2 ಸಾವಿರ ರೂ.ಗಾಗಿ ಕೊಲೆ ಮಾಡಿದ್ದ ಅಪರಾಧಿಗೆ ಜೀವಾವಧಿ ಶಿಕ್ಷೆ

betting
Published on

ಧಾರವಾಡ: ಕೇವಲ ಎರಡು ಸಾವಿರ ರೂ.ಗಳಿಗೆ ನಡೆದಿದ್ದ ಕೊಲೆ ಪ್ರಕರಣದಲ್ಲಿ ಅಪರಾಧಿಗೆ ಧಾರವಾಡ ೪ನೇ ಹೆಚ್ಚುವರಿ ಸತ್ರ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿ 10 ಸಾವಿರ ರೂ. ದಂಡ ವಿಧಿಸಿದೆ.

ಕ್ರಿಕೆಟ್ ಬೆಟ್ಟಿಂಗ್‌ನಲ್ಲಿ ಸೋತ ಹಣ ನೀಡದ ಯುವಕನನ್ನು ಕೊಲೆ ಮಾಡಿದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಕೋರ್ಟ್​ ಈ ಶಿಕ್ಷೆ ವಿಧಿಸಿದೆ.

ಕೋಚಿಂಗ್‌ಗಾಗಿ ನಗರಕ್ಕೆ ಬಂದಿದ್ದ ಗೋಕಾಕನ ವಿಕ್ರಮ್ ನಾಡಗೌಡ ಎಂಬಾತ ಫಾರೂಕ್ ಜೊತೆ ೨,೦೦೦ ರೂ. ಕ್ರಿಕೆಟ್ ಬೆಟ್ಟಿಂಗ್ ಆಡಿದ್ದ. ಅದರಲ್ಲಿ ಸೋತಿದ್ದ ವಿಕ್ರಮ್‌ಗೆ ಹಣ ನೀಡುವಂತೆ ಫಾರೂಕ್ ಬೆನ್ನು ಬಿದ್ದಿದ್ದ. ಹಣ ನೀಡದಿದ್ದರಿಂದ 2009ರ ಏ.14ರಂದು ಚಾಕು ತಿವಿದಿದ್ದ. ತೀವ್ರ ಗಾಯಗೊಂಡಿದ್ದ ವಿಕ್ರಮ್​ ಚಿಕಿತ್ಸೆ ಫಲಕಾರಿಯಾಗದೇ ಹುಬ್ಬಳ್ಳಿಯ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದ. ಈ ಈ ಕುರಿತು ಉಪನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ತನಿಖೆ ನಡೆಸಿದ್ದ ಅಂದಿನ ಇನ್‌ಸ್ಪೆಕ್ಟರ್ ಮಹಾಂತೇಶ ಬಸಾಪೂರ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಸರ್ಕಾರದ ಪರ ವಕೀಲ ಪ್ರಶಾಂತ ಎಸ್. ತೊರಗಲ್ ವಾದ ಮಂಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net