

ಮುಂಬೈ: ಬಾಲಿವುಡ್ನಲ್ಲಿ ಮುಖೇಶ್ ಖನ್ನಾ ಅವರ ವಿಷಯ ಬಂದರೆ ಸಾಕು ಇಂದಿಗೂ ಜನರು ಸೂಪರ್ ಹೀರೋ ಶಕ್ತಿಮಾನ್ ಮತ್ತು ಭೀಷ್ಮ ಪಿತಾಮಹನ ಪಾತ್ರವನ್ನು ನೆನಪಿಸಿಕೊಳ್ಳುತ್ತಾರೆ. ಈ ಎರಡು ಪಾತ್ರಗಳಲ್ಲಿ ಮುಖೇಶ್ ಖನ್ನಾ ಜನರ ಮೇಲೆ ಹೆಚ್ಚು ಪ್ರಾಬಲ್ಯ ಬೀರಿದ್ದಾರೆ. ಆದರೆ ಇದಕ್ಕೂ ಮೊದಲು ಮುಖೇಶ್ ಖನ್ನಾ(Mukesh Khanna) ಅವರನ್ನು ಯಾವಾಗಲೂ 'ಕಾಪಿಕ್ಯಾಟ್' ಎಂದು ಕರೆಯಲಾಗುತ್ತಿತ್ತು. ಈ ವಿಷಯವನ್ನು ಸ್ವತಃ ಮುಖೇಶ್ ಖನ್ನಾ ಅವರೇ ಬಹಿರಂಗಪಡಿಸಿದ್ದಾರೆ.
ತಮ್ಮ ವೃತ್ತಿಜೀವನದ ಆರಂಭದಲ್ಲಿ ತಮ್ಮನ್ನು ಮತ್ತು ಅಮಿತಾಭ್ ಬಚ್ಚನ್ ಅವರಿಗೆ ಹೋಲಿಸಲಾಗುತ್ತಿತ್ತು. ಅಮಿತಾಭ್ ಬಚ್ಚನ್ ಅವರ ಪ್ರತಿ ಎಂದು ಕರೆಯಲು ಪ್ರಾರಂಭಿಸಿದರು, ಇದರಿಂದ ನನಗೆ ತುಂಬಾ ಬೇಸರವಾಯಿತು ಎಂದು ಮುಖೇಶ್ ಖನ್ನಾ ಸಂದರ್ಶನವೊಂದರಲ್ಲಿ ತಿಳಿಸಿದ್ದಾರೆ. ಮುಖೇಶ್ ಖನ್ನಾ 1981ರಲ್ಲಿ 'ರೂಹಿ' ಚಿತ್ರದ ಮೂಲಕ ನಟನೆಗೆ ಪಾದಾರ್ಪಣೆ ಮಾಡಿದರು. ಇದರ ನಂತರ ಅವರು ‘ಕ್ಯಾಪ್ಟನ್ ಬ್ಯಾರಿ’, ‘ದರ್ದ್-ಎ-ದಿಲ್’ ಚಿತ್ರಗಳಲ್ಲಿ ಕಾಣಿಸಿಕೊಂಡರು. ಚೊಚ್ಚಲ ಪ್ರವೇಶದಿಂದಲೇ ಕಾಪಿಕ್ಯಾಟ್ ಎಂಬ ಟ್ಯಾಗ್ ಅವರನ್ನು ಅಂಟಿಕೊಂಡಿತು ಎಂದು ತಿಳಿಸಿದರು.
ಒಮ್ಮೆ ಮಿಥುನ್ ಚಕ್ರವರ್ತಿಯನ್ನು 'ಬಡವರ ಅಮಿತಾಭ್ ಬಚ್ಚನ್' ಎಂದು ಮಾಧ್ಯಮದಲ್ಲಿ ಕರೆಯಲಾಗಿತ್ತು. ಅವರು ಹೇಗೆ ಪ್ರತಿಕ್ರಿಯಿಸಿದರು ಎಂಬುದು ನನಗೆ ತಿಳಿದಿಲ್ಲ. ಆದರೆ ನನಗೆ ಅದನ್ನು ಹೇಳಿದ್ದರೆ ನಾನು ಮೌನವಾಗಿರುತ್ತಿದ್ದೆ ಎಂದು ಹೇಳಿದರು. ನೀನು ಅವನನ್ನು ಕಾಪಿ ಮಾಡು ಎಂದು ಹೇಳುತ್ತಿದ್ದರು. ನನ್ನ ಹಲವು ಚಿತ್ರಗಳು ಸೋತಿವೆ, ನೀವು ಅವರಂತೆ ಕಾಣುವುದರಿಂದ ನೀವು ಯಶಸ್ವಿಯಾಗಲಿಲ್ಲ ಎಂದು ಜನರು ಹೇಳುತ್ತಿದ್ದರು. ಈ ರೀತಿಯ ಅನುಭನ ಚಿತ್ರರಂಗದಲ್ಲಿ ನನಗೆ ಬಹಳಷ್ಟು ಸಂಭವಿಸಿದೆ. ಇಲ್ಲಿ ಯಶಸ್ಸು ಹೆಚ್ಚು ಮಾತನಾಡುತ್ತದೆ. 'ಮಹಾಭಾರತ' (ಟಿವಿ ಶೋ) ಬಂದಾಗ, ಯಾರೂ ನನಗೆ ಅಮಿತಾಭ್ ಬಚ್ಚನ್ ಎಂದು ಹಣೆಪಟ್ಟಿ ಹಚ್ಚಲಿಲ್ಲ ಎಂದು ತಿಳಿಸಿದ್ದಾರೆ.
.ಅಮಿತಾಭ್ ಬಚ್ಚನ್ ಅವರೇ ನನ್ನನ್ನು ಕಾಪಿ ಮಾಡುತ್ತೀರಿ ಎಂದು ಹೇಳಿದ್ದಾರಾ ಎಂದು ಕೇಳಿದ ಪ್ರಶ್ನೆಗೆ ಮುಖೇಶ್ ಖನ್ನಾ ಅವರು ಇದು ಹೇಗೆ ಗೊತ್ತಾಯಿತು. 'ಅವರು ಹಾಗೆ ಹೇಳಿದರು. ಆದರೆ ಇದರಿಂದ ನಾನು ಫ್ಲಾಪ್ ಆಗುತ್ತೇನೆಯೇ? ಅಮಿತ್ ಜಿ ಯಾರು, ನನ್ನ ವೃತ್ತಿಯನ್ನು ಯಾರು ನಿಲ್ಲಿಸಬಹುದು? ಎಂದು ಹೇಳಿದರು.(ಏಜೆನ್ಸೀಸ್)