ಅಕ್ಷರ ಅರಿವು ಮೂಡಿಸುವ ಸಾಧನ

skp mp ragavendra
ಕೋಡಿಹಳ್ಳಿಯಲ್ಲಿ ನೂತನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಟ್ಟಡವನ್ನು ಸಂಸದ ಬಿ.ವೈ. ರಾಘವೇಂದ್ರ ಉದ್ಘಾಟಿಸಿದರು. ಕೊಳಗಿ ರೇವಣಪ್ಪ , ಸಣ್ಣ ಹನುಮಂತಪ್ಪ, ಮಂಜಪ್ಪ , ಚಂದ್ರಶೇಖರ, ಇಂದುಧರ, ಕವಲಿ ಸುಬ್ರಹ್ಮಣ್ಯ, ಎಸ್. ನಿರಂಜನ, ರಾಘವೇಂದ್ರ ಇತರರಿದ್ದರು.
Published on

ಶಿಕಾರಿಪುರ: ದೇಶದ ಅಭ್ಯುದಯ ಶಿಕ್ಷಣದಿಂದ ಮಾತ್ರ ಸಾಧ್ಯ. ಯಾವ ಕಾರಣಕ್ಕೂ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು. ಅಕ್ಷರ ನಮಗೆ ಅರಿವು ಮೂಡಿಸುವ ಸಾಧನ ಎಂದು ಸಂಸದ ಬಿ.ವೈ. ರಾಘವೇಂದ್ರ ಹೇಳಿದರು.
ಗುರುವಾರ ಸಮೀಪದ ಕೋಡಿಹಳ್ಳಿ ಗ್ರಾಮದಲ್ಲಿ ಸರ್ಕಾರಿ ಕಿರಿಯ ಮತ್ತು ಹಿರಿಯ ಪ್ರಾಥಮಿಕ ಶಾಲೆಯ ಶಾಲಾ ಕಟ್ಟಡ ಉದ್ಘಾಟಿಸಿ ಮಾತನಾಡಿದ ಅವರು, ಶಿಕ್ಷಕರಿಗೆ ದೇಶದ ಭವಿಷ್ಯ ರೂಪಿಸುವ ಶಕ್ತಿಯಿದೆ ಎಂದರು.
ಮಗುವಿಗೆ ಮನೆಯೇ ಮೊದಲ ಪಾಠಶಾಲೆ. ಮನೆಯಲ್ಲಿಯೇ ಮೊದಲ ಸಂಸ್ಕಾರ ಸಿಗುತ್ತದೆ, ಮಕ್ಕಳಿಗೆ ಸರಿ, ತಪ್ಪುಗಳ ಸರಿಯಾದ ಜ್ಞಾನ ನೀಡಬೇಕು. ಶಿಕ್ಷಕರು ವಿದ್ಯಾಭ್ಯಾಸದ ಜತೆಗೆ ಜೀವನದ ಮೌಲ್ಯಗಳನ್ನು ಹಾಗೂ ಸಂಸ್ಕಾರಗಳ ಅರಿವು ಮೂಡಿಸಬೇಕು. ಮಕ್ಕಳೇ ದೇಶದ ಆಸ್ತಿ ಎಂದು ಹೇಳಿದರು.
ಈ ಸಂದರ್ಭದಲ್ಲಿ ಅರಣ್ಯ ಅಭಿವೃದ್ಧಿ ನಿಗಮದ ಮಾಜಿ ಉಪಾಧ್ಯಕ್ಷ ಕೊಳಗಿ ರೇವಣಪ್ಪ , ಭೋವಿ ಅಭಿವೃದ್ಧಿ ನಿಗಮದ ಮಾಜಿ ನಿರ್ದೇಶಕ ಸಣ್ಣ ಹನುಮಂತಪ್ಪ, ಪ್ರಮುಖರಾದ ಮಂಜಪ್ಪ, ಚಂದ್ರಶೇಖರ, ಇಂದುಧರ, ತಾಪಂ ಮಾಜಿ ಅಧ್ಯಕ್ಷ ಕವಲಿ ಸುಬ್ರಹ್ಮಣ್ಯ, ತೊಗರ್ಸಿ ಗ್ರಾಪಂ ಅಧ್ಯಕ್ಷ ಎಸ್. ನಿರಂಜನ, ರಾಘವೇಂದ್ರ ಹಾಗೂ ಗ್ರಾಮದ ಹಿರಿಯರು ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net