ನಗ್ನ ಸ್ಥಿತಿಯಲ್ಲಿ ಪತ್ತೆಯಾಯ್ತಾ ದಿಶಾ ಶವ? ಮುಂಬೈ ಪೊಲೀಸರು ಸಾಕ್ಷಿ ಇದೆ ಎಂದಿದ್ದೇಕೆ?

Disha Salian
Published on

ಮುಂಬೈ: ಸುಶಾಂತ್​ ಸಿಂಗ್​ ರಜಪೂತ್​ ಮಾಜಿ ಮ್ಯಾನೇಜರ್​ ದಿಶಾ ಸಾಲಿಯಾನ ಮೃತದೇಹವೂ ಬೆತ್ತಲೆ ಪರಿಸ್ಥಿತಿಯಲ್ಲಿ ಪತ್ತೆಯಾಗಿತ್ತೆಂದು ಶನಿವಾರ ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿಯೊಂದು ಹರಿದಾಡಿದೆ. ಅದರೊಂದಿಗೆ ವೈರಲ್​ ಆಗಿರುವ ಮೂರು ಕಾಲಂ ಮರಣೋತ್ತರ ವರದಿಯು ಸಹ ಸುದ್ದಿಗೆ ಪೂರಕವಾಗಿದೆ.

ಆದರೆ, ಈ ವಿಚಾರವನ್ನು ಮುಂಬೈ ಪೊಲೀಸರು ತಳ್ಳಿ ಹಾಕಿದೆ. ದಿಶಾ ಅವರ ಮೃತದೇಹವು ಬಟ್ಟೆಯೊಂದಿಗೆ ಪತ್ತೆಯಾಗಿತ್ತೆಂದು ಹಿರಿಯ ಅಧಿಕಾರಿಯೊಬ್ಬರು ಸ್ಪಷ್ಟನೆ ನೀಡಿದ್ದಾರೆ. ಮೃತದೇಹದ ಮೇಲೆ ಬಟ್ಟೆಯಿತ್ತು ಎಂಬುದಕ್ಕೆ ನಮ್ಮ ಬಳಿ ಫೋಟೋ ಸಾಕ್ಷಿಯಿದೆ. ಸಂದರ್ಭ ಬಂದಾಗ ಅದನ್ನು ಪ್ರಸ್ತುತ ಪಡಿಸುತ್ತೇವೆ ಎಂದು ಹೇಳಿದ್ದಾರೆ. ದಿಶಾ ಸಾಲಿಯಾನ ಪ್ರಕರಣದಲ್ಲಿ ಮುಂಬೈ ಪೊಲೀಸರ ತನಿಖೆ ಬಗ್ಗೆ ಸಾಕಷ್ಟು ಅನುಮಾನಗಳನ್ನು ವ್ಯಕ್ತವಾಗುತ್ತಿರುವುದರಿಂದ ಈ ಹೇಳಿಕೆ ನೀಡಿದ್ದಾರೆ ಎನ್ನಲಾಗಿದೆ.

ಈ ಹಿಂದೆ ಬಿಡುಗಡೆಯಾದ ಮರಣೋತ್ತರ ವರದಿಯಲ್ಲಿ ದಿಶಾ ಅವರ ಮೈಮೇಲೆ ಅಸ್ವಾಭಾವಿಕ ಗಾಯಗಳಿವೆ ಎಂದು ಉಲ್ಲೇಖಿಸಲಾಗಿತ್ತು. ಅಲ್ಲದೆ, ಮಹಾರಾಷ್ಟ್ರದ ಬಿಜೆಪಿ ಸಂಸದ ನಾರಾಯಣಾ ರಾಣೆ ದಿಶಾ ಆತ್ಮಹತ್ಯೆ ಮಾಡಿಕೊಂಡಿಲ್ಲ. ಅತ್ಯಾಚಾರವೆಸಗಿ ಕೊಲೆ ಮಾಡಲಾಗಿದೆ. ಅವರ ಗುಪ್ತಾಂಗದಲ್ಲಿ ಗಾಯದ ಗುರುತಿವೆ ಎಂಬುದು ಮರಣೋತ್ತರ ವರದಿಯಲ್ಲಿ ತಿಳಿದುಬಂದಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಹೀಗಾಗಿ ದಿಶಾ ಸಾವಿನ ತನಿಖೆ ಕೂಡ ಇದೀಗ ಮಹತ್ವ ಪಡೆದುಕೊಂಡಿದೆ.

ಇನ್ನು ಸುಶಾಂತ್​ ಮಾಜಿ ಮ್ಯಾನೇಜರ್​ ಆಗಿದ್ದ ದಿಶಾ, ಮುಂಬೈನ ಮಲಾಡ್​ನಲ್ಲಿರುವ ಅಪಾರ್ಟ್​ಮೆಂಟ್​ನ 14ನೇ ಮಹಡಿಯಿಂದ ಜಿಗಿದು ಜೂನ್​ 9ರ ರಾತ್ರಿ ಆತ್ಮಹತ್ಯೆ ಮಾಡಿಕೊಂಡರು ಎಂದು ಹೇಳಲಾಗಿದೆ. ಅಲ್ಲದೆ, ದಿಶಾ ಸಾವು ಜೂನ್​ 14ರಂದು ಮೃತಪಟ್ಟ ನಟ ಸುಶಾಂತ್​ ಸಾವಿಗೂ ತಳುಕು ಹಾಕಿಕೊಂಡಿದೆ. ಆದರೆ, ಮೇಲ್ನೋಟಕ್ಕೆ ಇಬ್ಬರ ಸಾವಿಗೂ ಯಾವುದೇ ಸಂಬಂಧವಿಲ್ಲ ಎಂದು ಮುಂಬೈ ಪೊಲೀಸರು ಹೇಳಿದ್ದಾರೆ. ಆದರೂ, ಸಾಕಷ್ಟು ವದಂತಿಗಳು ಹರಿದಾಡುತ್ತಿವೆ. ತನಿಖೆ ಮುಂದುವರಿದಿದ್ದು, ಮುಗಿದ ನಂತರವಷ್ಟೇ ಸ್ಪಷ್ಟ ಚಿತ್ರಣ ಸಿಗಲಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net