ಮುಡಾ ಹಗರಣ ಬಿಜೆಪಿ ಷಢ್ಯಂತ್ರ; ಎಚ್.ಸಿ.ಮಹದೇವಪ್ಪ

HC-Mahadevappa
Published on

ಬೆಂಗಳೂರು: ಮುಡಾ ಹಗರಣದಲ್ಲಿ ಸಿಎಂ ಅಧಿಕಾರ ದುರುಪಯೋಗ ಅಂತೆಕಂತೆ ಅಷ್ಟೇ. ಅದೊಂದು ವ್ಯವಸ್ಥಿತ ರಾಜಕೀಯ ಷಡ್ಯಂತ್ರ ಎಂದು ಸಮಾಜ ಕಲ್ಯಾಣ ಸಚಿವ ಎಚ್.ಸಿ.ಮಹದೇವಪ್ಪ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 40 ವರ್ಷಗಳಿಂದ ಸಿಎಂ ಮೇಲೆ ಕಪ್ಪು ಚುಕ್ಕೆ ಇಲ್ಲ. ಹಿಂದೆ ಹೇಗಿದ್ದರೋ ಈಗಲೂ ಹಾಗೇ ಇದ್ದಾರೆ. ಬಿಜೆಪಿ ವಿನಾಕಾರಣ ಆರೋಪ ಹೊರಿಸುತ್ತಿದೆ ಎಂದು ವಾಗ್ದಾಳಿ ನಡೆಸಿದರು.

ಚುನಾವಣೆಯಲ್ಲಿ ಎಲ್ಲ ಪಕ್ಷಗಳು ಗೆಲ್ಲಲು ಪ್ರಯತ್ನಿಸುತ್ತಿವೆ. ಅಂತಿಮವಾಗಿ ಜನ ತೀರ್ಮಾನ ಮಾಡುತ್ತಾರೆ. ಜನರ ಒಲವು ಕಾಂಗ್ರೆಸ್ ಪರವಿದೆ. ಮುಡಾ, ವಕ್ಫ್ ಚುನಾವಣೆ ಮೇಲೆ ಹೇಗೆ ಪರಿಣಾಮ ಬೀರಲು ಸಾಧ್ಯ. ಅವೆಲ್ಲ ಆರೋಪ ಅಷ್ಟೇ, ಸತ್ಯ ಅಲ್ಲ. ಮೂರು ಕ್ಷೇತ್ರಗಳನ್ನು ನಾವು ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಯೋಗೇಶ್ವರ್ ಮೂರು ಬಾರಿ ಶಾಸಕರಾಗಿ ಚೆನ್ನಾಗಿ ಅಲ್ಲಿ ಕೆಲಸ ಮಾಡಿದ್ದಾರೆ. ಚನ್ನಪಟ್ಟಣ ಕೆರೆ ತುಂಬಿಸುವ ಕೆಲಸ ಮಾಡಿದ್ದಾರೆ. ಹೀಗಾಗಿ ಜನರಿಗೆ ಅವರ ಮೇಲೆ ಒಲವಿದೆ ಎಂದರು.

ಯಾವ ಕ್ಷೇತ್ರ ಯಾರ ಭದ್ರಕೋಟೆಯೂ ಅಲ್ಲ. ಜನರ ತೀರ್ಮಾನವೇ ಅಂತಿಮವಾಗಿರುತ್ತದೆ. ಅದು ಜನರ ಭದ್ರ ಕೋಟೆಯಾಗಿರುತ್ತದೆ ಎಂದು ಹೇಳಿದರು.

ಸಿಎಂ ಸಿದ್ದರಾಮಯ್ಯಗೆ ಲೋಕಾಯುಕ್ತ ನೊಟೀಸ್ ನೀಡಿರುವ ಕುರಿತ ಪ್ರಶ್ನೆಗೆ, ಸಿಎಂ ಹಾಜರಾಗುವುದಾಗಿ ಹೇಳಿದ್ದಾರೆ. ಅಧಿಕಾರ ಬೇರೆ ಕಾನೂನು ಬೇರೆ. ಲಾ ಈಸ್ ಲಾ ಅಷ್ಟೇ. ಇದರಲ್ಲಿ ಬೇರೆ ಯಾಕೆ ಹುಡುಕುತ್ತೀರಾ? ಕಾನೂನು, ಸೆಕ್ಷನ್‌ಗಳು ಬದಲಾವಣೆ ಆಗುತ್ತವೆಯೆ?

ಅಧಿಕಾರ ದುರುಪಯೋಗ ಅಂತೆಕಂತೆ ಅಷ್ಟೇ. ಕಾನೂನಿನ ಮುಂದೆ ಎಲ್ಲರೂ ಒಂದೆ ಎಂದು ಮಹದೇವಪ್ಪ ಪ್ರತಿಕ್ರಿಯಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net