

ನವದೆಹಲಿ: ಮುಖೇಶ್ ಅಂಬಾನಿ ಮಾಲಿಕತ್ವದ ರಿಲಯನ್ಸ್ ಜಿಯೋ ಕಡಿಮೆ ಬೆಲೆಯ 4 ಜಿ ಫೋನೊಂದನ್ನು ಅಮೆಜಾನ್ನಲ್ಲಿ ಬಿಡುಗಡೆ ಮಾಡಿದೆ. ಈ ಫೋನ್ ಅನ್ನು ಜಿಯೋ ಭಾರತ್ ಜೆ1 ಎಂದು ಹೆಸರಿಸಲಾಗಿದೆ.
ಜಿಯೋ ಭಾರತ್ ಜೆ1 ಫೋನ್ 2.8 ಇಂಚಿನ ಸ್ಕ್ರೀನ್ ಹೊಂದಿದ್ದು, ಈ ಫೋನ್ನಲ್ಲಿ ಎಚ್.ಡಿ ಕಾಲಿಂಗ್, ಜಿಯೋ ಮನಿ ಆ್ಯಪ್ ಮೂಲಕ ಯುಪಿಐ ಹಣ ವರ್ಗಾವಣೆ ಮತ್ತು ಜಿಯೋ ಸಿನೆಮಾ ಒಟಿಟಿ ಫ್ಲಾಟ್ಪಾರ್ಮ್ಫೀಚರ್ಗಳನ್ನು ಬಳಸಬಹುದಾಗಿದೆ.
ಜಿಯೋ ಭಾರತ್ ಜೆ1 ಫೋನ್ನ ಬೆಲೆ ಪ್ರೀ ಪೇಯ್ಡ್ ರಿಚಾರ್ಜ್ಗಿಂತ ಕಡಿಮೆ ಇದೆ. ರೂ.1799 ಮುಖಬೆಲೆ ಹೊಂದಿರುವ ಈ ಫೋನ್ ಸದ್ಯ ಅಮೆಜಾನ್ನಲ್ಲಿ ಮಾತ್ರ ಲಭ್ಯವಿದ್ದು ರಿಲಯನ್ಸ್ ವೆಬ್ಸೈಟ್ನಲ್ಲಿ ಬಿಡುಗಡೆಯಾಗಿಲ್ಲ.
4 ಜಿ ಫೋನ್ ಆಗಿದ್ದು ಟಚ್ಸ್ಕ್ರೀನ್ ಫೀಚರ್ ಹೊಂದಿರುವುದಿಲ್ಲ. 0.3 ಎಂ.ಪಿ ಕ್ಯಾಮೆರಾ , ಎಫ್.ಎಂ ರೇಡಿಯೋ, ಇಯರ್ ಫೋನ್ ಜಾಕ್, 2500 ಎಂಎಎಚ್ ಬ್ಯಾಟರಿ ಸೌಲಭ್ಯ ಮತ್ತು 128 ಜಿಬಿ ವಿಸ್ತರಿಸುವಷ್ಟು ಸ್ಟೋರೆಜ್ ಅವಕಾಶ ಹೊಂದಿದೆ.
23 ಭಾರತೀಯ ಭಾಷೆಗಳ ಆಯ್ಕೆಯಿದೆ. ಜೀಯೋ ಆ್ಯಪ್ಗಳು ಫೋನ್ನಲ್ಲಿ ಇನ್ಬಿಲ್ಟ್ ಆಗಿರಲಿದೆ. ಕೇವಲ ಜಿಯೋ ಸಿಮ್ ಅನ್ನು ಮಾತ್ರ ಈ ಫೋನ್ನಲ್ಲಿ ಬಳಸಬಹುದಾಗಿದೆ. ಇದಕ್ಕೆ ಸರಿಹೊಂದುವಂತೆ ರೂ.123 ಗಳ ರಿಚಾರ್ಜ್ ಪ್ಲಾನ್ ಬಿಡುಗಡೆ ಮಾಡಿರುವ ಜಿಯೋ, 28 ದಿನಗಳಿಗೆ ಅನ್ಲಿಮಿಟೆಡ್ ಕಾಲ್ ಮತ್ತು 14 ಜಿಬಿ ಡೇಟಾ ನೀಡಿದೆ. ಈ ಹಿಂದೆ ಜಿಯೋ ಭಾರತ್ ಬಿ2 ಮತ್ತು ಭಾರತ್ ಕೆ1 ಕಾರ್ಭನ್ 4 ಜಿ ಹೆಸರಿನ ಫೋನ್ಗಳನ್ನು ಬಿಡುಗಡೆ ಮಾಡಿತ್ತು.