'ನನ್ನನ್ನೂ ಹತ್ಯೆ ಮಾಡುವುದಾಗಿ ಹೆದರಿಸಿದ್ದರು': ಎಲೋನ್ ಮಸ್ಕ್

musk
Published on

ನ್ಯೂಯಾರ್ಕ್: ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಮೇಲೆ ಗುಂಡಿನ ದಾಳಿ ನಡೆದ ಬೆನ್ನಲ್ಲೇ ಟೆಸ್ಲಾ ಮುಖ್ಯಸ್ಥ ಎಲೋನ್ ಮಸ್ಕ್ ಸಾಮಾಜಿಕ ಮಾಧ್ಯಮದಲ್ಲಿ ನನಗೂ ಜೀವಬೆದರಿಕೆ ಹಾಕಲಾಗುತ್ತಿದೆ ಎಂದು ಮಾಡಿದ ಪೋಸ್ಟ್ ವೈರಲ್ ಆಗಿದೆ.

ನೆಟಿಜನ್ ಒಬ್ಬರು ಎಲೋನ್ ಮಸ್ಕ್ ಅವರ ಸುರಕ್ಷತೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. "ದಯವಿಟ್ಟು ನಿಮ್ಮ ಭದ್ರತೆಯನ್ನು ಮೂರು ಪಟ್ಟು ಹೆಚ್ಚಿಸಿಕೊಳ್ಳಿ, ಏಕೆಂದರೆ ಕೊಲೆಗಡುಕರು ಟ್ರಂಪ್‌ ಹತ್ಯೆಗೆ ಯತ್ನಿಸಿದಂತೆಯೇ ನಿಮ್ಮ ಬಳಿಗೂ ಬರಬಹುದು" ಎಚ್ಚರಿಸಿದ್ದು, ಈ ಪೋಸ್ಟ್‌ಗೆ ಮಸ್ಕ್ ಪ್ರತಿಕ್ರಿಯಿಸಿದ್ದಾರೆ.

"ಹೌದು ಅಪಾಯಕಾರಿ ಸಮಯಗಳು ಬರಲಿವೆ. ಕಳೆದ ಎಂಟು ತಿಂಗಳಲ್ಲಿ ನನಗೆ ಎರಡು ಬೆದರಿಕೆ ಬಂದಿವೆ. ದುಷ್ಕರ್ಮಿಗಳನ್ನು ಟೆಕ್ಸಾಸ್‌ನಲ್ಲಿ ಬಂಧಿಸಲಾಗಿದೆ" ಎಂದು ಮಸ್ಕ್ ಪ್ರತಿಕ್ರಿಯಿಸಿದ್ದಾರೆ.

ಟ್ರಂಪ್ ಮೇಲಿನ ದಾಳಿಗೆ ಪ್ರತಿಕ್ರಿಯಿಸಿದ ಮಸ್ಕ್, 'ಟ್ರಂಪ್ ಶೀಘ್ರ ಗುಣಮುಖರಾಗಲಿ ಎಂದು ಹಾರೈಸುತ್ತೇನೆ ಎಂದಿದ್ದಾರೆ.

ಅಮೆರಿಕಾ ಅಧ್ಯಕ್ಷೀಯ ಚುನಾವಣೆ ಹಿನ್ನೆಲೆಯಲ್ಲಿ ಡೊನಾಲ್ಡ್ ಟ್ರಂಪ್ ಅವರ ಪ್ರಚಾರಕ್ಕೆ ಎಲೋನ್ ಮಸ್ಕ್ ದೊಡ್ಡ ಮೊತ್ತವನ್ನು ದೇಣಿಗೆ ನೀಡಿದ್ದಾರೆ ಎಂದು ಅಂತರರಾಷ್ಟ್ರೀಯ ಸುದ್ದಿ ಸಂಸ್ಥೆಗಳು ವರದಿ ಮಾಡಿದ್ದವು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net