ನಿಷೇಧದ ನಡುವೆಯೂ ಹುಕ್ಕಾ ಸೇದಿ ಸರ್ಕಾರಕ್ಕೆ ಸವಾಲೆಸೆದ ಫಾಹಮ್ ಲೌಂಜ್ ಮಾಲೀಕ: ಕ್ಯಾಮೆರಾದಲ್ಲಿ ಸೆರೆ! Smoking

smoking hukha in a car
Published on

Smoking : ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡ್ನಾವೀಸ್​ ಸಾರ್ವಜನಿಕ ಪ್ರದೇಶಗಳಲ್ಲಿ ಹುಕ್ಕಾ ಸೇದುವುದನ್ನು ನಿಷೇಧಿಸಿದ್ರೂ ಮುಂಬೈನ ಹೋಟೆಲ್​ ಮಾಲೀಕನೊಬ್ಬ ತನ್ನ ಐಷಾರಾಮಿ ಕಾರಿನಲ್ಲಿ ಕೂತು ರಾಜ್ಯದ ಪ್ರಧಾನ ಕಚೇರಿ ಮಂತ್ರಾಲಯದ ಹೊರಗಡೆ ಹುಕ್ಕಾ ಸೇದುತ್ತಿರುವ ವಿಡಿಯೋ ಚಿತ್ರೀಕರಿಸಿ ತನ್ನ ಇನ್​ಸ್ಟಾಗ್ರಾಂ ಖಾತೆಯಲ್ಲಿ ಹಾಕಿಕೊಂಡಿದ್ದಾರೆ. ಇದೀಗ ವಿಡಿಯೋ ಎಲ್ಲೆಡೆ ವೈರಲ್​ ಆಗಿದ್ದು, ವ್ಯಾಪಕ ಆಕ್ರೋಶಕ್ಕೆ ಗುರಿಯಾಗಿದೆ.

ವಿಡಿಯೋದಲ್ಲಿ ಏನಿದೆ?

ಮಹಮ್ಮದ್​ ಠಕ್ಕರ್ ಎಂಬ ವ್ಯಕ್ತಿ ಮುಂಬೈನ ಫಾಹಮ್ ಲೌಂಜ್ ಮಾಲೀಕ. ಈತ ಮಂತ್ರಾಲಯದ ಆವರಣದಲ್ಲಿ ತಮ್ಮ ರೇಂಜರ್​ ರೋವರ್​ ಕಾರಿನಲ್ಲಿ ಚಲಿಸುತ್ತಾ ವಿಡಿಯೋ ಮಾಡಿದ್ದು, ಹುಕ್ಕಾ ಇದೊಂದು ಸೊಪ್ಪು. ಆದರೆ, ಸಾರ್ವಜನಿಕ ಸ್ಥಳಗಳಲ್ಲಿ ಈ ವಸ್ತುವನ್ನು ನಿಷೇಧಿಸಲಾಗಿದೆ. ನಿಮ್ಮಲ್ಲಿ ಯಾರಿಗಾರದರೂ ಹುಕ್ಕಾ ಸೇದುವ ಬಯಕೆ ಇದ್ದರೆ, ನನ್ನ ಕಾರಿನಲ್ಲಿ ಬಂದು ಕುಳಿತುಕೊಳ್ಳಬಹುದು ಎಂದು ಆಹ್ವಾನಿಸಿದ್ದಾರೆ. ಅಂದಹಾಗೆ ಕಾರಿನಲ್ಲಿ ಫಾಹಮ್ ಲೌಂಜ್​ನ ಸಿಬ್ಬಂದಿ ಕೂಡ ಇದ್ದರು ಎಂದು ತಿಳಿಸಲಾಗಿದೆ. ಅದೇ ರೀತಿ ಮಹಮ್ಮದ್​ ತಮ್ಮ ರೆಸ್ಟೋರೆಂಟ್​ಗೆ ಬಂದವರಿಗೆ ಹುಕ್ಕಾ ನೀಡುತ್ತೇವೆ ಎಂದು ತಿಳಿಸಿದ್ದಾರೆ.

ಹುಕ್ಕಾ ಪಾರ್ಲರ್‌ಗಳ ವಿರುದ್ಧ ಸಿಎಂ ಫಡ್ನವೀಸ್ ಕಠಿಣ ಕ್ರಮ

ಅಂದಹಾಗೆ ಮುಖ್ಯಮಂತ್ರಿ ದೇವೇಂದ್ರ ಫಡ್ನಾವೀಸ್​ ಹುಕ್ಕಾ ಪಾರ್ಲರ್​ಗಳ ವಿರುದ್ಧ ಕಠಿಣಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ ಕೆಲವೇ ತಿಂಗಳಲ್ಲಿ ಈ ವಿಡಿಯೋ ವೈರಲ್​ ಆಗಿದೆ. ಇದೇ ವರ್ಷದ ಮಾರ್ಚ್​ ತಿಂಗಳಲ್ಲಿ ರಾಜ್ಯ ವಿಧಾನಸಭಾ ಅಧಿವೇಶನದಲ್ಲಿ ಮುಖ್ಯಮಂತ್ರಿ ಫಡ್ನಾವೀಸ್​ ಮಾತನಾಡಿ, ಹುಕ್ಕಾ ಪಾರ್ಲರ್​ಗಳನ್ನು ನಿಷೇಧಿಸುವ ಕಾನೂನನ್ನು ಇನ್ನಷ್ಟು ಬಲಗೊಳಿಸಲಾಗುವುದು. ಈ ನಿಯಮಗಳನ್ನು ಉಲ್ಲಂಘಿಸಿದ ರೆಸ್ಟೋರೆಂಟ್​ಗಳ ಪರವಾನಗಿಯನ್ನು ರದ್ದುಗೊಳಿಸಲಾಗುವುದು ಹಾಗೂ ಕಾನೂನು ಜಾರಿ ಸಂಸ್ಥೆಗಳನ್ನು ಹೊರತುಪಡಿಸಿ ಬೇರೆ ಯಾರಾದರೂ ಅಂತಹ ಚಟುವಟಿಕೆಗಳನ್ನು ಪತ್ತೆಹಚ್ಚಿದರೆ ಆ ಪ್ರದೇಶದ ಪೊಲೀಸ್ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net