ಮುಡಾ ಹಗರಣ ಬಗ್ಗೆ ಇದ್ದ ಆಸಕ್ತಿ ಡಿನೋಟಿಫಿಕೇಶನ್ ಪ್ರಕರಣದಲ್ಲಿ ಯಾಕಿಲ್ಲ?ಎಚ್ಡಿಕೆ ಪ್ರಶ್ನಿಸಿದ ಲಾಡ್

Santosh S. Lad
Published on

ಬೆಂಗಳೂರು:
ಮುಡಾ ಹಗರಣದ ಬಗ್ಗೆ ತೋರಿಸಿದ ಆಸಕ್ತಿಯನ್ನು ಡಿನೋಟಿಫಿಕೇಶನ್ ವಿಚಾರದಲ್ಲಿ ನಾವು ಪ್ರಸ್ತಾಪ ಮಾಡಿರುವ ಪ್ರಕರಣದ ಬಗ್ಗೆ ಕುಮಾರಸ್ವಾಮಿ ಅವರು ಯಾಕೆ ಉತ್ತರ ಕೊಟ್ಟಿಲ್ಲ? ಎಂದು ಸಚಿವ ಸಂತೋಷ್ ಲಾಡ್ ಪ್ರಶ್ನಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿ, ಡಿನೊಟಿಫೈಗೆ ಕೊಟ್ಟಿದ್ದು ಸುಳ್ಳೇ? ಇವರು ಆರ್ಡರ್ ಮಾಡಿದ್ದು ಸುಳ್ಳೇ? ಮೊದಲು ನಾವು ಕೇಳಿದ ಪ್ರಶ್ನೆಗೆ ಕುಮಾರಣ್ಣ ಉತ್ತರಿಸಲಿ ಎಂದರು.
ಮೂಡಾದಲ್ಲಿ ಹಿಂದೆ ಡಿನೊಟಿಫೈ ಆಗಿರಲಿಲ್ಲ. ಆನಂತರದಲ್ಲಿ ಆಗಿದೆ. ಇಲ್ಲಿ ಫೈನಲ್ ನೊಟಿಪಿಕೇಶನ್ ಆಗಿರುವ ಪ್ರಾಪರ್ಟಿ. ಇದನ್ನ ಮಾಡಿದ್ದೇಗೆ? ಕೈಬಿಟ್ಟಿದ್ದೇಕೆ? ತನಿಖೆ ಮಾಡಿ ಅಂತ ರಾಜ್ಯಪಾಲರಿಗೆ ಯಾಕೆ ಕೊಟ್ಟಿಲ್ಲ? ಎಂದು ಕೇಳಿದರು.
ಸೋ ಫ್ರಾಂ್ಟ್, ಸೋ ಗುಡ್ ಅಂತ ಹೇಳ್ತಾರಲ್ಲ. ಅವರೇ ರಾಜ್ಯಪಾಲರ ಬಳಿ ಹೋಗಲಿ. ತನಿಖೆ ಮಾಡಿ ಅಂತ ಯಾಕೆ ಕೇಳ್ತಿಲ್ಲ ಎಂದರು.
ಮೂಡಾ ಪ್ರಕರಣದಲ್ಲಿ ಏನು ಾಲ್ಟ್ ಇದೆ ಮೊದಲು ಗೊತ್ತಾಗಲಿ. 50:50 ನಿವೇಶನ ತಪ್ಪು ಅಂತ ಆದರೆ, ಅವತ್ತು ಅನುಮತಿ ಕೊಟ್ಟವರು ಯಾರು? ಅವರ ಮೇಲೆ ಕ್ರಮಕೈಗೊಂಡಿಲ್ಲ? ಯಾವ ನೈತಿಕತೆ ಪಾದಯಾತ್ರೆ ಮಾಡಿದ್ರಿ ಎಂದು ಕೇಳಿದರು.
ನಾವು ಬಂದು ಒಂದೂವರೆ ವರ್ಷ ಆಗಿದೆ. ನ್ಯಾಯಾಂಗ ಸಮಿತಿಯನ್ನ ಸಿಎಂ ಮಾಡ್ತಿದ್ದಾರೆ. ಯಾರ ಕಾಲದಲ್ಲಿ ಕೊಟ್ಟಿದ್ದಾರೆ ಯಾಕೆ ಕೊಟ್ಟರು? ಇದರ ಬಗ್ಗೆ ಯಾಕೆ ಮಾತನಾಡ್ತಿಲ್ಲ? ಯಾಕೆ ಇದರ ಬಗ್ಗೆ ಕ್ರಮ ಅವರ ಮೇಲೆ ಆಗಿಲ್ಲ ಎಂದು ಪ್ರಶ್ನಿಸಿದರು.
ಅರ್ಕಾವತಿ ಡಿನೊಟಿಪಿಕೇಶನ್ ಪ್ರಕರಣದಲ್ಲಿ ನಗರಾಭಿವೃದ್ಧಿ ಇಲಾಖೆಗೆ ರಾಜ್ಯಪಾಲರ ಸೂಚನೆ ನೀಡಿರುವ ಬಗ್ಗೆ ನನಗೆ ಸಂಪೂರ್ಣ ಮಾಹಿತಿ ಇಲ್ಲ. ಯಾವ್ಯಾವ ವರದಿ ಇವೆ ಟೇಬಲ್ ಆಗುತ್ತವೆ ಎನ್ನುವುದನ್ನು ನೀವು ಸ್ವಲ್ಪ ಕಾದು ನೋಡಿ. ಎಲ್ಲವನ್ನೂ ಸ್ಪೀಡ್ ಮಾಡೋಕೆ ಪ್ರಯತ್ನ ಮಾಡ್ತೇವೆ ಎಂದು ಹೇಳಿದರು.
ಬಿಜೆಪಿಯವರಿಗೆ ಈ ಸರ್ಕಾರ ಉಳಿಯಬೇಕಿಲ್ಲ. ಹಾಗಾಗಿ ಈ ಫೈಟ್ ಶುರುವಾಗಿದೆ. ಪತ್ರ ಬರಲಿ ಆಮೇಲೆ ಮಾತನಾಡೋಣ ಎಂದರು.
ಮುನಿರತ್ನ ಹೆಚ್‌ಐವಿ ಟ್ರ್ಯಾಪ್ ಪ್ರಕರಣವನ್ನು ನಾನೂ ಮಾಧ್ಯಮಗಳಲ್ಲಿ ನೋಡ್ತಿದ್ದೇನೆ. ಸರ್ಕಾರ ಇದಕ್ಕೆ ಆ್ಯಕ್ಟ್ ಮಾಡ್ತಿದೆ. ಡಿಕೆ ಬ್ರದರ್ಸ್‌ಗೆ ಮುನಿರತ್ನ ವಿರುದ್ಧ ಏನು ರಿವೇಂಜ್ ಇದೆ ಎನ್ನುವುದು ಗೊತ್ತಿಲ್ಲ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net