More

    18 ಕೋಟಿಗೂ ಅಧಿಕ ಪ್ಯಾನ್ ಕಾರ್ಡ್​ಗಳು ಅನೂರ್ಜಿತಗೊಳ್ಳಲಿವೆ!

    ನವದೆಹಲಿ: ದೇಶದಲ್ಲಿರುವ 18 ಕೋಟಿಗೂ ಅಧಿಕ ಪ್ಯಾನ್​ ಕಾರ್ಡ್​ಗಳು ಮಾರ್ಚ್​ 31ರ ನಂತರದಲ್ಲಿ ಅನೂರ್ಜಿತಗೊಳ್ಳಲಿವೆ. ಹೀಗೊಂದು ಎಚ್ಚರಿಕೆ ಸಂದೇಶವನ್ನು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಪರೋಕ್ಷವಾಗಿ ರವಾನಿಸಿದ್ದಾರೆ.

    ತೆರಿಗೆ ವಂಚಿಸುವ ಸಲುವಾಗಿ ಹಲವು ಪ್ಯಾನ್​ ಕಾರ್ಡ್ ಹೊಂದಿರುವವರಿಗೆ ಇದರಿಂದ ಸಂಕಷ್ಟ ಎದುರಾಗಲಿದೆ. ಆದಾಯ ತೆರಿಗೆ ಇಲಾಖೆ ತೆರಿಗೆ ಪರಿಶೀಲನೆಯನ್ನು ಪೂರ್ಣಪ್ರಮಾಣದಲ್ಲಿ ಕೃತಕ ಬುದ್ಧಿಮತ್ತೆ ಬಳಸಿ ಮಾಡಲು ಮುಂದಾಗಿದ್ದು, ಅಧಿಕ ಮೊತ್ತದ ವಹಿವಾಟು ನಡೆಸಿ ತೆರಿಗೆ ವಂಚಿಸುವವರು ಇಲಾಖೆಯ ಜಾಲಕ್ಕೆ ಸಿಕ್ಕಿಬೀಳಲಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

    ಇದನ್ನೂ ಓದಿ: VIDEO|ಡಿಜೆಹಳ್ಳಿ ಗಲಭೆಗೆ ಪೊಲೀಸರೇ ಹೊಣೆಗಾರರು: ಬುರ್ಖಾಧಾರಿಗಳ ಸಮರ್ಥನೆ!

    ದೇಶದಲ್ಲಿ 130 ಕೋಟಿ ಜನಸಂಖ್ಯೆ ಇದ್ದರೂ ಆದಾಯ ತೆರಿಗೆ ಪಾವತಿಸುವವರ ಸಂಖ್ಯೆ ಕೇವಲ 1.5 ಕೋಟಿ. ಇದನ್ನು ಪ್ರಧಾನ ಮಂತ್ರಿಯವರು ಗಮನಿಸಿದ್ದು, ತೆರಿಗೆ ಜಾಲದ ವ್ಯಾಪ್ತಿ ಹೆಚ್ಚಿಸುವಂತೆ ಸಲಹೆ ನೀಡಿದ್ದಾರೆ. ತೆರಿಗೆ ಇಲಾಖೆಯ ಮಾಹಿತಿ ಪ್ರಕಾರ ದೇಶದಲ್ಲಿ 50.95 ಪ್ಯಾನ್​ ಕಾರ್ಡ್ ಹೊಂದಿರುವವರಿದ್ದಾರೆ. ಈ ಪೈಕಿ 6.48 ಕೋಟಿ ಜನರಷ್ಟೇ ಪ್ರತಿ ವರ್ಷ ಐಟಿ ರಿಟರ್ನ್ಸ್ ಸಲ್ಲಿಸುತ್ತಿದ್ದಾರೆ. ನಿಜವಾಗಿಯೂ ತೆರಿಗೆ ಪಾವತಿಸುವವರ ಸಂಖ್ಯೆ ಕೇವಲ ಒಂದೂವರೆ ಕೋಟಿ ಎಂದು ಅಧಿಕಾರಿಗಳು ತಿಳಿಸಿದ್ದಾರೆ. (ಏಜೆನ್ಸೀಸ್)

    ಇಂದೋರ್ ನಂ.1 ಸ್ವಚ್ಛ ನಗರ, ಬೆಂಗಳೂರು ನಂ.37| ಛತ್ತೀಸ್​ ಗಢದ ಅಂಬಿಕಾಪುರ ನಂ.1, ಮೈಸೂರು ನಂ.2

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts