ಸನಾತನ ಧರ್ಮ ವಿರೋಧಿಸುವವರ ರಾಜಕೀಯ ಅಂತ್ಯ ಖಚಿತ: ಸಿಎಂ ಶಿವರಾಜ್ ಸಿಂಗ್ ಚೌಹಾಣ್

Untitled design - 2023-09-07T201131.077
Published on

ಮಧ್ಯಪ್ರದೇಶ: ಕಳೆದ ಒಂದೆರೆಡು ದಿನಗಳಿಂದ ದೇಶದಲ್ಲಿ ಭಾರೀ ವಿವಾದಕ್ಕೆ ಗುರಿಯಾಗಿರುವ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರ ಪುತ್ರ, ಡಿಎಂಕೆ ನಾಯಕ ಉದಯನಿಧಿ ಸ್ಟಾಲಿನ್ ನೀಡಿದ ಸನಾತನ ಧರ್ಮದ ನಿರ್ಮೂಲನೆಯ ಹೇಳಿಕೆಗೆ ಇದೀಗ ಮಧ್ಯಪ್ರದೇಶ ಸಿಎಂ ಶಿವರಾಜ್ ಸಿಂಗ್ ಚೌಹಾಣ್ ತಿರುಗೇಟು ಕೊಟ್ಟಿದ್ದಾರೆ.

ಗುರುವಾರ (ಸೆಪ್ಟಂಬರ್​ 06) ಜನ್ಮಾಷ್ಟಮಿ ಸಂದರ್ಭದಲ್ಲಿ ಮಾತನಾಡಿದ ಶಿವರಾಜ್ ಸಿಂಗ್ ಚೌಹಾಣ್, ಮಹಾಭಾರತದ 'ಯದಾ ಯದಾ ಹಿ ಧರ್ಮಸ್ಯ' ಶ್ಲೋಕವನ್ನು ಪಠಿಸಿ, ತದನಂತರ "ಸನಾತನ ಧರ್ಮವನ್ನು ವಿರೋಧಿಸುವವರ ರಾಜಕೀಯ ಅಂತ್ಯ ನಿಶ್ಚಿತ. ಸನಾತನ ಧರ್ಮಕ್ಕೆ ಯಾವುದೇ ಆರಂಭ ಅಥವಾ ಅಂತ್ಯವಿಲ್ಲ" ಎಂದು ಹೇಳುವ ಮುಖೇನ ಸ್ಟಾಲಿನ್​ ಪುತ್ರನ ಹೇಳಿಕೆಗೆ ತಿರುಗೇಟು ನೀಡಿದರು.

ವಿವಾದಕ್ಕೆ ಕಾರಣವೇನು?: ಡಿಎಂಕೆ ನಾಯಕ ಮತ್ತು ತಮಿಳುನಾಡು ಸಿಎಂ ಎಂ.ಕೆ. ಸ್ಟಾಲಿನ್ ಅವರ ಪುತ್ರ ಉದಯನಿಧಿ ಸ್ಟಾಲಿನ್ ಸನಾತನ ಧರ್ಮವನ್ನು ಸೊಳ್ಳೆ, ಡೆಂಗ್ಯೂ, ಮಲೇರಿಯಾ, ಜ್ವರ ಮತ್ತು ಕರೋನಾದೊಂದಿಗೆ ಹೋಲಿಸಿದ್ದು, ಈ ರೋಗಗಳಂತೆಯೇ ಇದನ್ನು ನಿರ್ಮೂಲನೆ ಮಾಡಬೇಕು ಎಂದು ಹೇಳಿದರು. ಸದ್ಯ ಈ ಹೇಳಿಕೆಗೆ ದೇಶದೆಲ್ಲೆಡೆ ಭಾರೀ ವಿರೋಧ, ಟೀಕೆ ವ್ಯಕ್ತವಾಗಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net