ಬಜೆಟ್​ ವಿಚಾರದಲ್ಲಿ ಮುಳಬಾಗಿಲು ತಿರಸ್ಕಾರ

samruddi manjunath
ಸಮೃದ್ಧಿ ಮಂಜುನಾಥ್​
Published on

ಕೋಲಾರ: ಮುಳಬಾಗಿಲು ರಾಜ್ಯದ ಭೂಪಟದಲ್ಲಿ ಇದಿಯೋ ಇಲ್ಲವೋ ಎಂಬುದರ ಬಗ್ಗೆ ಅನುಮಾನ ಕಾಡುತ್ತಿದೆ. 224 ಕ್ಷೇತ್ರಗಳ ಪೈಕಿ ಮುಳಬಾಗಿಲನ್ನು ತಿರಸ್ಕಾರ ಮಾಡಿರುವ ಭಾವನೆ ಕಾಡುತ್ತಿದೆ ಎಂದು ಶಾಸಕ ಸಮೃದ್ಧಿ ಮಂಜುನಾಥ್​ ಅಸಮಾಧಾನ ಹೊರ ಹಾಕಿದರು.

ವಿಧಾನಸಭೆ ಅಧಿವೇಶನದಲ್ಲಿ ಗುರುವಾರ ಬಜೆಟ್​ ಮೇಲಿನ ಚರ್ಚೆಯಲ್ಲಿ ಮಾತನಾಡಿ, ಬಜೆಟ್​ನಲ್ಲಿ ಮುಳಬಾಗಿಲು ೇತ್ರಕ್ಕೆ ಏನನ್ನೂ ಕೊಟ್ಟಿಲ್ಲ,ಕ್ಷೇತ್ರದ ಬೇಡಿಕೆಗಳ ಬಗ್ಗೆ ಸಚಿವರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದೆ. 16 ಬಾರಿ ಬಜೆಟ್​ ಮಂಡನೆ ಮಾಡಿರುವ ಸಿದ್ದರಾಮಯ್ಯ ಅವರು, ಸರ್ವರಿಗೂ ಸಮಪಾಲು, ಸಮಬಾಳು ಅಡಿಯಲ್ಲಿ ಬಜೆಟ್​ ಕೊಡುತ್ತಾರೆ ಎಂದು ಭಾವಿಸಿದ್ದೇವು, ಆದರೆ ನಿರೀೆ ನಿರಾಸೆಯುಂಟು ಮಾಡಿದ್ದಾರೆ ಎಂದರು.

ಕ್ಷೇತ್ರಕ್ಕೆ ಜಿಲ್ಲಾಮಟ್ಟದ ಕ್ರೀಡಾಂಗಣ ಬೇಕು ಅಂತ ಕೇಳಿದ್ದೆ, ಕುರುಡುಮಲೆ ಗಣಪತಿ, ರಾಮಲಿಂಗೇಶ್ವರ ದೇವಾಲಯ, ಆಂಜನೇಯಸ್ವಾಮಿ, ದರ್ಗಾ ಸೇರಿ ಹಲವು ಐತಿಹಾಸಿಕ ಸ್ಥಳಗಳಿವೆ. ಕ್ಷೇತ್ರದಿಂದ ಇಡೀ ಪ್ರಪಂಚಕ್ಕೆ ಮೀಲ್ಸ್​, ಸಿಲ್ಕ್​ ಹಾಗೂ ಟೊಮ್ಯಾಟೊ, ಆಲೂಗಡ್ಡೆ ಸಬರಾಜು ಮಾಡಲಾಗುತ್ತಿದೆ. ಇಷ್ಟೇಲ್ಲ ಇದ್ದರೂ ಏಕೆ ಅನುದಾನ ಕೊಡಲಿಲ್ಲ ಎಂದು ಪ್ರಶ್ನಿಸಿದರು.

ಬಜೆಟ್​ ಮೊದಲು ಸರ್ಕಾರಿ ಮೆಡಿಕಲ್​ ಕಾಲೇಜು ಕೇಳಿದಾಗ ಕೊಡುವುದಾಗಿ ಸಿಎಂ ಭರವಸೆ ನೀಡಿದ್ದರು. ಆದರೆ ಕೊಟ್ಟಿದ್ದು ಖಾಸಗಿ ಸಹಭಾಗಿತ್ವದಲ್ಲಿ ಕೊಟ್ಟು ಅನ್ಯಾಯವೆಸಗಿದ್ದಾರೆ. ಖಾಸಗಿ ಎಂದರೆ ಏನಂಥ ಎಲ್ಲರಿಗೂ ಅರ್ಥವಾಗತ್ತದೆ. ಎಚ್​ಎನ್​ ಮತ್ತು ಕೆಸಿ ವ್ಯಾಲಿ ಯೋಜನೆಯ ನೀರನ್ನು ಮೂರನೇ ಹಂತದಲ್ಲಿ ಶುದ್ಧೀಕರಣ ಮಾಡಬೇಕು ಎಂದು ಮೊದಲಿನಿಂದಲೂ ಒತ್ತಾಯ ಮಾಡಲಾಗುತ್ತಿದೆ. ಆದರೆ ಸರ್ಕಾರವು ರ್ನಿಲಕ್ಷ$್ಯ ತೋರಿದೆ. ಮೀಸಲು ೇತ್ರದ ಬಗ್ಗೆಯಾಕೆ ಇಷ್ಟೊಂದು ತಾರತಮ್ಯ ಎಂದರು.

* 35 ಲಕ್ಷ ತಿರಸ್ಕಾರ

2023-24ರಲ್ಲಿ 25,134 ಕೋಟಿ, 2024-25ರಲ್ಲಿ 27,673 ಕೋಟಿ ರೂ., 2025-26ರಲ್ಲಿ 42 ಸಾವಿರ ಕೋಟಿ ಕೊಟ್ಟಿದ್ದಾರೆ. ಆದರೆ ಮುಳಬಾಗಿಲು ೇತ್ರಕ್ಕೆ ಕೇವಲ 35 ಲಕ್ಷ ರೂ. ಅನುದಾನ ನೀಡಿದ್ದು, ಇದನ್ನು ತಿರಸ್ಕರಿಸಿದ್ದೇನೆ. ಸರ್ಕಾರ ಬೇರೆಯಾವ ಕೆಲಸಕ್ಕಾದರೂ ಉಪಯೋಗಿಸಿಕೊಳ್ಳಲಿ. ಅಲ್ಪ ಪ್ರಮಾಣದಲ್ಲಿ ಯಾವ ಕೇರಿಗೆ ರಸ್ತೆ, ಬೀದಿದೀಪ ಹಾಕಲು ಸಾಧ್ಯ. ಸೋದರ ಸೋದರ ಎಂದು ಮೂಗಿಗೆ ತುಪ್ಪ ಸವರಿದ್ದಾರೆ ಎಂದು ಕಿಡಿಕಾರಿದರು. ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಸುರೇಶ್​ ಅವರು ಸಿಎಂ ಅವರಿಗೆ ಬಹಳ ಹತ್ತಿರದಲ್ಲಿದ್ದು ಹೆಚ್ಚು ಅನುದಾನ ಬಿಡುಗಡೆ ಮಾಡಿಸಿ ಅಭಿವೃದ್ಧಿಗೆ ಒತ್ತು ನೀಡಲಿ. 1995ರಲ್ಲಿ ರಾಜ್ಯದಲ್ಲಿ ಬಯಲು ಸೀಮೆ ಅಭಿವೃದ್ಧಿ ಪ್ರಾಧಿಕಾರವನ್ನು ಯಾವ ಪುರುಷಾರ್ಥಕ್ಕೆ ರಚನೆ ಮಾಡಿದ್ದಾರೆ ಎಂದು ಸಿಎಂ ಉತ್ತರ ಕೊಡಬೇಕಾಗುತ್ತದೆ. ಕಲ್ಯಾಣ ಕರ್ನಾಟಕ್ಕೆ 5,000 ಕೋಟಿ, ಬಯಲು ಸೀಮೆಗೆ 86 ಕೋಟಿ ನಾ. ಇದು ಯಾವ ನ್ಯಾಯ. ರಾಜ್ಯದಲ್ಲಿ ಯಾವುದೇ ಪಕ್ಷ ಅಧಿಕಾರಕ್ಕೆ ಬಂದರೂ ಸಹ ಮುಳಬಾಗಿಲನ್ನು ಕಡೆಗಣಿಸಿಕೊಂಡೇ ಬಂದಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net