ಸೌತ್ ಇಂಡಿಯಾ ಹೀರೋಗೆ ಮುಂಬೈ ನಾಯಕಿ; ಗ್ಲಾಮರಸ್ ನಟಿಯ ಪಾತ್ರದಲ್ಲಿ ಊರ್ವಶಿ ಜಯನ್ ಅಭಿನಯ

Urvashi
Published on

ಬೆಂಗಳೂರು: ನರೇಶ್ ನಿರ್ದೇಶನದ ಸಾರ್ಥಕ್ ನಾಯಕನಾಗಿರುವ ಚಿತ್ರ ‘ಸೌತ್ ಇಂಡಿಯ ಹೀರೋ’. ಚಿತ್ರರಂಗದ ಕುರಿತ ಈ ಸಿನಿಮಾದಲ್ಲಿ ಕಾಶಿಮ ಹಾಗು ಊರ್ವಶಿ ಜಯನ್ ಇಬ್ಬರು ನಾಯಕಿಯರು. ಮುಂಬೈ ಮೂಲದ ಊರ್ವಶಿ ಜಯನ್, ಕೆಲವು ಜಾಹೀರಾತುಗಳಲ್ಲಿ ಮಿಂಚಿದ್ದು, ಈ ಹಿಂದೆ ಕನ್ನಡದಲ್ಲಿ ವಿಜಯ್ ರಾಘವೇಂದ್ರಗೆ ನಾಯಕಿಯಾಗಿ ‘ಸಾವಿತ್ರಿ’ ಎಂಬ ಚಿತ್ರದಲ್ಲೂ ನಟಿಸಿದ್ದಾರೆ. ಆದರೆ, ಬಿಡುಗಡೆಯಾಗುತ್ತಿರುವ ಮೊದಲ ಸಿನಿಮಾ ‘ಸೌತ್ ಇಂಡಿಯ ಹೀರೋ’.

‘ಸೌತ್ ಇಂಡಿಯ ಹೀರೋ’ದಲ್ಲಿನ ತಮ್ಮ ಪಾತ್ರದ ಕುರಿತು ಮಾತನಾಡುವ ಊರ್ವಶಿ, ‘ಸ್ಪೂರ್ತಿ ಎಂಬ ಗ್ಲಾಮರಸ್ ನಾಯಕಿಯ ಪಾತ್ರದಲ್ಲಿ ನಟಿಸಿದ್ದೇನೆ. ಇಂದಿನ ನಾಯಕಿಯರಂತೆ ಮಾಡರ್ನ್ ನಟಿ. ಎಲ್ಲ ನಟಿಯರೂ ಒಮ್ಮೆಯಾದರೂ ಇಂತಹ ಪಾತ್ರದಲ್ಲಿ ನಟಿಸಲು ಇಷ್ಟಪಡುವಂತಹ ಪಾತ್ರ. ಸ್ಪೂರ್ತಿ ಒಬ್ಬ ಸ್ಟಾರ್ ಆಗಿದ್ದರೂ, ಭಾವನಾಜೀವಿ, ತ್ಯಾಗಮಯಿ, ಹಲವು ಎಮೋಷನ್​ಗಳಿಂದ ಕೂಡಿರುವ ಗಟ್ಟಿ ಪಾತ್ರ. ನನಗಂತೂ ಇದು ಡ್ರೀಮ್ ರೋಲ್’ ಎಂದು ಹೇಳಿಕೊಳ್ಳುತ್ತಾರೆ ಊರ್ವಶಿ.

ಇನ್ನು, ಚಿತ್ರೀಕರಣದ ವೇಳೆ ಊರ್ವಶಿಗೆ ಹಲವು ಸವಾಲುಗಳು ಎದುರಾಗಿದ್ದವಂತೆ. ‘ತುಂಬ ಕಡಿಮೆ ಸಮಯದಲ್ಲಿ ಡಾನ್ಸ್ ತರಬೇತಿ ಪಡೆಯಬೇಕಿತ್ತು. ಡಾನ್ಸ್ ಮಾಡುವ ವೇಳೆ ಕಾಲಿಗೆ ಗಾಯವಾಗಿ, ಮೈಕೈಗೆ ಪೆಟ್ಟಾಗಿತ್ತು. ಒಂದೇ ಹಾಡಿನಲ್ಲಿ ಪಾಶ್ಚಾತ್ಯ, ಜಾನಪದ, ಕ್ಲಾಸಿಕಲ್, ಬಾಲಿವುಡ್ ಶೈಲಿಗಳ ಮಿಶ್ರಣವಾದ ಡಾನ್ಸ್ ಮಾಡುವುದು ಸವಾಲಾಗಿತ್ತು. 70ಕ್ಕೂ ಹೆಚ್ಚು ಕಾಸ್ಟ್ಯೂಮ್ಳನ್ನು ಬದಲಿಸಿದ್ದೆ. ಕಾಶ್ಮೀರದಲ್ಲಿ ಶೂಟಿಂಗ್ ವೇಳೆ ಹಠಾತ್ತಾಗಿ ಮಂಜು ಬೀಳುತ್ತಿತ್ತು. ಚಳಿಯಲ್ಲಿ ಚಿತ್ರೀಕರಿಸುವುದು ಕಷ್ಟವಾಗುತ್ತಿತ್ತು’ ಎಂದು ಹೇಳಿಕೊಳ್ಳುತ್ತಾರೆ ಊರ್ವಶಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net