ಟಿಕ್​-ಟಾಕ್​ 3 ಲಕ್ಷ ವಿಡಿಯೋ , ಇನ್ಸ್​​​ಟಾ 1.3 ಮಿಲಿಯನ್​ ಎಲ್ಲೆಲ್ಲೂ Moye Moye ಹವಾ..! ಅಷ್ಟಕ್ಕೂ ಇದು Moye Moye ನೇ ಅಲ್ಲ ; ಧಾರುಣ ನೋವಿನ ಹಾಡಿಗೆ 60 ಮಿಲಿಯನ್​​​ ವ್ಯೂಸ್​…!

moyemix
Published on

ಇತ್ತೀಚಿನ ದಿನಗಳಲ್ಲಿ Moye Moye ರೇಂಜ್​ಗೆ ಸಾಮಾಜಿಕ ಜಾಲತಾನದಲ್ಲಿ ಯಾವ ಹಾಡೂ ವೈರಲ್​ ಆಗಿರ್ಲಿಲ್ಲ. ನೀವು ಮೊಬೈಲ್​ ಬಳಸುತ್ತಿದ್ದೀರಿ ಅಂದ್ರೆ ಒಮ್ಮೆಯಾದ್ರೂ ಈ MOYE MOYE ಹಾಡನ್ನ ಕೇಳಿಯೇ ಇರ್ತೀರಿ. ಅಷ್ಟಕ್ಕೂ ಈ ಹಾಡಿನ ಹಿಂದಿದೆ ಧಾರುಣ ನೋವಿನ ಕಥೆ.

ಈ ವೈರಲ್​ ಮ್ಯೂಸಿಕ್​ ನಾವು ಅಂದುಕೊಂಷ್ಟು ಫನ್ನಿ ಅಥವಾ ಹಾಸ್ಯಾಸ್ಪದವಲ್ಲ ಯಾಕಂದ್ರೆ ಇದರ ಹಿಂದೆ ಒಂದು ನೋವಿನ ಕಥೆ ಇದೆ. ಅದುMOYE MOYE ನೇ ಅಲ್ಲ ನಾವು ಅದನ್ನ ತಪ್ಪಾಗಿ ಉಚ್ಚಾರ ಮಾಡ್ತಿದ್ದೀವಿ. ಹಾಗಿದ್ರೆ ಈ MOYE MOYE ಅಂದ್ರೇನು ಅಷ್ಟಕ್ಕೂ ಎಲ್ಲಿಂದ ಬಂತು ಹೇಗೆ ಟ್ರೆಂಡ್​ ಆಯ್ತು ಎಲ್ಲವನ್ನ ನೋಡೋಣ.

ಎಲ್ಲಿಂದ ಬಂತು ಮೋಯೆ ಮೋಯೆ?
ಮೋಯೆ ಮೋಯೆ ಜನ್ಮತಾಳಿದ್ದು, ಝಾನಮ್​(DZANUM) ಅನ್ನೋ ಸೆರೇಬಿಯನ್​ ಸಾಂಗ್​ನಲ್ಲಿ. ಸೆರೇಬಿಯನ್​ ಸಿಂಗರ್​ ತೆಯಾ ಡೋರಾ ಪೌಲಾಸ್ಕಾ, ಅಥವಾ ಶಾರ್ಟ್​​ ಆಗಿ ತೆಯಾ ಡೋರಾ ಈ ವರ್ಷ ಝಾನಮ್​(DZANUM) ಅನ್ನುವಂತಹವ ಸಾಂಗನ್ನ ರಿಲೀಸ್​​ ಮಾಡಿದ್ರು. ಆ ಸಾಂಗ್​ನಲ್ಲಿ ಬರುವಂತಹ ಕೋರಸ್​​ ಮೋಯೆ ಮೋಯೆ. ಯೂಟ್ಯೂಬ್​ನಲ್ಲಿ ಹಿಟ್​ ಆದ 3 ನಿಮಿಷದ ಈ ಸಾಂಗ್​ಗೆ 60 ಮಿಲಿಯನ್​ ವ್ಯೂಸ್​ ಬಂದಿದೆ.

ಖುದ್ದು ತೆಯಾ ಡೋರಾ ಅವರೇ ಈ ಸಾಂಗ್​ ಹಾಡಿ, ವಿಡಿಯೋದಲ್ಲೂ ಅವರೇ ಕಾಣಿಸಿಕೊಂಡಿದ್ದಾರೆ. ಸೆರೆಬಿಯಾದ ಸೋಲ್ಟಿಡನ್​ ವೋಲ್ಕೊವಿಕೊ ಅನ್ನುವವರು ಇದರ ಲಿರಿಕ್ಸ್​​ ಬರೆದಿದ್ದಾರೆ. ಲೋಕಾ ಜೋವೊನೋವಿಕ್​ ಇದನ್ನ ಕಂಪೋಸ್​ ಮಾಡಿದ್ದಾರೆ.

ಇನ್ಸ್​​ಟಾ, ಟಿಕ್​-ಟಾಕ್​, ರೀಲ್ಸ್​​ನಂತಹ ಶಾರ್ಟ್​ ವಿಡಿಯೋದಲ್ಲಿ ಈ ಟ್ಯೂನ್​​ ವೈರಲ್​ ಆಗಿದೆ. ಈ ಟ್ಯೂನ್​ಗೆ ಕಾಮಿಡಿ ರೀಲ್ಸ್​ ಮಾಡಿ ಅಪ್​ಲೋಡ್​ ಮಾಡಲಾಗುತ್ತಿದೆ. ಗಂಭೀರ ವಿಚಾರಗಳನ್ನೂ ಅಂದ್ರೆ ಆಕ್ಸಿಡೆಂಟ್​​ , ಸಾವು ಈ ರೀತಿಯ ದೃಶ್ಯಕ್ಕೂ ಈ ಹಾಡನ್ನ ಬಳಸಿಕೊಳ್ಳಲಾಗುತ್ತಿದೆ.

ಟಿಕ್​-ಟಾಕ್​ನಲ್ಲಿ 3 ಲಕ್ಷ ವಿಡಿಯೋ , ಇನ್ಸ್​​​ಟಾಲಿ 1.3 ಮಿಲಿಯನ್​ ಎಲ್ಲೆಲ್ಲೂ ಮೋಯೆ ಮೋಯೆ ಹವಾ..!
ಪೋಲೀಸ್​​, ಸಾಮಾನ್ಯ ಜನ, ಸೆಲೆಬ್ರಿಟಿ, ಸಾಕಷ್ಟು ಆಫಿಷಿಯಲ್​ ಪೊಲೀಸ್​ ಹ್ಯಾಂಡಲ್​​ಗಳಲ್ಲಿಯೂ ಈ ಹಾಡನ್ನ ಹಾಕೊಂಡು ರೀಲ್ಸ್ ಮಾಡುತ್ತಿದ್ದಾರೆ. ದಿಲ್ಲಿ, ಪಂಜಾಬ್​, ಹೈದರಾಬಾದ್​ ಪೊಲೀಸ್ರೂ ಸಹ ಟ್ರ್ಯಾಫಿಕ್​ ಜಾಗೃತಿಗೆ ಈ ಟ್ಯೂನ್​ ಬಳಸಿ ರೀಲ್ಸ್​ ಮಾಡುತ್ತಿದ್ದಾರೆ. ಈ ರೀತಿ ವೈರಲ್​ ಆದ ಹಾಡಿಗೆ ಟಿಕ್​-ಟಾಕ್​ನಲ್ಲಿ 3 ಲಕ್ಷ ವಿಡಿಯೋಸ್​​, ಇನ್ಸ್​​​ಟಾಲಿ 1.3 ಮಿಲಿಯನ್​ ವಿಡಿಯೋಸ್​, ಸ್ಪಾಟಿಫೈನಲ್ಲಿ 7.5 ಮಿಲಿಯನ್​ ಜನ ಈ ಹಾಡು ಕೇಳಿದ್ದಾರೆ.

MOYE MOYE ಅಂದ್ರೆ ಕಾಮಿಡಿ ಅಲ್ಲ..!
ಸಿಂಗರ್​ ತೆಯಾ ಡೋರಾ ಪೌಲಾಸ್ಕಾ ಹಾಡಿರುವ ಹಾಡು ವ್ಯಕ್ತಿಯೊಬ್ಬ ವೀಕ್​ ಆಗಿ ಎಮೋಷನಲ್​ ಆಗಿ ಹಾಡಿರುವಂತಹ ಹಾಡು. ಅದು ಮೋಯೆ ಮೋಯೆನೆ ಅಲ್ಲ ಬದಲಾಗಿ MOYE MORE (ಮೋಯೆ ಮೋರೆ). ಆದರೆ ಜನರಿಗೆ ಅದು ಮೋಯೆ ಮೋಯೆ ಅಂತ ಕೇಳಿಸುತ್ತಿದ್ದು ಜನರೂ ತಪ್ಪಾಗಿ ಉಚ್ಚರಿಸುತ್ತಿದ್ದಾರೆ. ಸೆರೆಬಿಯನ್​ ಭಾಷೆಯಲ್ಲಿ ಮೋಯೆ ಮೋರೆ ಅಂದ್ರೆ ನನ್ನ ದುಸ್ವಪ್ನಗಳು ಎಂಬ ಅರ್ಥ. ಪದೇ ಪದೇ ದುಸ್ವಪ್ನಗಳನ್ನ ಕಾಣುತ್ತಿರೋ ಆತ್ಮ ಸಾಂತ್ವನಕ್ಕಾಗಿ ಹಂಬಲಿಸುತ್ತಿರುತ್ತೆ. ಪ್ರೀತಿ ಸಿಗದೇ ರಿಜೆಕ್ಷನ್​ ಅನುಭವಿಸಿ, ನನ್ನ ಹಣೆಬರಹನೇ ಸರಿಯಿಲ್ಲ ಎಂದು ಈ ರೀತಿ ಹಾಡುತ್ತಿರುತ್ತಾಳೆ. ಇದೊಂದು ರೀತಿ ಹತಾಷೆ ಮತ್ತು ದು:ಖದ ಸಾಂಗ್​

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net