ಹೊಸ ಲುಕ್​ನಲ್ಲಿ ಮಿಂಚಿದ ಎಂ ಎಸ್ ಧೋನಿ; ಫೋಟೋ ವೈರಲ್

dlook
Published on

ಟೀಂ ಇಂಡಿಯಾದ ಮಾಜಿ ಕೂಲ್ ಕ್ಯಾಪ್ಟನ್ ಎಂ.ಎಸ್.ಧೋನಿ ಹೊಸ ಅವತಾರದಲ್ಲಿ ಕಾಣಿಸಿಕೊಂಡು ಎಂ.ಎಸ್​​ ಧೋನಿ ಕಟ್ಟಿಂಗ್​​​ ತುಂಬಾನೆ ಫೇಮಸ್​​ ಆಗಿತ್ತು. ಬಾಲಿವುಡ್ ಹಾಗೂ ಕ್ರಿಕೆಟಿಗರ ನೆಚ್ಚಿನ ಹೇರ್ ಸ್ಟೈಲಿಸ್ಟ್ ಹಲಿಮ್ ಹಕ್ಕಿಂ ನೀಡಿರುವ ಮೇಕ್ ಓವರ್ನಲ್ಲಿ ಧೋನಿ ಸಖತ್ ಸ್ಟೈಲಿಶ್ ಆಗಿ ಕಾಣಿಸಿಕೊಂಡಿದ್ದರು.


ಇದೀಗ ಮತ್ತೆ ಎಂ.ಎಸ್​ ಧೋನಿ ಕಲರಿಂಗ್​​ ಮಾಡಿಸಿ ಹೊಸ ಹೇರ್​​ಕಟ್​​ ಮಾಡಿಸಿಕೊಂಡಿದ್ದು, ಸದ್ಯ ಆ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಟಾಪ್ ಸೆಲೆಬ್ರಿಟಿಗಳನ್ನು ಮತ್ತಷ್ಟು ಸುಂದರವಾಗಿ ಮಾಡುವ ಕೆಲಸದಲ್ಲಿ ಪ್ರಸಿದ್ಧ ಕೇಶ ವಿನ್ಯಾಸಕಿ ಆಲಿಮ್ ಹಕೀಮ್ ತುಂಬಾನೆ ಫೇಮಸ್​​. ಇದೀಗ ಎಮ್​.ಎಸ್​​ ಧೋನಿಗೂ ಮತ್ತೆ ಹೊಸ ಹೇರ್​​ಸ್ಟೈಲನ್ನ ಅವರೇ ಮಾಡಿದ್ದಾರೆ.


ಆಲಿಮ್ ಹಕೀಮ್ ಇತ್ತೀಚೆಗೆ ಇನ್ಸ್​​​ಟಾಗ್ರಾಂನಲ್ಲಿ ಧೋನಿಯ ಹೊಸ ಲುಕ್​ನ ಫೋಟೋಗಳನ್ನ ಹಂಚಿಕೊಂಡಿದ್ದರು. ಈ ಮೇಕ್ ಓವರ್‌ಗೆ ಅಭಿಮಾನಿಯೊಬ್ಬರು ಧೋನಿಗೆ ಮಾಡಿಕೊಟ್ಟ ಫೋಟೋನ ಸಹಾಯ ತೆಗೆದುಕೊಂಡಿದ್ದಾರೆ ಸ್ಟೈಲಿಸ್ಟ್​​ ಹಲಿಮ್ ಹಕ್ಕಿಂ.


ಎಂಎಸ್ ಧೋನಿ ಅವರೊಂದಿಗೆ ಕೆಲಸ ಮಾಡುವ ಅವಕಾಶ ಸಿಕ್ಕಿದ್ದಕ್ಕೆ ನಾನು ಆಭಾರಿಯಾಗಿದ್ದೇನೆ. ಎಂ. ಎಸ್​ ಧೋನಿ ಯಾವುದೇ ಹಿಂಜರಿಕೆಯಿಲ್ಲದೆ ಈ ಕಟ್ಟಿಂಗ್​ ಮಾಡಿಸಿಕೊಂಡಿದ್ದಾರೆ. ಧೋನಿಯ ಕೂದಲನ್ನು ಉದ್ದವಾಗಿ ಬೆಳೆಸಿ ನಂತರ ಅದನ್ನ ಕಟ್​​ ಮಾಡಿ ಕಲರಿಂಗ್​​ ಮಾಡುವ ಪ್ಲಯಾನನ್ನ ಹೇರ್​ಸ್ಟ್ಐಲಿಸ್ಟ್​​ ಮತ್ತು ಕ್ರಿಕೆಟಿಗ ಧೋನಿ ಮೊದಲೇ ಹೊಂದಿದ್ದರು. ಅದರಂತೆಯೇ ಇದೀಗ ಧೋನಿ ಹೊಸ ಲುಕ್​​ ಪಡೆದುಕೊಂಡಿದ್ದಾರೆ.


ಇನ್‌ಸ್ಟಾಗ್ರಾಮ್ ಪೋಸ್ಟ್‌ನಲ್ಲಿ ಆಲಿಮ್ ಹಕೀಮ್, ನಾನು ಮಾಹಿ ಭಾಯಿ ಅವರ ಉದ್ದನೆಯ ಕೂದಲಿನ ದೊಡ್ಡ ಅಭಿಮಾನಿಯಾಗಿದ್ದೇನೆ, ಕೂದಲಿಗೆ ಹೊಸ ವಿನ್ಯಾಸ ಮತ್ತು ಬಣ್ಣವನ್ನು ರಚಿಸಲು ನಾವು ನಿರ್ಧರಿಸಿದ್ದೆವು.


ಇದೀಗ ಧೋನಿಗೆ ಹೊಸ ಲುಕ್​​​ ನೀಡಿರುವುದು ತುಂಬಾನೆ ಖುಷಿ ತಂದಿದೆ ಎಂದು ಇನ್ಸ್ಟಾಗ್ರಾಂ ಪೋಸ್ಟ್​​ನಲ್ಲಿ ಬರೆದಿದ್ದಾರೆ. ಧೋನಿಯವರ ನ್ಯೂ ಲುಕ್​​ ಪೋಸ್ಟ್​​ ಮಾಡಲಾದ ಒಂದು ಗಂಟೆಯೊಳಗೆ ತ್ವರಿತವಾಗಿ 70 ಸಾವಿರ ಲೈಕ್‌ಗಳನ್ನು ಗಳಿಸಿದ್ದು, ಜನರು ಹೆಚ್ಚಿನ ಸಂಖ್ಯೆಯಲ್ಲಿ ಕಾಮೆಂಟ್​​ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net