

ಹಾಸನ: ಚನ್ನರಾಯಪಟ್ಟಣದ ಆಲಗೊಂಡನಹಳ್ಳಿ ತೋಟದಲ್ಲಿ ಆಗಸ್ಟ್ 29ರಂದು ನಡೆದಿದ್ದ ವೃದ್ಧ ದಂಪತಿಯ ಕೊಲೆ ಪ್ರಕರಣವನ್ನು ಬೇಧಿಸಿರುವ ಪೊಲೀಸರು ಒಟ್ಟು ಆರು ಮಂದಿಯನ್ನು ಬಂಧಿಸಿದ್ದಾರೆ. ಸ್ವಲ್ಪ ದಿನಗಳ ಹಿಂದೆ ಪ್ರಸಾದಿ, ದ್ವಾರಕಿ ಎಂಬ ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದಿದ್ದ ಪೊಲೀಸರು, ಇಂದು ಯೋಗಾನಂದ, ಉಮೇಶ್, ಭರತ್, ನಂದಕುಮಾರ್ ಎಂಬುವರನ್ನು ಬಂಧಿಸಿದ್ದಾರೆ.
ಆಗಸ್ಟ್ 29ರಂದು ಮುರಳೀಧರ್ ಮತ್ತು ಉಮಾದೇವಿ ವೃದ್ಧ ದಂಪತಿಯನ್ನು ಭೀಕರವಾಗಿ ಕೊಲೆ ಮಾಡಲಾಗಿತ್ತು. ಈ ಆರೋಪಿಗಳಿಂದ ವೃದ್ಧ ದಂಪತಿಯ ಎಟಿಎಂ ಕಾರ್ಡ್ ಸೇರಿ ಈ ಮೊದಲು ದರೋಡೆ ಮಾಡಿದ್ದ 15 ಲಕ್ಷ ರೂ.ಮೌಲ್ಯದ 316 ಗ್ರಾಂ ಚಿನ್ನ, ಎರಡೂ ಕಾಲು ಕೆಜಿ ಬೆಳ್ಳಿ, ಸುಮಾರು 25 ಸಾವಿರ ಮೌಲ್ಯದ ನಗದು, 3 ಮೊಬೈಲ್ ಫೋನ್, ಒಂದು ಕಾರು, ಮೂರು ಬೈಕ್ಗಳನ್ನು ವಶಪಡಿಸಿಕೊಂಡಿದ್ದಾರೆ.
ಮೊದಲಿನಿಂದಲೂ ದರೋಡೆಗಳನ್ನು ಮಾಡುತ್ತಿದ್ದ ಆರೋಪಿಗಳು, ಹಣದ ಆಸೆಗೆ ವೃದ್ಧ ದಂಪತಿಯನ್ನು ಹತ್ಯೆ ಮಾಡಿದ್ದಾಗೆ ಒಪ್ಪಿಕೊಂಡಿದ್ದಾರೆ. (ಏಜೆನ್ಸೀಸ್)