೆಸಲು ಚುನಾವಣೆ ಆಯೋಗಕ್ಕೆ ಇದ್ದ ಕಾನೂನು ತೊಡಕು ನಿವಾರಣೆಯಾಗಿದೆ ಎಂಬ ವಿಶ್ಲೇಷಣೆ ಇದೆ. ಹೀಗಾಗಿ ಚುನಾವಣೆ ಆಯೋಗ ಸಾಧಕ-ಬಾಧಕ ಗಮನಿಸಿ ಪ್ರಕ್ರಿಯೆ ಮುಂದುವರಿಸುವ ಸಾಧ್ಯತೆಯೂ ಇದೆ. ಈ ಮಾಹಿತಿ ಆಧರಿಸಿಯೇ ತಕ್ಷಣದಿಂದಲೇ ಕಾಂಗ್ರೆಸ್ ಮತ್ತು ಬಿಜೆಪಿ ಚುರುಕಾಗಿವೆ. ಇದೀಗ ಅಭ್ಯರ್ಥಿ ಆಯ್ಕೆಗೆ ಕಾಂಗ್ರೆಸ್ ಸಮಿತಿ ರಚಿಸಿದರೆ, ಅನರ್ಹ ಶಾಸಕರಿಗೆ ಬಿಜೆಪಿ ಟಿಕೆಟ್ ಖಾತ್ರಿಪಡಿಸಿದೆ.

ಈ 2 ಕ್ಷೇತ್ರದ ಚುನಾವಣೆ ಫಲಿತಾಂಶ ರಾಜ್ಯ ರಾಜಕೀಯದ ಏರುಪೇರಿಗೆ ಕಾರಣವಾಗದಿರಬಹುದು. ಆದರೆ ರಾಜಕೀಯ ಪಕ್ಷಗಳಿಗೆ, ರಾಜಕೀಯ ನಾಯಕರಿಗೆ ಪ್ರತಿಷ್ಠೆಯಂತೂ ಹೌದು. ಡಿ.ಕೆ.ಶಿವಕುಮಾರ್ ಕೆಪಿಸಿಸಿ ಚುಕ್ಕಾಣಿ ಹಿಡಿದಿದ್ದಾರೆ. ಸಂಘಟನೆಯನ್ನು ಹಿಡಿತಕ್ಕೆ ತೆಗೆದುಕೊಳ್ಳುವ ಮುನ್ನವೇ ಚುನಾವಣೆ ಎದುರಾಗಿದೆ. ಮಸ್ಕಿ ಮತ್ತು ಆರ್​ಆರ್ ನಗರ ಕ್ಷೇತ್ರಗಳು 2018ರ ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್ ಪಾಲಾಗಿದ್ದವು. ಅಲ್ಲಿ ಗೆದ್ದವರು ಬಿಜೆಪಿ ಅಪ್ಪಿದ್ದಾರೆ. ಇಂಥ ಸಂದರ್ಭದಲ್ಲಿ ಪಕ್ಷವನ್ನು ಗೆಲ್ಲಿಸಿ ಕ್ಷೇತ್ರ ಉಳಿಸಿಕೊಳ್ಳುವ ಮೂಲಕ ಆಡಳಿತ ಪಕ್ಷಕ್ಕೆ ಸಾಮರ್ಥ್ಯ ತೋರಿಸುವ ಅನಿವಾರ್ಯತೆಯಲ್ಲಿ ಡಿಕೆಶಿ ಇದ್ದಾರೆ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡರಷ್ಟೇ ಉದ್ದೇಶಿತ ಗುರಿ ಮುಟ್ಟಬಹುದು ಎಂಬುದಷ್ಟು ಸ್ಪಷ್ಟವಾಗಿ ಅರಿತ ಡಿಕೆಶಿ, ಈಗಾಗಲೇ ಹಿರಿಯ ನಾಯಕರನ್ನು ಸರತಿಯಲ್ಲಿ ಮಾತನಾಡಿಸಿದ್ದಾರೆ. ಅಲ್ಲದೆ, ಉಪಚುನಾವಣೆಯ ಅಭ್ಯರ್ಥಿ ಆಯ್ಕೆಗೆ ಜವಾಬ್ದಾರಿಯನ್ನೂ ನೀಡಿದ್ದಾರೆ. ಈ ಮೂಲಕ ಚುನಾವಣೆಗೆ ಎಷ್ಟು ಪ್ರಾಮುಖ್ಯತೆ ನೀಡುತ್ತಿದ್ದೇವೆಂಬುದನ್ನು ಎದುರಾಳಿಗೆ ಸ್ಪಷ್ಟಪಡಿಸಿದ್ದಾರೆ. ಇತ್ತ ಬಿಜೆಪಿ ಪಾಳಯದಲ್ಲಿ ಎರಡೂ ಕ್ಷೇತ್ರಗಳಿಗೆ ಅಭ್ಯರ್ಥಿ ಹುಡುಕುವ ಕೆಲಸವಿಲ್ಲ. ಮಸ್ಕಿಯಿಂದ ಪ್ರತಾಪ್ ಗೌಡ ಮತ್ತು ಆರ್​ಆರ್ ನಗರದಿಂದ ಮುನಿರತ್ನ ಹೆಸರು ಬಹುತೇಕ ಅಂತಿಮಗೊಂಡಂತೆ. ಕ್ಷೇತ್ರದಲ್ಲಿ ಶಾಸಕರಿಲ್ಲದಿದ್ದರೂ ಸರ್ಕಾರ ಬಂದಾಗಿನಿಂದಲೂ ನೂರಾರು ಕೋಟಿ ರೂ. ಅಲ್ಲಿಗೆ ಹರಿದಿದೆ. ಕಾಮಗಾರಿಯ ಸದ್ದು ಕ್ಷೇತ್ರದ ಜನರಿಗೆ ಕೇಳಿಸುವಂತೆ ನೋಡಿಕೊಳ್ಳಲಾಗಿದೆ.

ಮೈತ್ರಿ ಆಪರೇಷನ್?

ಜೆಡಿಎಸ್ ಜತೆ ಸೇರಿ ಚುನಾವಣೆ ಎದುರಿಸಿದರೆ ಎರಡೂ ಕ್ಷೇತ್ರದಲ್ಲಿ ಬಿಜೆಪಿಗೆ ಸೆಡ್ಡು ಹೊಡೆಯಲು ಸಾಧ್ಯವಿದೆ ಎಂಬ ಅಭಿಪ್ರಾಯ ಕಾಂಗ್ರೆಸ್ ನಾಯಕರಲ್ಲಿದೆ. ಪ್ರಸ್ತುತ ಡಿ.ಕೆ.ಶಿವಕುಮಾರ್ ಮತ್ತು ದೇವೇಗೌಡರ ಕುಟುಂಬದ ನಡುವೆ ಒಳ್ಳೆಯ ಬಾಂಧ್ಯವೂ ಇದೆ. ಹೀಗಾಗಿ ಉಪಚುನಾವಣೆಯಲ್ಲಿ ಜೆಡಿಎಸ್ ಮನವೊಲಿಸುವುದು ಕಷ್ಟವೇನಲ್ಲ, ಅವರ ಬೆಂಬಲ ಪಡೆದು ಚುನಾವಣೆ ಎದುರಿಸಿದರೆ, ಪಕ್ಷಕ್ಕೆ ಲಾಭವೂ ಆಗಲಿದೆ ಎಂದು ಕಾಂಗ್ರೆಸ್ ನಾಯಕರೊಬ್ಬರು ಅಭಿಪ್ರಾಯ ಪಟ್ಟಿದ್ದಾರೆ. ಮಸ್ಕಿಯಲ್ಲಿ ಕಳೆದ ಬಾರಿ ಬಿಜೆಪಿಯಿಂದ ಸ್ಪರ್ಧಿಸಿದ್ದ ಬಸನಗೌಡ ತುರುವಿಹಾಳ ಅವರನ್ನು ಕಾಂಗ್ರೆಸ್​ಗೆ ತರಬೇಕೆಂಬ ಅನಿಸಿಕೆಗಳು ಪಕ್ಷದಲ್ಲಿ ವ್ಯಕ್ತವಾಗಿದೆ. ಅವರು 213 ಮತಗಳಿಂದಷ್ಟೇ ಸೋತಿದ್ದರು. ಮಸ್ಕಿ ಕ್ಷೇತ್ರದಲ್ಲಿ ಜೆಡಿಎಸ್ 11392 ಮತ ಗಳಿಸಿದ್ದರೆ, ರಾಜರಾಜೇಶ್ವರಿ ನಗರದಲ್ಲಿ ಒಕ್ಕಲಿಗರ ಪ್ರಾಬಲ್ಯವಿದ್ದು 60 ಸಾವಿರ ಮತ ಪಡೆದಿತ್ತು ಮತ್ತು ಕಾಂಗ್ರೆಸ್​ನ ಗೆಲುವಿನ ಅಂತರ 25 ಸಾವಿರ ಮತಗಳು. ಇಲ್ಲಿ ಬಿಜೆಪಿಗೆ ನಾಯಕತ್ವದ ಕೊರತೆ ಇದೆ.

ಬಿಎಸ್​ವೈ ಭೇಟಿ ಮಾಡಿದ ಮುನಿರತ್ನ

ರಾಜಾರಾಜೇಶ್ವರಿನಗರ ಕ್ಷೇತ್ರದ ಬಗ್ಗೆ ನ್ಯಾಯಾಲಯ ತೀರ್ಪು ನೀಡಿರುವ ಹಿನ್ನೆಲೆ ಉಪಚುನಾವಣೆ ಹಾದಿ ಸುಗಮವಾದ ಬೆನ್ನಲ್ಲಿಯೇ ಮುನಿರತ್ನ, ಸಿಎಂ ಯಡಿಯೂರಪ್ಪ ಭೇಟಿ ಮಾಡಿ ರ್ಚಚಿಸಿದರು. ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಮುನಿರತ್ನ, ಕೋರ್ಟ್ ತೀರ್ಪಿನ ಬಗ್ಗೆ ಸಿಎಂ ಗಮನಕ್ಕೆ ತಂದಿದ್ದೇನೆ ಎಂದರು. ‘ತೀರ್ಪ ಏನು ಬರುತ್ತೋ ಬರಲಿ. ನಿನ್ನ ಜತೆ ನಾನಿದ್ದೀನಿ’ ಅಂತ ಸಿಎಂ ಭರವಸೆ ಕೊಟ್ಟಿದ್ದರು. ಅವರು ಹಾಗೆಯೇ ನಡೆದುಕೊಂಡರು. ರಾಜೀನಾಮೆ ಕೊಟ್ಟರೂ ಕ್ಷೇತ್ರದ ಅಭಿವೃದ್ಧಿಗೆ ಪೋ›ತ್ಸಾಹ ಕೊಡುತ್ತಿದ್ದ ಸಿಎಂ ಅವರಿಗೆ ಧನ್ಯವಾದ ಹೇಳಲು ಬಂದಿದ್ದೆ ಎಂದು ಹೇಳಿದರು. ನ್ಯಾಯಾಲಯದ ತೀರ್ಪು ಸಂತೋಷ ತಂದಿದೆ. ಚುನಾವಣೆಗೆ ಸಿದ್ಧವಾಗಬೇಕು, ಆ ನಿಟ್ಟಿನಲ್ಲಿ ಕೆಲಸ ಮಾಡುತ್ತಿ್ತ್ದೇನೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಯಾವ ಕ್ಷೇತ್ರಕ್ಕೆ ಯಾರು?

ರಾಜರಾಜೇಶ್ವರಿನಗರ

ಕಾಂಗ್ರೆಸ್: ರಾಜ್​ಕುಮಾರ್, ಹನುಮಂತರಾಯಪ್ಪ, ಪ್ರಿಯಕೃಷ್ಣ. ಬಿಜೆಪಿ: ಮುನಿರತ್ನ

ಮಸ್ಕಿ

ಕಾಂಗ್ರೆಸ್: ಬಿ.ವಿ.ನಾಯ್್ಕ ಹಂಪಯ್ಯನಾಯ್ಕ್

ಬಿಜೆಪಿ: ಪ್ರತಾಪಗೌಡ ಪಾಟೀಲ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net