ಪ್ರಸಾದ್​ ಯೋಜನೆಗೆ ಜಿಲ್ಲೆಗೆ ವಿಸ್ತರಿಸುವಂತೆ ಸಂಸದರ ಆಗ್ರಹ

ಸಂಸದ ಎಸ್​.ಮುನಿಸ್ವಾಮಿ ಭಾವ ಚಿತ್ರ
ಸಂಸದ ಎಸ್​.ಮುನಿಸ್ವಾಮಿ ಭಾವ ಚಿತ್ರ
Published on

ಕೋಲಾರ: ಕೇಂದ್ರ ಸರ್ಕಾರದ ಪ್ರಸಾದ್​ ಯೋಜನೆಯು ಪ್ರವಾಸೋದ್ಯಮ, ಪ್ರೇಕ್ಷಣಿಯ ಸ್ಥಳಗಳನ್ನು ಅಭಿವೃದ್ಧಿಪಡಿಸಲು ಸಹಾಯಧನ ನೀಡುವ ಯೋಜನೆಯಾಗಿದೆ. ಪ್ರಸ್ತುತ ಸರ್ಕಾರದ ಮುಂದೆ ಕರ್ನಾಟಕದಿಂದ ಇಂಥ ಯೋಜನೆಗಾಗಿ ಯಾವುದೇ ಪ್ರಸ್ತಾವನೆ ಸಲ್ಲಿಕೆಯಾಗಿಲ್ಲ. ರಾಜ್ಯ ಸರ್ಕಾರವು ಜಿಲ್ಲೆಯ ಪ್ರೇಕ್ಷಣಿಯ ಸ್ಥಳಗಳ ಅಭಿವೃದ್ಧಿಗೆಗೆ ಪ್ರಸ್ತಾವನೆ ಸಲ್ಲಿಸಿದರೆ ಪರಿಗಣಿಸಲಾಗುವುದು ಎಂದು ಪ್ರವಾಸೋದ್ಯಮ ಕೇಂದ್ರ ಸಚಿವ ಜಿ.ಕಿಶನ್​ರೆಡ್ಡಿ ಸ್ಪಷ್ಟಪಡಿಸಿದರು.

ಸಂಸತ್​ ಭವನದಲ್ಲಿ ಬುಧವಾರ ಚುಕ್ಕೆ ಗುರುತು ಇಲ್ಲದ ಪ್ರಶ್ನೆ ಮೂಲಕ "ಪ್ರಸಾದ್​' ಯೋಜನೆಯನ್ನು ಕರ್ನಾಟಕಕ್ಕೆ ವಿಸ್ತರಿಸಬೇಕು ಎಂಬ ಸಂಸದ ಮುನಿಸ್ವಾಮಿ ಅವರ ಮನವಿಗೆ ಸಚಿವರು ಉತ್ತರಿಸಿದರು.

ಜಿಲ್ಲೆಯ ಪ್ರವಾಸೋದ್ಯಮ ಕ್ಷೇತ್ರಗಳು ಅಭಿವೃದ್ಧಿಯಾಗುವುದಲ್ಲವೆ, ಜಿಲ್ಲೆಯ ಪ್ರೇಕ್ಷಣಿಯ ಸ್ಥಳಗಳಿಗೆ ಪ್ರವಾಸಿಗರ ಆಕರ್ಷಣೆಯಾಗುತ್ತವೆ. "ಪ್ರಸಾದ್​' ಯೋಜನೆಯಲ್ಲಿ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯ ಪ್ರವಾಸಿ ತಾಣಗಳಿಗೆ ವಿಸ್ತರಿಸಲು ರಾಜ್ಯ ಸರ್ಕಾರ ಸೂಕ್ತ ಪ್ರಸ್ತಾವನೆ ಸಲ್ಲಿಸಬೇಕಿದೆ ಎಂದು ಎಸ್.ಮುನಿಸ್ವಾಮಿ ತಿಳಿಸಿದರು.

ರಾಜ್ಯ ಸರ್ಕಾರವು ಪರಿಶಿಷ್ಟ ಜಾತಿ ಶೇ.10 ಮೀಸಲಾತಿ ಹೆಚ್ಚಿಸಿರುವಂತೆ ಕೇಂದ್ರ ಸರ್ಕಾರದಲ್ಲಿಯೂ ಮೀಸಲಾತಿ ಹೆಚ್ಚಿಸುವ ಪ್ರಸ್ತಾವ ಏನಾದರು ಇದೆಯೇ ಎಂದು ಪ್ರಶ್ನಿಸಿದ ಸಂಸದರಿಗೆ ಪ್ರಸ್ತುತ ಅಂಥ ಯಾವುದೇ ಪ್ರಸ್ತಾವನೆ ಸರ್ಕಾರದ ಮುಂದಿಲ್ಲ ಎಂದು ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆ ರಾಜ್ಯ ಖಾತೆ ಸಚಿವ ಎ.ನಾರಾಯಣಸ್ವಾಮಿ ಸ್ಪಷ್ಟಪಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net