ಹೆಂಡ್ತಿ ಬಗ್ಗೆ ಅಶ್ಲೀಲವಾಗಿ ಮಾತನಾಡಿದವನ ಕೊಲೆ ಮಾಡಿ ಜೈಲು ಸೇರಿದ ಗಂಡ!

Murder
Published on

ಬೆಂಗಳೂರು: ಮೊಬೈಲ್ ಕರೆ ಮಾಡಿ ಪತ್ನಿ ಬಗ್ಗೆ ಅಶ್ಲೀಲವಾಗಿ ಮಾತನಾಡಿದಕ್ಕೆ ಸಿಟ್ಟಾದ ಲಾರಿ ಚಾಲಕ, ಟ್ರಾನ್ಸ್​ಪೋರ್ಟ್ ರೈಟರ್​ನನ್ನು ಹತ್ಯೆ ಮಾಡಿ ಪರಾರಿಯಾಗಿದ್ದಾನೆ. ಲಗ್ಗೆರೆಯ ಪ್ರಶಾಂತ್ (29) ಕೊಲೆಯಾದವ. ಆರೋಪಿ ಸೋಮ ಎಂಬಾತನ ವಿರುದ್ಧ ಪ್ರಕರಣ ದಾಖಲಿಸಿರುವ ಪೊಲೀಸರು ಆತನ ಬಂಧನಕ್ಕೆ ಬಲೆಬೀಸಿದ್ದಾರೆ.

ಆರ್​ಎಂಸಿ ಯಾರ್ಡ್​ನಲ್ಲಿನ ಶಕ್ತಿ ಕಾಗೋ ಟ್ರಾನ್ಸ್​ಪೋರ್ಟ್ ಕಚೇರಿಯಲ್ಲಿ ರೈಟರ್ ಆಗಿ ಪ್ರಶಾಂತ್ ಕೆಲಸ ಮಾಡುತ್ತಿದ್ದ. ಅದೇ ಕಂಪನಿಯಲ್ಲಿ ಸೋಮ ಕೂಡ ಲಾರಿ ಚಾಲಕನಾಗಿದ್ದ. ಇಬ್ಬರ ನಡುವೆ ಕೆಲಸದ ವಿಷಯವಾಗಿ ವೈಷಮ್ಯ ಬೆಳೆದಿತ್ತು. ಮಂಗಳವಾರ ಸೋಮನಿಗೆ ಕರೆ ಮಾಡಿದ್ದ ಪ್ರಶಾಂತ್, ಆತನ ಪತ್ನಿಯ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದ. ಆಕ್ರೋಶಗೊಂಡು ರಾತ್ರಿ 8 ಗಂಟೆಗೆ ಕಚೇರಿಗೆ ಬಂದಿದ್ದ ಸೋಮ, ಚೂರಿಯಿಂದ ಪ್ರಶಾಂತ್ ಮೇಲೆ ಹಲ್ಲೆ ನಡೆಸಿ ಕೊಲೆ ಮಾಡಿದ್ದಾನೆ.

ಮಾಹಿತಿ ತಿಳಿದು ಘಟನಾ ಸ್ಥಳಕ್ಕೆ ಆರ್​ಎಂಸಿ ಯಾರ್ಡ್ ಪೊಲೀಸರು ಧಾವಿಸಿ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ ಎಂದು ಉತ್ತರ ವಿಭಾಗ ಡಿಸಿಪಿ ಧಮೇಂದ್ರ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net