ಎತ್ತರದ ಕಟ್ಟಡದಲ್ಲಿ ಅಪಾಯಕಾರಿ ಸಾಹಸ ಪ್ರದರ್ಶಿಸಿದ ಯುವಕನಿಗೆ ಎದುರಾಯ್ತು ಸಂಕಷ್ಟ..!

Stunt
Published on

ಮುಂಬೈ: ಎತ್ತರದ ಕಟ್ಟಡವೊಂದರ ಇಕ್ಕಟ್ಟಾದ ಸ್ಥಳದಲ್ಲಿ ಯುವಕನೊಬ್ಬ ಅಪಾಯಕಾರಿ ಸಾಹಸ ಪ್ರದರ್ಶನ ಮಾಡಿದ್ದ ವಿಡಿಯೋ ಇತ್ತೀಚೆಗಷ್ಟೇ ವೈರಲ್​ ಆಗಿತ್ತು.

ಇದೀಗ ವಿಡಿಯೋ ಮುಂಬೈ ಪೊಲೀಸರ ಗಮನಕ್ಕೆ ಬಂದಿದ್ದು, ಸಾಹಸ ಪ್ರದರ್ಶಿಸಿದ ಯುವಕ ಮತ್ತು ಮೊಬೈಲ್​ನಲ್ಲಿ ರೆಕಾರ್ಡ್​ ಮಾಡಿದ ಇಬ್ಬರು ಸ್ನೇಹಿತರಿಗಾಗಿ ಶೋಧ ಕಾರ್ಯ ನಡೆಸುತ್ತಿದ್ದಾರೆ.

ಯುವಕನೊಬ್ಬ ಎನರ್ಜಿ ಡ್ರಿಂಕ್​ ಕುಡಿಯುತ್ತಾ 22 ಅಂತಸ್ತಿನ ಕಟ್ಟಡದಲ್ಲಿನ ಇಕ್ಕಟ್ಟಿನ ಜಾಗದಲ್ಲಿ ಕೈಯನ್ನು ನೆಲಕ್ಕೂರಿ ತನ್ನೆರಡು ಕಾಲ್ಗಳನ್ನು ಆಕಾಶಕ್ಕೆ ಚಾಚಿ ಅಪಾಯಕಾರಿ ಸಾಹಸ ಪ್ರದರ್ಶಿಸಿದ್ದ. ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿತ್ತು. ಸ್ವಲ್ಪ ಮಿಸ್​ ಆಗಿದ್ದರೂ ಯುವಕನ ಪ್ರಾಣ ಉಳಿಯುತ್ತಿರಲಿಲ್ಲ.

ವಿಡಿಯೋ ತಮ್ಮ ಗಮನಕ್ಕೆ ಬರುತ್ತಿದ್ದಂತೆ ಎಚ್ಚರಿಕೆ ವಹಿಸಿರುವ ಮುಂಬೈ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಸಾಹಸ ಪ್ರದರ್ಶನ ಮಾಡಿದ ಕಟ್ಟಡವನ್ನು ಗುರುತಿಸಲಾಗಿದೆ. ಅದರ ಹೆಸರು ಜೈ ಭರತ್​ ಕಟ್ಟಡವಾಗಿದೆ. ಮೂವರು ಯುವಕರನ್ನು ಪತ್ತೆ ಹಚ್ಚಲಾಗಿದೆ. ಸದ್ಯ ಅವರು ನಾಪತ್ತೆಯಾಗಿದ್ದಾರೆಂದು ಪೊಲೀಸರು ಮಾಹಿತಿ ನೀಡಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net