ಅನಂತ್ ಅಂಬಾನಿ ಧರಿಸಿರುವ ಈ ವಾಚ್ ಬೆಲೆ ಎಷ್ಟು ಗೊತ್ತಾ? Anant Ambani Watch

Anant Ambani
Published on

 ನವದೆಹಲಿ:  ( Anant Ambani Watch ) ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ, ದಿಗ್ಗಜ ಉದ್ಯಮಿ, ಮುಖೇಶ್ ಅಂಬಾನಿ ಮತ್ತು ಭಾರತದ ಅತ್ಯಂತ ಶ್ರೀಮಂತ ವ್ಯಕ್ತಿ ನೀತಾ ಅಂಬಾನಿ ಅವರ ಕಿರಿಯ ಪುತ್ರ ಅನಂತ್ ಅಂಬಾನಿ  ಧರಿಸಿದ್ದ ವಾಚ್ ಅಂತರ್ಜಾಲದಲ್ಲಿ ಚರ್ಚೆಯ ವಿಷಯವಾಯಿತು.

ಅನಂತ್ ಅಂಬಾನಿಗೆ ವಾಚ್‌ಗಳೆಂದರೆ ತುಂಬಾ ಇಷ್ಟ ಎಂದು ಹೇಳಲಾಗುತ್ತದೆ.   ಇವರ ಬಳಿ ದುಬಾರಿ ಬೆಲೆಯ ವಾಚ್ ಗಳಿವೆ ಎನ್ನಲಾಗಿದೆ. ಅನಂತ್ ಅಂಬಾನಿ ಅವರ ಇತ್ತೀಚೆಗೆ ಧರಿಸಿದ್ದ ವಾಚ್​ವೊಂದರ ಬೆಲೆ ಕೇಳಿದ್ರೆ ನೀವು ಶಾಕ್​ ಆಗುವುದು ಖಂಡಿತಾ ಹೌದು.

ಟ್ಜರ್ಲೆಂಡ್‌ನಲ್ಲಿ ತಯಾರಿಸಿದ ರಿಚರ್ಡ್ ಮಿಲ್ಲೆ RM 52-04 ಮಾದರಿಯ ಗಡಿಯಾರವನ್ನು (ರಿಚರ್ಡ್ ಮಿಲ್ಲೆ RM 52-04 ಸ್ಕಲ್ ಬ್ಲೂ ಸಫೈರ್ ವಾಚ್) ಧರಿಸಿದ್ದರು. ಈ ವಾಚ್ ನ ಬೆಲೆ ಅಕ್ಷರಶಃ ರೂ. 22 ಕೋಟಿ ಆಗಿದ್ದು ಈಗ ಚರ್ಚೆಗೆ ಗ್ರಾಸವಾಗಿದೆ.

ಅನಂತ್ ಅಂಬಾನಿ ತಮ್ಮ ಪತ್ನಿ ರಾಧಿಕಾ ಜೊತೆ ಇರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಆ ವಿಡಿಯೋದಲ್ಲಿ ಅನಂತ್ ಅಂಬಾನಿ ವಾಚ್ ಸ್ಪೆಷಲ್ ಹೆಚ್ಚು ವಿಶೇಷ ಆಕರ್ಷಣೆಯಾಯಿತು. ರಿಚರ್ಡ್ ಮಿಲ್ಲೆ ಬ್ರಾಂಡ್‌ನ ಬೆಲೆ 22 ಕೋಟಿ ರೂ. ಎಂದು ರಾಷ್ಟ್ರೀಯ ಮಾಧ್ಯಮಗಳಲ್ಲಿ ವರದಿಯಾಗಿದೆ. ತಲೆಬುರುಡೆಯ ಆಕಾರದ ಡಯಲ್ ಈ ವಾಚ್‌ನ ವಿಶೇಷತೆಯಾಗಿದ್ದು, ಆಕಾಶ ನೀಲಿ ಬಣ್ಣದ ವಿನ್ಯಾಸವು ಆಕರ್ಷಕವಾಗಿದೆ.   ಅನಂತ್ ಅಂಬಾನಿ ಧರಿಸಿದ್ದ ಈ ಮಾದರಿಯ ಮೂರು ವಾಚ್ ಗಳನ್ನು ಮಾತ್ರ ತಯಾರಿಸಲಾಗಿದೆ ಎಂದು ವರದಿಯಾಗಿದೆ. ಅದರಲ್ಲಿ ಒಂದನ್ನು ಅನಂತ್ ಅಂಬಾನಿ ತೆಗೆದುಕೊಂಡಿದ್ದಾರೆ ಎಂದು ವರದಿಯಾಗಿದೆ.

ಅಂಬಾನಿ ಕುಟುಂಬಕ್ಕೆ ಸೇರಿದ ಅತ್ಯಂತ ದುಬಾರಿ ವಸ್ತುಗಳು ಪ್ರಪಂಚದಾದ್ಯಂತ ಯಾವಾಗಲೂ ಚರ್ಚೆಯ ವಿಷಯವಾಗಿದೆ. ಈ ಗಡಿಯಾರವು ವಿಶಿಷ್ಟವಾದ ವಿಂಟೇಜ್‌ಗಳಲ್ಲಿ ಒಂದಾಗಿದೆ. ಈ ಬೆಲೆಯಲ್ಲಿ ವಾಚ್ ಖರೀದಿಸುವುದು ಸಾಮಾನ್ಯರಿಗೆ ಅಸಾಧ್ಯ. ಈ ಗಡಿಯಾರದ ತಯಾರಕರಾದ ರಿಚರ್ಡ್ ಮಿಲ್ಲೆ ಅವರು ವಿಶ್ವದ ಅತ್ಯಂತ ದುಬಾರಿ ಗಡಿಯಾರ ತಯಾರಕರಲ್ಲಿ ಒಬ್ಬರು ಎಂದು ಗುರುತಿಸಲ್ಪಟ್ಟಿದ್ದಾರೆ.

ಅನಂತ್ ಅಂಬಾನಿ ಪಾಟೆಕ್ ಫಿಲಿಪ್, ಅಡೆಮಾರ್ಸ್ ಪಿಗುಯೆಟ್‌ನಂತಹ ವಿವಿಧ ಬ್ರಾಂಡ್‌ಗಳ ವಾಚ್‌ಗಳ ದೊಡ್ಡ ಸಂಗ್ರಹವನ್ನು ಹೊಂದಿದ್ದಾರೆ. ಮೇಲಾಗಿ.. ಅನಂತ್ ಅವರ ಮದುವೆ ಸಮಾರಂಭದಲ್ಲಿ ಬಂದ ಅತಿಥಿಗಳಿಗೆ ಅಡೆಮಾರ್ಸ್ ಪಿಗೆಟ್ ಬ್ರಾಂಡ್ ವಾಚ್ ಗಳನ್ನು ರಿಟರ್ನ್ ಗಿಫ್ಟ್ ಆಗಿ ನೀಡಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net