19ಕ್ಕೆ ವೆಂಕಟೇಶಕುಮಾರ್, ರಫೀಕ್ ಖಾನ್ ಸಂಗೀತ; ಎಂ.ಎಸ್. ಬಿಲ್ಡಿಂಗ್​ನ ಸರ್ಕಾರಿ ನೌಕರರ ಸಂಘದ ಸಭಾಂಗಣದಲ್ಲಿ ಆಯೋಜನೆ

Sangeetha-Sanje
Published on

ಬೆಂಗಳೂರು: ಕನ್ನಡದ ನಂ.1 ದಿನಪತ್ರಿಕೆ ವಿಜಯವಾಣಿ ಹಾಗೂ ದಿಗ್ವಿಜಯ ನ್ಯೂಸ್ ಸಹಭಾಗಿತ್ವದಲ್ಲಿ ಭಾನುವಾರ (ಫೆ.19) ಸಂಗೀತ ಸಂಜೆ ಆಯೋಜನೆ ಮಾಡಲಾಗಿದ್ದು ಪದ್ಮಶ್ರೀ ಪಂಡಿತ್ ವೆಂಕಟೇಶಕುಮಾರ್, ಪ್ರಸಿದ್ಧ ಸಿತಾರ್ ವಾದಕ ಉಸ್ತಾದ್ ರಫೀಕ್ ಖಾನ್ ಸೇರಿ ಹೆಸರಾಂತ ಸಂಗೀತಗಾರರು ಪಾಲ್ಗೊಳ್ಳಲಿದ್ದಾರೆ.

ಕಬ್ಬನ್​ಪಾರ್ಕ್ ಎದುರಿಗಿರುವ ಎಂ.ಎಸ್. ಬಿಲ್ಡಿಂಗ್​ನ ರಾಜ್ಯ ಸರ್ಕಾರಿ ಉದ್ಯೋಗಿಗಳ ಸಂಘದ ಸಭಾಂಗಣದಲ್ಲಿ ಅಂದು ಸಂಜೆ 5 ಗಂಟೆಗೆ ಕಾರ್ಯಕ್ರಮ ಆರಂಭವಾಗಲಿದೆ. ಉಸ್ತಾದ್ ರಫೀಕ್ ಖಾನ್ ಹಾಗೂ ಅಂಕುಶ್ ನಾಯಕ್ ಅವರ ಸಿತಾರ್ ಜುಗಲಬಂಧಿ ನಡೆಯಲಿದ್ದು, ಪಂ. ರಾಜೇಂದ್ರ ನಾಕೋಡ್ ತಬಲಾ ಸಾಥ್ ನೀಡುವರು. ನಂತರ ಪಂ. ವೆಂಕಟೇಶಕುಮಾರ್ ಗಾನಸುಧೆ ಹರಿಸಲಿದ್ದಾರೆ. ಅವರಿಗೆ ನರೇಂದ್ರ ನಾಯಕ್ ಹಾರ್ವೆನಿಯಂ ಹಾಗೂ ಕೇಶವ್ ಜೋಶಿ ತಬಲಾ ಸಾಥ್ ನೀಡುವರು. ಕಾರ್ಯಕ್ರಮಕ್ಕೆ ಉಚಿತ ಪ್ರವೇಶವಿದೆ.

ಸಂರ್ಪಸಿ: ಕಾರ್ಯಕ್ರಮದ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಶಿವಮೂರ್ತಿ- 8884432389, ಸದಾಶಿವ್- 6363933258, ಅಖಿಲೇಶ್- 9986172645 ಅವರನ್ನು ಸಂರ್ಪಸಬಹುದು.

ನೋಂದಣಿ ಹೇಗೆ?

ಕಾರ್ಯಕ್ರಮದಲ್ಲಿ ಭಾಗವಹಿಸಲು ಇಚ್ಛಿಸುವವರು ಈ ಕೆಳಗಿನ ಲಿಂಕ್ ಕ್ಲಿಕ್ಕಿಸಿ ಈಗಲೇ ಉಚಿತವಾಗಿ ನೋಂದಣಿ ಮಾಡಿಕೊಳ್ಳಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net