

ಮಹಾರಾಷ್ಟ್ರ: ಕೊಲೆ ಆರೋಪಿಯೊಬ್ಬ ಕೋರ್ಟ್ ಹಾಲ್ನಲ್ಲಿ ಜಡ್ಜ್ಗೆ ಚಪ್ಪಲಿ ಎಸೆತ ಪ್ರಕರಣಕ್ಕೆ ಸಂಬಂಧಪಟ್ಟಂತೆ ಭದ್ರತಾಲೋಪ ಹಿನ್ನೆಲೆಯಲ್ಲಿ 11 ಪೊಲೀಸರನ್ನು ಅಮಾನತು ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಥಾಣೆ ಸೆಷನ್ ನ್ಯಾಯಾಲಯದಲ್ಲಿ 22 ವರ್ಷದ ಕಿರಣ್ ಸಂತೋಷ್ ಭರಮ್ ಎಂಬ ಕೊಲೆ ಆರೋಪಿ ವಿಚಾರಣೆ ಹಾಜರಾದಗಾದ ಈ ಘಟನೆ ನಡೆದಿದೆ.
ಆರೋಪಿ ಭರಮ್ ತನ್ನ ವಿಚಾರಣೆಯ ಕೇಸ್ ಅನ್ನು ಮೊತ್ತೊಂದು ನ್ಯಾಯಾಲಯಕ್ಕೆ ವರ್ಗಾಹಿಸುವಂತೆ ಕೋರಿದ್ದಾನೆ. ಇದಕ್ಕೆ ನಿಮ್ಮ ವಕೀಲರು ಅರ್ಜಿ ಸಲ್ಲಿಸುಂತೆ ನ್ಯಾಯಾಧೀಶರು ಹೇಳಿದ್ದಾರೆ. ಭರಮ್ ಪರ ಇರುವ ವಕೀಲರನ್ನು ಕರೆಯಲಾಗಿದೆ. ಆದರೆ, ವಕೀಲರು ಗೈರಾಗಿದ್ದಾರೆ ಎಂದು ನ್ಯಾಯಾಲಯಕ್ಕೆ ತಿಳಿಸಿದ್ದಾರೆ. ಇದರಿಂದ ಕುಪಿಗೊಂಡ ಆರೋಪಿ ಭರಮ್ ಏಕಾಏಕಿ ನ್ಯಾಯಧೀಶರ ಮೇಲೆ ಚಪ್ಪಲಿ ಎಸೆದಿದ್ದಾನೆ.
ಆದರೆ, ಇತ ಏಸೆದ ಚಪ್ಪಲಿ ನ್ಯಾಯಧೀಶರ ಮುಂದೆ ಇದ್ದ ಬೆಂಚ್ ಮೇಲೆ ಬಿದ್ದಿದೆ. ಹೀಗಾಗಿ, ಕರ್ತವ್ಯಲೋಪ ಸಾಬಿತಾದ ಹಿನ್ನೆಲೆ 11 ಪೊಲೀಸ್ ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ ಎಂದು ವರದಿ ಉಲ್ಲೇಖಿಸಿದೆ.(ಏಜೆನ್ಸೀಸ್).