ಉದ್ಯೋಗಿಗೆ 1500 ಕೋಟಿ ರೂ. ಮೌಲ್ಯದ ಬಂಗಲೆ ಗಿಫ್ಟ್ ಕೊಟ್ಟ ಮುಖೇಶ್​​ ಅಂಬಾನಿ!

Mukesh Ambani gifted Rs 1500 crore home to one of his employees
Published on

ನವದೆಹಲಿ: ಖ್ಯಾತ ಉದ್ಯಮಿ ಮುಖೇಶ್ ಅಂಬಾನಿ ಅವರು ರಿಲಯನ್ಸ್ ಸಂಸ್ಥೆಯ ಉದ್ಯೋಗಿಯೊಬ್ಬರಿಗೆ 1500 ಕೋಟಿ ರೂಪಾಯಿಗಳನ್ನು ಉಡುಗೊರೆಯಾಗಿ ನೀಡಿದ್ದಾರೆ.

ಉದ್ಯೋಗಿಯೊಬ್ಬರಿಗೆ ಮುಖೇಶ್ ಅಂಬಾನಿ ಮುಂಬೈನಲ್ಲಿ ಮನೆಯೊಂದನ್ನು ಇತ್ತೀಚೆಗೆ ಉಡುಗೊರೆಯಾಗಿ ನೀಡಿದ್ದಾರೆ. ಈ ಮನೆಯನ್ನು ಮುಖೇಶ್ ಅಂಬಾನಿ ಉಡುಗೊರೆಯಾಗಿ ನೀಡಿರೋದು ಮನೋಜ್ ಮೋದಿ ಎಂಬ ಉದ್ಯೋಗಿಗೆ. ಮನೋಜ್ ಮೋದಿ ಅವರನ್ನು ಮುಖೇಶ್ ಅಂಬಾನಿ ಅವರ ಬಲಗೈ ಬಂಟ ಎಂದೇ ಕರೆಯಲಾಗುತ್ತದೆ. ರಿಲಯನ್ಸ್ ಸಂಸ್ಥೆಯಲ್ಲಿ ಹಲವು ದಶಕಗಳಿಂದ ಕಾರ್ಯನಿರ್ವಹಿಸುತ್ತಿರುವ ಮನೋಜ್ ಮೋದಿ ಅಂಬಾನಿ ಕುಟುಂಬದೊಂದಿಗೆ ಆತ್ಮೀಯ ಸಂಬಂಧ ಹೊಂದಿದ್ದಾರೆ. ಧೀರೂಬಾಯಿ ಅಂಬಾನಿ ಅವರ ಕಾಲದಿಂದಲೂ ರಿಲಯನ್ಸ್ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಹೀಗಾಗಿ ಈ ದುಬಾರಿ ಉಡುಗೊರೆ ನೀಡಿದ್ದಾರೆ.

ಮುಖೇಶ್‌ ಅಂಬಾನಿ ಮತ್ತು ಮನೋಜ್‌ ಮೋದಿ ಇಬ್ಬರೂ ಒಂದೇ ಕ್ಲಾಸ್‌ನಲ್ಲಿ ಓದಿದವರು. 1980ರಲ್ಲಿ ಮನೋಜ್ ಮೋದಿ ರಿಲಯನ್ಸ್ ಸಂಸ್ಥೆಗೆ ಸೇರುತ್ತಾರೆ. ಮನೋಜ್‌ ಮೋದಿ ಪ್ರಸ್ತುತ ರಿಲಯನ್ಸ್ ರಿಟೇಲ್ ಹಾಗೂ ರಿಲಯನ್ಸ್ ಜಿಯೋ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. 

ಮನೆ ವಿಶೇಷತೆ:
ಈ ಮನೆ 22 ಅಂತಸ್ತುಗಳನ್ನು ಹೊಂದಿದ್ದು, 1.7 ಲಕ್ಷ ಚದರ ಅಡಿ ವಿಸ್ತೀರ್ಣ ಹೊಂದಿದೆ.22 ಅಂತಸ್ತಿನ ಮನೆಯ 19 ರಿಂದ 21ನೇ ಅಂತಸ್ತನ್ನು ಪೆಂಟ್ ಹೌಸ್ ಆಗಿ ಪರಿವರ್ತಿಸಲಾಗಿದೆ. ಇದರಲ್ಲಿ ಮನೋಜ್ ಮೋದಿ ಅವರ ಕುಟುಂಬ ಸದಸ್ಯರು ವಾಸಿಸಲಿದ್ದಾರೆ. ಇನ್ನು 16,17 ಹಾಗೂ 18ನೇ ಅಂತಸ್ತುಗಳನ್ನು ಮೋದಿ ಅವರ ಹಿರಿಯ ಪುತ್ರಿ ಖುಷ್ಬೂ ಪೊದ್ದರ್ ಹಾಗೂ ಆಕೆಯ ಕುಟುಂಬಕ್ಕೆ ಮೀಸಲಿಡಲಾಗಿದೆ. ಈ ಮನೆಯಲ್ಲಿ ಖುಷ್ಬೂ ಜೊತೆಗೆ ಅವರ ಪತಿ ಹಾಗೂ ಅತ್ತೆ, ಮಾವ ನೆಲೆಸಲಿದ್ದಾರೆ. ಇನ್ನು 11,12 ಹಾಗೂ 13ನೇ ಅಂತಸ್ತನ್ನು ದ್ವಿತೀಯ ಪುತ್ರಿ ಭಕ್ತಿ ಮೋದಿ ಅವರಿಗೆ ಮೀಸಲಿಡಲಾಗಿದೆ.
ಈ ಮನೆ ಮುಂಬೈ ನೆಪಿಯನ್ ಸೀ ರೋಡ್ ನಲ್ಲಿದೆ. ಮ್ಯಾಜಿಕ್ ಬ್ರಿಕ್ಸ್ ಡಾಟ್ ಕಾಮ್ ಪ್ರಕಾರ ಈ ಮನೆಯ ಮೌಲ್ಯ 1500 ಕೋಟಿ ರೂ. ಬೆಲೆ ಬಾಳುತ್ತದೆ. ಈ ಮನೆಯಲ್ಲಿನ ಪೀಠೋಪಕರಣಗಳನ್ನು ಇಟಲಿಯಿಂದ ಆಮದು ಮಾಡಿಕೊಳ್ಳಲಾಗಿದೆ ಎನ್ನಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net