Muda Scam| ಪ್ರಾಸಿಕ್ಯೂಷನ್​ಗೆ ಅನುಮತಿ ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಿದ CM Siddaramaiah

Siddaramaiah Gehlot
Published on

ಬೆಂಗಳೂರು: ಮುಡಾ ಬದಲಿ ನಿವೇಶನ ಹಂಚಿಕೆಯಲ್ಲಿ ನಡೆದಿದೆ ಎನ್ನಲಾದ ಅಕ್ರಮಕ್ಕೆ (Muda Scam) ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (Enforcement Directorate) ಎಂಟ್ರಿ ಕೊಟ್ಟಿದ್ದು ತೀವ್ರ ಶೋಧ ನಡೆಸುತ್ತಿದೆ. ಇತ್ತ ಸಿಎಂ ಸಿದ್ದರಾಮಯ್ಯ (Cm Siddaramaiah) ಕೂಡ ಮತ್ತೊಂದು ಸುತ್ತಿನ ಕಾನೂನು ಸಮರಕ್ಕೆ ಸಜ್ಜಾಗಿದ್ದು, ರಾಜ್ಯಪಾಲರ ಕ್ರಮ ಪ್ರಶ್ನಿಸಿ ಹೈಕೋರ್ಟ್​ಗೆ ಮೇಲ್ಮನವಿ ಸಲ್ಲಿಸಿದ್ದಾರೆ.

ಮುಡಾ (Muda) ಬದಲಿ ನಿವೇಶನ ಹಂಚಿಕೆಯಲ್ಲಿ ನಡೆದಿದೆ ಎನ್ನಲಾದ ಅಕ್ರಮಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ (Cm Siddaramaiah) ವಿರುದ್ಧ ತನಿಖೆಗೆ ಅನುಮತಿ ನೀಡಿದ್ದರು. ಸದ್ಯ ಈ ವಿಚಾರವಾಗಿ ಅಕ್ಟೋಬರ್​ 24ರ ಆದೇಶ ಪ್ರಶ್ನಿಸಿ ಹೈಕೋರ್ಟ್ ವಿಭಾಗೀಯ ಪೀಠಕ್ಕೆ ಮೇಲ್ಮನವಿ ಸಲ್ಲಿಸಿದ್ದು, ಏಕಸದಸ್ಯ ಪೀಠದ ಆದೇಶ ರದ್ದುಪಡಿಸುವಂತೆ ಮನವಿ ಮಾಡಿದ್ದಾರೆ. ಹೈಕೋರ್ಟ್​ನ ವಿಭಾಗೀಯ ನ್ಯಾಯಪೀಠದಲ್ಲಿ ಸಿಎಂ ಸಿದ್ದರಾಮಯ್ಯ (CM Siddaramaiah) ಅರ್ಜಿ ಸಲ್ಲಿಸಿದ್ದು, ಅರ್ಜಿಯ ವಿಚಾರಣೆ ಇನ್ನಷ್ಟೇ ನಡೆಯಬೇಕಿದೆ.

ಪ್ರಕರಣದ ಹಿನ್ನೆಲೆ 

ಲೇಔಟ್ ನಿರ್ಮಾಣಕ್ಕಾಗಿ ಕೆಸರೆ ಗ್ರಾಮದ 462ನೇ ಸರ್ವೇ ನಂಬರ್​ನಲ್ಲಿರುವ 3 ಎಕರೆ 16 ಗುಂಟೆ ಜಾಗವನ್ನು ಮುಡಾ ತನ್ನ ಸುಪರ್ದಿಗೆ ತಗೆದುಕೊಂಡಿತ್ತು. ಆದರೆ, ಸ್ವಾಧೀನಪಡಿಸಿಕೊಳ್ಳುವಾಗ ತಮಗೆ ಮಾಹಿತಿ ನೀಡಿಲ್ಲ. ಹಾಗಾಗಿ, ತಮಗೆ ಪರಿಹಾರ ನೀಡಬೇಕೆಂದು ಅರ್ಜಿ ಸಲ್ಲಿಸಿದ್ದ ಪಾರ್ವತಿ ಸಿದ್ದರಾಮಯ್ಯನವರು ಮುಡಾ ಕಡೆಯಿಂದ ಪರಿಹಾರದ ರೂಪವಾಗಿ 2021ರಲ್ಲಿ ಮೈಸೂರಿನ ವಿಜಯನಗರದ ಮೂರನೇ ಹಂತದಲ್ಲಿ ಬೆಲೆಬಾಳುವ 14 ಸೈಟುಗಳನ್ನು ಖರೀದಿಸಿದ್ದರು. ಅವರ ಹೆಸರಿಗೆ ಆ ಸೈಟುಗಳ ಖಾತೆಯನ್ನೂ ಮಾಡಿಸಿಕೊಡಲಾಗಿತ್ತು.

ಪರಿಹಾರ ರೂಪವಾಗಿ ಅವರಿಗೆ ಸೈಟುಗಳನ್ನು ಕೊಟ್ಟು ಅವರಿಗೆ ಖಾತೆಯನ್ನೂ ಮಾಡಿಸಿರುವ ಮುಡಾ, ಇತ್ತ, ಬಡಾವಣೆಗಾಗಿ ತಾನು ವಶಪಡಿಸಿಕೊಂಡಿದ್ದ ಭೂಮಿಯ ಮಾಲೀಕತ್ವವನ್ನು ತಿದ್ದುಪಡಿ ಮಾಡಿಯೇ ಇಲ್ಲ. ಅದರಿಂದಾಗಿ, ವಶಪಡಿಸಿಕೊಂಡು ಬಡಾವಣೆ ನಿರ್ಮಿಸಲಾಗಿರುವ ಭೂಮಿಯ ಮಾಲೀಕತ್ವ ಇನ್ನೂ ಪಾರ್ವತಿಯವರ ಹೆಸರಿನಲ್ಲೇ ಇದೆ. ಕಾರ್ಡ್ಸ್ ಆಫ್ ರೈಟ್ಸ್‌ನಲ್ಲಿ, ಆರ್​ಟಿಸಿ ದಾಖಲೆಗಳಲ್ಲಿ ಈಗಲೂ ಪಾರ್ವತಿಯವರ ಹೆಸರಿದ್ದು, ಈ ವಿಚಾರ ರಾಜ್ಯ ರಾಜಕಾರಣದಲ್ಲಿ ದೊಡ್ಡ ಗದ್ದಲವನ್ನೇ ಎಬ್ಬಿಸಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net