

ಕಾರವಾರ: ಮುರುಡೇಶ್ವರದಲ್ಲಿ ಸಮುದ್ರ ಪಾಲಾಗಿದ್ದ ಮೂವರು ವಿದ್ಯಾರ್ಥಿನಿಯರ ಮೃತದೇಹ ಪತ್ತೆಯಾಗಿವೆ. ಮೂಲಗಳ ಪ್ರಕಾರ ಕೋಲಾರ ಜಿಲ್ಲೆಯ ಮುಳಬಾಗಲಿನ ಕೊತ್ತೂರಿನ ಮುರಾರ್ಜಿ ದೇಸಾಯಿ ಶಾಲೆಯ ಸುಮಾರು 50 ವಿದ್ಯಾರ್ಥಿಗಳು ಮಂಗಳವಾರ ವಿಹಾರಕ್ಕೆಂದು ಮುರ್ಡೇಶ್ವರಕ್ಕೆ ಆಗಮಿಸಿದ್ದರು.
ಅವರಲ್ಲಿ, ಹತ್ತು ಹುಡುಗಿಯರು ಅಲೆಗಳೊಂದಿಗೆ ಆಟವಾಡಲು ಸಮುದ್ರವನ್ನು ಇಳಿದಿದ್ದಾರೆ. ಪ್ರವೇಶಿಸಿದರು ಆದರೆ ಪ್ರಬಲವಾದ ಸಮುದ್ರದ ಅಲೆಕೆ ಸಿಕ್ಕಿಬಿದ್ದು ದಡ ಸೇರಲು ಹರ ಸಾಹಸ ಪಟ್ಟಿದ್ದಾರೆ. ತಕ್ಷಣ ಅಲ್ಲಿದ್ದ ಸ್ಥಳೀಯ ಮೀನುಗಾರರು ಆಗಮಿಸಿ ನಾಲ್ವರು ವಿದ್ಯಾರ್ಥಿನಿಯರನ್ನ ರಕ್ಷಿಸಿದ್ದಾರೆ. ನಂತರ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು
ದೀಕ್ಷಾ (15), ಲಾವಣ್ಯ (15) ಹಾಗೂ ವಂದನಾ (15) ಮೃತದೇಹಗಳು ಪತ್ತೆಯಾಗಿವೆ. ಮುರುಡೇಶ್ವರದ ನವೀನ್ ಬೀಚ್ ರೆಸಾರ್ಟ್ ಬಳಿಯ ಸಮುದ್ರದಲ್ಲಿ ಎರಡು ಹಾಗೂ ಅಳವೆ ಕೋಡಿಯಲ್ಲಿ ಒಂದು ಪತ್ತೆಯಾಗಿವೆ.
ಮೃತದೇಹವನ್ನು ಬೋಟ್ ಮೂಲಕ ದಡಕ್ಕೆ ತರಲಾಯಿತು. ಮಂಗಳವಾರ ಸಮುದ್ರದಲ್ಲಿ ಏಳು ವಿದ್ಯಾರ್ಥಿನಿಯರು ನೀರು ಪಾಲಾಗಿದ್ದರು. ಆ ಪೈಕಿ ಮೂವರನ್ನು ಲೈಫ್ ಗಾರ್ಡ್ಸ್ ಸಿಬ್ಬಂದಿ ರಕ್ಷಣೆ ಮಾಡಿದ್ರೆ, ಶ್ರಾವಂತಿ ಎಂಬಾಕೆ ಸಾವನ್ನಪ್ಪಿದ್ದಳು.