ಮಾವನೊಂದಿಗೆ ಜಗಳವಾಡಿದ ರಾಧಿಕಾಮರ್ಚೆಂಟ್​?! ನಿಜವಾಗಿ ನಡೆದಿದ್ದೇನು?

ambani -radhika
Published on

ಮುಂಬೈ: ಮುಕೇಶ್ ಅಂಬಾನಿ ತಮ್ಮ ಕುಟುಂಬ ಸಮೇತ ಮುಂಬೈನ ಸುಪ್ರಪ್ರಸಿದ್ಧ ಲಾಲ್ ಬಾಗ್ಚಾ ಗಣೇಶ ದರ್ಶನಕ್ಕೆ ತೆರಳಿದ್ದು, ಅಲ್ಲಿ ತಮ್ಮ ಪುತ್ರ ಅನಂತ್ ಮತ್ತು ರಾಧಿಕಾ ಜೊತೆ ಮುಖೇಶ್ ಅಂಬಾನಿ ವಾದ ನಡೆಸಿರುವ ವೀಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್​ ಆಗಿದೆ.

ಮುಖೇಶ್ ಅಂಬಾನಿ ತಮ್ಮ ಕುಟುಂಬದೊಂದಿಗೆ ಪ್ರಸಿದ್ಧ ಲಾಲ್ ಬಾಗ್ಚಾ ಗಣೇಶ ದೇವರ ದರ್ಶನಕ್ಕೆ ಮುಕೇಶ್ ಅಂಬಾನಿ ಅವರ ಪತ್ನಿ ನೀತಾ ಅಂಬಾನಿ, ಪುತ್ರ ಅನಂತ್ ಮತ್ತು ರಾಧಿಕಾ ಮರ್ಚೆಂಟ್ ಅವರೊಂದಿಗೆ ತೆರಳಿದ್ದರು. ಮತ್ತೊಬ್ಬ ಸೊಸೆ ಶ್ಲೋಕಾ ಮೆಹ್ತಾ ಕೂಡ ಇದ್ದರು.

ಲಾಲ್ ಬಗ್ಚಾ ಗಣೇಶನ ದರ್ಶನ ಪಡೆದು ಅಂಬಾನಿ ಕುಟುಂಬ ಮನೆಗೆ ಬಂದಿತ್ತು. ಆ ವೇಳೆ ಆಘಾತಕಾರಿ ಘಟನೆಯೊಂದು ನಡೆಯಿತು. ವಿಡಿಯೋದಲ್ಲಿ ಅನಂತ್ ಮತ್ತು ರಾಧಿಕಾ ಆಸ್ಪತ್ರೆಗೆ ಹೋಗುವ ಕುರಿತು ಮಾತನಾಡುತ್ತಿರುವುದು ಕಂಡು ಬಂದಿದೆ. ಇದೇ ವೇಳೆ ಮುಕೇಶ್ ಅಂಬಾನಿ, ತಾನೂ ಸಹ ಆಸ್ಪತ್ರೆಗೆ ಬರುವುದಾಗಿ ಹೇಳುತ್ತಾರೆ. ಆದರೆ ಅನಂತ್ ಮತ್ತು ರಾಧಿಕಾ ಬರುವ ಅವಶ್ಯಕತೆ ಇಲ್ಲ ಎಂದು ಹೇಳುತ್ತಾರೆ.

ಅಲ್ಲಿ ಅವರ ಮುಖಭಾವ ಮತ್ತು ಬಾಡಿಲಾಂಗ್ಯೂಜ್​ ನೋಡಿದರೆ ಏನೋ ಜಗಳವಾಡಿದ್ದಾರೆ ಎನಿಸುತ್ತದೆ. ವೀಡಿಯೋ ನೋಡಿದ ನೆಟ್ಟಿಗರು ಮಾವ ಮತ್ತು ಸೊಸೆಯ ನಡುವೆ ಜಗಳವಾಗಿದೆಯಂತೆ ಎಂದು ಕಮೆಂಟ್ ಮಾಡುತ್ತಿದ್ದಾರೆ. ಈ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಇದೀಗ ವೈರಲ್ ಆಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net