

ಮುಂಬೈ: ಮುಖೇಶ್ ಅಂಬಾನಿ ಕಿರಿಯ ಪುತ್ರ ಅನಂತ್ ಅಂಬಾನಿಗಾಗಿ ದುಬೈಯಲ್ಲಿ 640 ಕೋಟಿ ರೂ. ಮೌಲ್ಯದ ಐಷಾರಾಮಿ ಬಂಗಲೆ ಖರೀದಿಸಿದ್ದಾರೆ.
ಮುಖೇಶ್ ಅಂಬಾನಿ ಕಿರಿಯ ಪುತ್ರ ಅನಂತ್ ಅಂಬಾನಿಗಾಗಿ ದುಬೈಯ ಬೀಚ್ ಪಕ್ಕದಲ್ಲಿ 640 ಕೋಟಿ ರೂ. ಮೌಲ್ಯದ ಬಂಗಲೆಯನ್ನು ಇತ್ತೀಚೆಗೆ ಖರೀದಿಸಿದ್ದಾರೆ. ಇದು ದುಬೈಯಲ್ಲಿನ ಅತೀ ಹೆಚ್ಚು ಮೌಲ್ಯದ ಮನೆ ಖರೀದಿ ಒಪ್ಪಂದವಾಗಿದೆ ಎಂದು ಹೇಳಲಾಗಿದೆ. ಪಾಮ್ ಜುಮೆರಹಾ ಸಮೀಪದಲ್ಲಿಈ ಆಸ್ತಿಯನ್ನು ಈ ವರ್ಷದ ಪ್ರಾರಂಭದಲ್ಲಿ ಅನಂತ್ ಅಂಬಾನಿಗೋಸ್ಕರ ಖರೀದಿಸಲಾಗಿದೆ.