8 ಕೋಟಿ ರೂ. ಮೌಲ್ಯದ ಆಸ್ತಿಗಾಗಿ ಪತಿಯನ್ನೇ ಕೊಲೆ ಮಾಡಿದ ಪತ್ನಿ! ಹೈದರಾಬಾದ್​​ನಲ್ಲಿ ಕೊಲೆ, ಕೊಡಗಿನಲ್ಲಿ ಶವ ಪತ್ತೆ | Murder

MURDER
Published on

ಬೆಂಗಳೂರು: ಹೈದರಬಾದ್​ನ ಉಪ್ಪಾಲ್​ ಪ್ರಾಂತ್ಯದಲ್ಲಿ 8 ಕೋಟಿ ರೂ. ಆಸ್ತಿಗಾಗಿ ಮಹಿಳೆ ತನ್ನ ಗಂಡನನ್ನು ಕೊಲೆ(Murder) ಮಾಡಿ ಕರ್ನಾಟಕ ಕೊಡಗಿನ ಎಸ್ಟೇಟ್​ ಒಂದರಲ್ಲಿ ಹೂತಿಟ್ಟ ಘಟನೆ ಬೆಳಕಿಗೆ ಬಂದಿದೆ.

ರಮೇಶ್ (54)​ ಕೊಲೆಯಾದ ವ್ಯಕ್ತಿ. ಪರಿ ರಮೇಶ್​​ನನ್ನು ಕೊಲೆ ಮಾಡಿದ​ ಮಹಿಳೆ ಪಿ.ನಿಹಾರಿಕಾ, ಆಕೆಯ ಸಹವರ್ತಿ ಡಾ.ನಿಖಿಲ್​ ಮತ್ತು ಅಂಕುರ್ ರಾಣಾ ಎಂಬವವರನ್ನು ಬಂಧಿಸಿದ್ದಾರೆ. ಪ್ರಿಯಾಕರ ಜತೆಗೂಡಿ 8 ಕೋಟಿ ಆಸ್ತಿಗಾಗಿ ಕೊಲೆ ಮಾಡಿರುವುದಾಗಿ ತನಿಖೆ ವೇಳೆ ಆರೋಪಿ ನಿಹಾರಿಕಾ ಬಾಯಿಬಿಟ್ಟಿದ್ದಾಳೆ.

ಪ್ರಕರಣದ ಹಿನ್ನೆಲೆ :

ರಮೇಶ್ ಹೈದರಾಬಾದ್‌ನ ಉಪ್ಪಲ್ ಪ್ರದೇಶದಲ್ಲಿ ವಾಸಿಸುತ್ತಿದ್ದರು. ಆದರೆ ಇದ್ದಕ್ಕಿದ್ದಂತೆ ಅಕ್ಟೋಬರ್ 8ರಿಂದ ರಮೇಶ್ ನಾಪತ್ತೆಯಾಗಿದ್ದರು. ಆತನ ಪತ್ನಿ ನಿಹಾರಿಕಾ ಸ್ಥಳೀಯ ಪೊಲೀಸರಿಗೆ ದೂರು ನೀಡಿದ್ದಾರೆ. ಏನೂ ತಿಳಿಯದವಳಂತೆ ನಟಿಸಿದಳು. ಈ ಬಗ್ಗೆ ಉಪ್ಪಳ ಪೊಲೀಸರು ತನಿಖೆ ನಡೆಸುತ್ತಿರುವಾಗಲೇ ಕರ್ನಾಟಕದ ಕೊಡಗು ಜಿಲ್ಲೆಯಿಂದ ಮಹತ್ವದ ಮಾಹಿತಿಯೊಂದು ಸಿಕ್ಕಿದೆ.

ಅಕ್ಟೋಬರ್ 8 ರಂದು ಕೊಡಗಿನ ಕಾಫಿ ಎಸ್ಟೇಟ್‌ನಲ್ಲಿ ಅಪರಿಚಿತ ಶವ ಪತ್ತೆಯಾದಾಗ ಕರ್ನಾಟಕದ ಪೊಲೀಸರು ತನಿಖೆ ಆರಂಭಿಸಿದ್ದರು. ಶವ ಪತ್ತೆ ಬಳಿಕ 16 ತಂಡಗಳಾಗಿ ವಿಭಜನೆ ಮಾಡಿ ತನಿಖೆ ಚುರುಕುಗೊಳಿಸಿದ್ದಾರೆ. ಅಪರಾಧದ ಸ್ಥಳದಿಂದ ಸುತ್ತಮುತ್ತಲಿನ ಮಡಿಕೇರಿ, ಸುಂಟಿಕೊಪ್ಪ, ಕುಶಾಲನಗರ ಮತ್ತು ಮಾದಾಪುರ ಪ್ರದೇಶದಲ್ಲಿ ವಿಚಾರಣೆ ತೀವ್ರಗೊಳಿಸಿದ್ದಾರೆ. ನೂರಾರು ಸಿಸಿಟಿವಿ ಕ್ಯಾಮರಾದ ದೃಶ್ಯಾವಳಿಗಳನ್ನು ಪರಿಶೀಲಿಸಿ, ಅಪರಾಧದ ಸಮಯದಲ್ಲಿ ಆ ಪ್ರದೇಶದ ಮೂಲಕ ಚಲಿಸಿದ ವಾಹನಗಳನ್ನು ಪತ್ತೆಹಚ್ಚಿದ್ದಾರೆ. ತೆಲಂಗಾಣ ನೋಂದಣಿಯ ಕಾರಿನಲ್ಲಿ ಕೊಡಗಿಗೆ ಬಂದಿದ್ದ ವ್ಯಕ್ತಿಯನ್ನು ಕೊಲೆ ಮಾಡಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಬಳಿಕ ಪೊಲೀಸರು ರಮೇಶ್ ಕುಟುಂಬದ ಎಲ್ಲ ಸದಸ್ಯರ ವಿವರ ಸಂಗ್ರಹಿಸಿದರು. ಮದುವೆಗೂ ಮುನ್ನವೇ ನಿಹಾರಿಕಾ ಜೈಲಿಗೆ ಹೋಗಿರುವುದು ಕಂಡು ಬಂದಿದೆ. ಆಕೆಯ ಕ್ರಿಮಿನಲ್ ದಾಖಲೆಯಿಂದಾಗಿ ಪೊಲೀಸರು ಆಕೆಯನ್ನು ಶಂಕಿಸಿದ್ದಾರೆ. ರಮೇಶ್ ನಿಹಾರಿಕಾ ಎರಡನೇ ಬಾರಿಗೆ ವಿವಾಹವಾದರು ಎಂಬ ಇನ್ನೊಂದು ವಿಷಯವೂ ಪೊಲೀಸರಿಗೆ ತಿಳಿಯಿತು. ಇತ್ತೀಚೆಗೆ ರಮೇಶ್ ಪತ್ನಿ ನಿಹಾರಿಕಾ ಪತಿ ಬಳಿ 8 ಕೋಟಿ ಮೌಲ್ಯದ ಆಸ್ತಿಯನ್ನು ತನ್ನ ಹೆಸರಿಗೆ ವರ್ಗಾಹಿಸಲು ಕೇಳಿದಳು. ಆದರೆ ಆ ಹಣ ನೀಡಲು ಸಾಧ್ಯವಿಲ್ಲ ಎಂದು ರಮೇಶ್​ ಹೇಳಿದರು. ಇದರೊಂದಿಗೆ ತನ್ನ ಪ್ರಿಯಕರ ನಿಖಿಲ್ ಮತ್ತು ಅಂಕುರ್ ಎಂಬ ಮತ್ತೊಬ್ಬ ಯುವಕನೊಂದಿಗೆ ಸೇರಿ ರಮೇಶ್ ಹತ್ಯೆಗೆ ಸಂಚು ರೂಪಿಸಿದ್ದಳು. ಈ ಮೂವರು ಸೇರಿ ರಮೇಶ್‌ನ ಕತ್ತು ಹಿಸುಕಿ ಕೊಲೆ ಮಾಡಿ ಮೃತದೇಹವನ್ನು ಕರ್ನಾಟಕದ ಕೊಡಗು ಜಿಲ್ಲೆಗೆ ಕೊಂಡೊಯ್ದಿದ್ದಾರೆ. ಅಲ್ಲಿದ್ದ ಕಾಫಿ ತೋಟದಲ್ಲಿ ರಮೇಶ್ ಮೃತ ದೇಹಕ್ಕೆ ಕಂಬಳಿ ಹೊದ್ದು ಬೆಂಕಿ ಹಚ್ಚಲಾಗಿತ್ತು. ನಂತರ ನಿಹಾರಿಕಾ ಹೈದರಾಬಾದ್‌ಗೆ ಹಿಂತಿರುಗಿ ಪೊಲೀಸರಿಗೆ ದೂರು ನೀಡಿದ್ದು, ತನಗೆ ಏನೂ ತಿಳಿದಿಲ್ಲ ಎಂದು ನಾಟಕ ಮಾಡಿದ್ದಾರೆ. ಆದರೆ ಪೊಲೀಸರು ತನಿಖೆ ನಡೆಸಿ ನಿಹಾರಿಕಾ, ನಿಖಿಲ್ ಮತ್ತು ಅಂಕುರ್‌ನನ್ನು ಬಂಧಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net