25ರಂದು ಭರತೇಶ ಶಿಕ್ಷಣ ಸಂಸ್ಥೆಯಲ್ಲಿ ಸಂಗೀತ ಸಂಜೆ

IMG20250117101037.jpg
Published on

ಬೆಳಗಾವಿ: ಕಳೆದ 65 ವರ್ಷಗಳಿಂದ ಉತ್ತರ ಕರ್ನಾಟಕದ ಶೈಕ್ಷಣಿಕ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ಭರತೇಶ ಶಿಕ್ಷಣ ಸಂಸ್ಥೆಯಿಂದ ಜ.25 ರಂದು ಸಂಜೆ 4 ಗಂಟೆಗೆ ಬಸವನ ಕುಡಚಿಯ ಚಂದ್ರಗಿರಿಯ ಕ್ಯಾಂಪಸ್‌ನಲ್ಲಿ ಖ್ಯಾತ ಸಂಗೀತಗಾರರಿಂದ ಸಂಗೀತ ಸಂಜೆ ಆಯೋಜಿಸಲಾಗಿದೆ ಎಂದು ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ವಿನೋದ ದೊಡ್ಡಣ್ಣವರ ತಿಳಿಸಿದರು.

ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಸಂಗೀತ ಸಂಜೆಗೆ ‘ವೈಬ್ಸ್’ ಹೆಸರಿಡಲಾಗಿದ್ದು, ಹಿನ್ನೆಲೆ ಗಾಯಕ ಶಂಕರ್ ಮಹಾದೇವನ್ ಅವರ ಪುತ್ರರಾದ ಶಿವಂ ಮತ್ತು ಸಿದ್ದಾರ್ಥ ಸಂಗೀತ ಸಂಜೆ ನಡೆಸಿಕೊಡಲಿದ್ದಾರೆ. ಸಂಗೀತ ಸಂಜೆಯಲ್ಲಿ ಶಾಸ್ತ್ರೀಯ ಸಂಗೀತ, ಹಿಂದೂಸ್ಥಾನಿ ಸಂಗೀತ, ರಾಕ್, ಬಾಲಿವುಡ್ ಸಂಗೀತದ ರಸದೌತಣ ನೀಡುವರು. ಕಳೆದ ಸಾಲಿನಲ್ಲಿಯೂ ಸಾಚೇತ ಅವರ ಸಂಗೀತ ಸಂಜೆ ಆಯೋಜಿಸಲಾಗಿತ್ತು. ಈ ಬಾರಿಯ ಸಂಗೀತ ಕಾರ್ಯಕ್ರಮ ಯುವ ವರ್ಗಕ್ಕೆ ಹೊಸ ಪ್ರೇರಣೆ ನೀಡಲಿದೆ ಎಂದರು.

ಕಾರ್ಯಕ್ರಮವನ್ನು ಚಂದುಕಾಕಾ ಸರಾಫ್ ಜುವೆಲ್ಸ್ ಮತ್ತು ಐಟಿಸಿ ವೆಲಕಮ್ ಗ್ರುಫ್ ಪ್ರಾಯೋಜಿಸಿದ್ದಾರೆ ಎಂದು ತಿಳಿಸಿದರು. ಭಾಗವಹಿಸುವ ಸಾರ್ವಜನಿಕರು ಭರತೇಶ ಶಿಕ್ಷಣ ಸಂಸ್ಥೆಯ ಅಂಗ ಸಂಸ್ಥೆಗಳನ್ನು ಸಂಪರ್ಕಿಸಬಹುದು ಅಥವಾ ಮೊ: 9071021777ಗೆ ಸಂಪರ್ಕಿಸಿ ಪ್ರವೇಶ ಪತ್ರಗಳನ್ನು ಪಡೆಯಬಹುದು ಎಂದು ತಿಳಿಸಿದರು.

ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷ ಶ್ರೀಪಾಲ ಖೆಮಲಾಪುರೆ, ಆಡಳಿತ ಮಂಡಳಿ ಸದಸ್ಯ ಹೀರಾಚಂದ ಕಲಮನಿ, ಡಾ. ಸಾವಿತ್ರಿ ದೊಡ್ಡಣ್ಣವರ, ಅನುಪಮಾ ಶಿರಹಟ್ಟಿ, ಕೀರ್ತಿ ದೊಡ್ಡಣ್ಣವರ ಸುದ್ದಿಗೋಷ್ಠಿಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net