ಬಾತ್​ರೂಂನಲ್ಲಿ ಜಾರಿ ಬಿದ್ದು ಪ್ರಜ್ಞೆ ಕಳೆದುಕೊಂಡ ಟಿಎಂಸಿ ಹಿರಿಯ ನಾಯಕ ಮುಕುಲ್ ರಾಯ್

Former Railway minister Mukul Roy hospitalised with head injury
Published on

ನವದೆಹಲಿ: ತೃಣಮೂಲ ಕಾಂಗ್ರೆಸ್‌ನ ಹಿರಿಯ ನಾಯಕ ಮುಕುಲ್ ರಾಯ್ ತಮ್ಮ ಮನೆಯ ಬಾತ್​ರೂಂನಲ್ಲಿ ಜಾರಿ ಬಿದ್ದ ಪರಿಣಾಮ ಪ್ರಜ್ಞೆ ಕಳೆದುಕೊಂಡಿದ್ದಾರೆ. ತಲೆಗೆ ಗಾಯವಾಗಿ ಪ್ರಜ್ಞೆ ಕಳೆದುಕೊಂಡ ನಂತರ ತುರ್ತಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಆಸ್ಪತ್ರೆಯ ಅಧಿಕಾರಿಯೊಬ್ಬರು ಗುರುವಾರ ತಿಳಿಸಿದ್ದಾರೆ.

ಸಂಜೆ ಬಾತ್ ರೂಂನಲ್ಲಿ ಜಾರಿ ಬಿದ್ದು ಮುಕುಲ್ ರಾಯ್ ಅವರ ತಲೆಗೆ ಗಾಯವಾಗಿತ್ತು. ಆರೋಗ್ಯ ಸ್ಥಿರವಾಗಿದೆ ಅವರ ಮೇಲ್ವಿಚಾರಣೆಗೆ ವೈದ್ಯರ ತಂಡವನ್ನು ರಚಿಸಲಾಗಿದೆ. ನರಸಂಬಂಧಿ ಕಾಯಿಲೆಯಿಂದ ಬಳಲುತ್ತಿರುವ 70 ವರ್ಷದ ನಾಯಕ ಪ್ರಜ್ಞೆ ತಪ್ಪುವ ಮುನ್ನ ವಾಂತಿ ಕೂಡ ಮಾಡಿಕೊಂಡಿದ್ದರು. ಅವರು ಅಲ್ಝೈಮರ್ ಕಾಯಿಲೆಯಿಂದ ಬಳಲುತ್ತಿದ್ದಾರೆ.

ತೃಣಮೂಲ ಕಾಂಗ್ರೆಸ್‌ನ ಸ್ಥಾಪಕ ಸದಸ್ಯರಲ್ಲಿ ಒಬ್ಬರಾಗಿದ್ದಾರೆ. ಅವರು 2017 ರಲ್ಲಿ ಬಿಜೆಪಿ ಸೇರಿದ್ದರು ಮತ್ತು 2021 ರ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಕೃಷ್ಣನಗರ ಉತ್ತರ ಕ್ಷೇತ್ರದಿಂದ ಗೆದ್ದಿದ್ದರು. ಆದರೆ ನಂತರ ಅವರು ತೃಣಮೂಲ ಕಾಂಗ್ರೆಸ್‌ಗೆ ಮರಳಿದರು. ಕಳೆದ ಏಪ್ರಿಲ್ ನಲ್ಲೂ ಮುಕುಲ್ ರೈ ಅವರ ಆರೋಗ್ಯ ಹದಗೆಟ್ಟಿದ್ದರಿಂದ ಆಸ್ಪತ್ರೆಗೆ ದಾಖಲಾಗಬೇಕಾಯಿತು.

ಕಳೆದ ವರ್ಷ ಫೆಬ್ರವರಿ 2023 ರಲ್ಲಿ, ಅವರು ಅನಾರೋಗ್ಯಕ್ಕೆ ಒಳಗಾದ ನಂತರ ಆಸ್ಪತ್ರೆಗೆ ದಾಖಲಾಗಿದ್ದರು. ಆಗ ಮುಕುಲ್‌ನ ಆಪ್ತರು ಆತನ ತಲೆಯ ಮೇಲೆ ನೀರು ಸಂಗ್ರಹವಾಗಿದೆ ಮತ್ತು ಈ ಕಾಯಿಲೆ ದೀರ್ಘಕಾಲದ ಎಂದು ಹೇಳಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net