ಪಿಜಿ ಬಾಣಸಿಗನ ಕೊಲೆ; ತಾಯಿ ಜತೆಗೆ ಸ್ನೇಹ ಹೊಂದಿದ್ದ ಶಂಕೆ ಮೇಲೆ ಮಗನಿಂದ ಕೃತ್ಯ

ravi
Published on

ಬೆಂಗಳೂರು : ತಾಯಿ ಜೊತೆಗೆ ಅಕ್ರಮ ಸಂಬಂಧ ಹೊಂದಿರುವ ಬಗ್ಗೆ ಅನುಮಾನಪಟ್ಟು ಪೇಯಿಂಗ್ ಗೆಸ್ಟ್ ಬಾಣಸಿಗನನ್ನು ಮನೆಗೆ ಕರೆಸಿಕೊಂಡು ಯುವಕ ಕೊಲೆ ಮಾಡಿದ್ದಾನೆ.

ರಾಜಾಜಿನಗರದ ಪೇಯಿಂಗ್ ಗೆಸ್ಟ್ ಬಾಣಸಿಗ ರವಿ ಭಂಡಾರಿ(44) ಕೊಲೆಯಾದ ಬಾಣಸಿಗ. ಈತನ ಕೊಲೆ ಮಾಡಿದ ರಾಹುಲ್ (24) ಎಂಬಾತನ ಬಂಧನಕ್ಕೆ ಬಲೆಬೀಸಲಾಗಿದೆ ಎಂದು ಪಶ್ಚಿಮ ವಿಭಾಗ ಡಿಸಿಪಿ ಲಕ್ಷ್ಮಣ್ ನಿಂಬರಗಿ ಮಾಹಿತಿ ನೀಡಿದ್ದಾರೆ.

ಹೊನ್ನಾವರ ಮೂಲದ ರವಿ ಭಂಡಾರಿ, ಪತ್ನಿ ಮತ್ತು ಇಬ್ಬರು ಮಕ್ಕಳ ಜತೆಗೆ ನೆಲೆಸಿದ್ದರು. ಕೆಲಸ ಮಾಡದೆ ಮದ್ಯ ವ್ಯಸನಿಯಾಗಿದ್ದರು. ಮತ್ತೊಂದೆಡೆ ರಾಜಾಜಿನಗರದಲ್ಲಿ ಹಲವು ವರ್ಷಗಳಿಂದ ಪೇಯಿಂಗ್ ಗೆಸ್ಟ್ ನಡೆಸುತ್ತಿದ್ದ ಸುರೇಶ್ ಭಂಡಾರಿ, ತಮ್ಮ ಚಿಕ್ಕಪ್ಪ ರವಿ ಭಂಡಾರಿಯನ್ನು ಒಂದೂವರೆ ತಿಂಗಳ ಹಿಂದೆ ರವಿ ಭಂಡಾರಿಯನ್ನು ಕರೆತಂದು ಪಿಜಿಯಲ್ಲಿ ಅಡುಗೆ ಕೆಲಸಕ್ಕೆ ಇಟ್ಟುಕೊಂಡಿದ್ದ.

ಕಲುಬುರಗಿ ಮೂಲದ ಪದ್ಮಾವತಿ ದಂಪತಿ ಪುತ್ರ ರಾಹುಲ್ ಜೊತೆಗೆ ನೌಕರಿ ಅರಸಿ ಬೆಂಗಳೂರಿಗೆ ಬಂದು ಗೋಪಾಲಪುರದಲ್ಲಿ ನೆಲೆಸಿದ್ದರು. ಹಲವು ವರ್ಷಗಳಿಂದ ಸುರೇಶ್ ಭಂಡಾರಿ ಪಿಜಿಯಲ್ಲಿ ಪದ್ಮಾವತಿ ಕೆಲಸ ಮಾಡುತ್ತಿದ್ದಳು. 1 ವರ್ಷದ ಹಿಂದೆ ಪತಿ ಅಸುನೀಗಿದ್ದ.

ರಾಹುಲ್, ಆ್ಯಪ್ ಆಧರಿತ ಕ್ಯಾಬ್ ಓಡಿಸುತ್ತಿದ್ದ. ಪಿಜಿಗೆ ಇತ್ತೀಚೆಗೆ ಬಂದಿದ್ದ ರವಿ ಭಂಡಾರಿ ಜತೆಗೆ ಪದ್ಮಾವತಿ ಸ್ನೇಹ ಬೆಳೆಸಿದ್ದಳು. ಈ ವಿಚಾರ ರಾಹುಲ್‌ಗೆ ತಿಳಿದು ಇಬ್ಬರಿಗೂ ಎಚ್ಚರಿಕೆ ಕೊಟ್ಟಿದ್ದ. ಆದರೂ ಸರಿದಾರಿಗೆ ಬಂದಿರಲಿಲ್ಲ.

ಇದೆ ಕೋಪಕ್ಕೆ ರಾಹುಲ್, ಶುಕ್ರವಾರ ಮಧ್ಯಾಹ್ನ 3.30ರಲ್ಲಿ ರವಿ ಭಂಡಾರಿಗೆ ೆನ್ ಕರೆ ಮಾಡಿ ತನ್ನ ಮನೆಗೆ ಕರೆಸಿಕೊಂಡಿದ್ದಾನೆ. ತಾಯಿ ವಿಚಾರಕ್ಕೆ ಮಾತಿಗೆ ಮಾತು ಬೆಳೆದು ಚಾಕುವಿನಿಂದ ರವಿ ಭಂಡಾರಿ ಮೇಲೆ ಹಲ್ಲೆ ನಡೆಸಿ ಕೊಲೆ ಮಾಡಿದ್ದಾನೆ. ಆನಂತರ ರಾಹುಲ್, ತನ್ನ ಅಕ್ಕನಿಗೆ ಕರೆ ಮಾಡಿ ವಿಷಯ ತಿಳಿಸಿ ಮೊಬೈಲ್ ಆ್ ಮಾಡಿಕೊಂಡು ತಲೆಮರೆಸಿಕೊಂಡಿದ್ದಾನೆ.

ಮಗಳ ಕಡೆಯಿಂದ ವಿಷಯ ತಿಳಿದ ಪದ್ಮಾವತಿ, ಪಿಜಿ ಮಾಲೀಕ ಸುರೇಶ್ ಭಂಡಾರಿಗೆ ವಿಷಯ ತಿಳಿಸಿ ಅವರೊಂದಿಗೆ ಮನೆಗೆ ಬಂದು ನೋಡಿದಾಗ ರಕ್ತದ ಮಡುವಿನಲ್ಲಿ ರವಿ ಭಂಡಾರಿ ಸತ್ತು ಬಿದ್ದಿರುವುದು ಕಂಡುಬಂದಿದೆ. ಈ ಸಂಬಂಧ ಸುರೇಶ್ ಭಂಡಾರಿ ಕೊಟ್ಟ ದೂರಿನ ಮೇರೆಗೆ ಮಾಗಡಿ ರಸ್ತೆ ಪೊಲೀಸರು ಕೊಲೆ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net