ಮದುವೆ ಮಾಡಿಕೊಡುವಂತೆ ಧಮ್ಕಿ ಹಾಕಿದವನ ಕೊಲೆ

klr usman
ಉಸ್ಮಾನ್
Published on

ಕೋಲಾರ: ನಗರದಲ್ಲಿ ಶನಿವಾರ ರಾತ್ರಿ ಪ್ರೇಯಸಿ ಮನೆಗೆ ಹೋಗಿ ಬರುತ್ತಿದ್ದ ಯುವಕನನ್ನು ಯುವತಿಯ ಮನೆಯವರು ಅಟ್ಟಾಡಿಸಿ ಕೊಲೆ ಮಾಡಿದ್ದಾರೆ. ನೂರ್​ ನಗರದ ನಿವಾಸಿ ಉಸ್ಮಾನ್​ (32) ಮೃತ.

ಏನಿದು ಟನೆ: ಉಸ್ಮಾನ್​ ಐದು ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾಗಿದ್ದ. ಆದರೆ, ಪತ್ನಿಗೆ ಅನಾರೋಗ್ಯ ಕಾಣಿಸಿಕೊಂಡಿತ್ತು. ಈ ವೇಳೆ ಪತ್ನಿಯ ಆರೋಗ್ಯ ವಿಚಾರಿಸಲು ಬಂದಿದ್ದ ಪತ್ನಿ ಸಂಬಂಧಿ ಯುವತಿಯೊಂದಿಗೆ ಉಸ್ಮಾನ್​ಗೆ ಪ್ರೀತಿಯಾಗಿದೆ. ಈ ವಿಷಯ ತಿಳಿದು ಪತ್ನಿ ಪತಿ ವಿರುದ್ಧ ಮಹಿಳಾ ಠಾಣೆಗೆ ದೂರು ನೀಡಿದ್ದರು. ಆದರೂ ಪತಿಯ ವರ್ತನೆ ಬದಲಾಗದ ಹಿನ್ನೆಲೆಯಲ್ಲಿ ಪತಿಯಿಂದ ದೂರಾಗಿ ತವರು ಸೇರಿದ್ದರು.

ಶನಿವಾರ ರಾತ್ರಿ ಉಸ್ಮಾನ್​, ಪ್ರೀತಿಸುತ್ತಿದ್ದ ಯುವತಿ ಮನೆಗೆ ಹೋಗಿ ಕುಟುಂಬಸ್ಥರಿಗೆ ಬೇದರಿಕೆ ಹಾಕಿ, ಮಗಳನ್ನು ಮದುವೆ ಮಾಡಿಕೊಡಿ ಎಂದು ಕೂಗಾಡಿದ್ದು, ಈ ವೇಳೆ ಯುವತಿ ಕುಟುಂಸ್ಥರು ಹಾಗೂ ಉಸ್ಮಾನ್​ ನಡುವೆ ಜಗಳವಾಗಿದೆ. ಬಳಿಕ ಅಲ್ಲಿಂದ ಮನೆಗೆ ಹೊರಟಿದ್ದ ಉಸ್ಮಾನ್​ನನ್ನು ಹಿಂಬಾಲಿಸಿಕೊಂಡು ಬಂದ ಕುಟುಂಬಸ್ಥರು ನೂರ್​ ನಗರ ಸಮೀಪ ಹಿಡಿದು ಹಲ್ಲೆ ಮಾಡಿದ್ದಾರೆ. ಸ್ಥಳಿಯರು ಜಮಾಯಿಸುತ್ತಿದ್ದಂತೆ ಬಿಟ್ಟು ಹೋಗಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಗಾಯಾಳು ಉಸ್ಮಾನ್​ನನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದರಾದರೂ ಲಕಾರಿಯಾಗದೆ ರಾತ್ರಿ ಕೊನೆಯುಸಿರೆಳೆದಿದ್ದಾನೆ.

ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದ ಉಸ್ಮಾನ್​ ಆಗಾಗ ಕೋಲಾರಕ್ಕೆ ಬಂದು ಹೋಗುತ್ತಿದ್ದ ಎನ್ನಲಾಗಿದೆ. ಶನಿವಾರ ರಾತ್ರಿ ಅಟ್ಟಾಡಿಸಿ ಹೊಡೆದು ಕೊಲೆ ಮಾಡಲು ಯತ್ನಿಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ದೂರವಾಗಿದ್ದ ಪತ್ನಿ, ಪ್ರೀತಿಸುತ್ತಿದ್ದ ಯುವತಿ ಮನೆ ಹಾಗೂ ಉಸ್ಮಾನ್​ ಒಂದೇ ಬಡಾವಣೆಯವರಾಗಿದ್ದಾರೆ. ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಹಲ್ಲೆ ಕೋರರ ಬಂಧನಕ್ಕಾಗಿ ಶೋಧ ಕಾರ್ಯ ಮುಂದುವರಿದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net