KGF​ ನಟಿ ಆಸ್ಪತ್ರೆಯಿಂದ ಡಿಸ್​ಚಾರ್ಜ್​​​; 9 ದಿನಗಳ ನಂತರ  ಅನಾರೋಗ್ಯದ ಬಗ್ಗೆ ಫ್ಯಾನ್ಸ್​​ ಬಳಿ ಹಂಚಿಕೊಂಡ ಮೌನಿ ರಾಯ್

Mouni Roy returns home after 9 days in hospital Shares health updates with fans
Published on

ಮುಂಬೈ: ಕೆಜಿಎಫ್​ ನಟಿ ಮೌನಿ ರಾಯ್ 9 ದಿನಗಳ ಕಾಲ ಆಸ್ಪತ್ರೆಗೆ ದಾಖಲಾಗಿದ್ದರಂತೆ. ಈ ಕುರಿತು ಅವರು ಇನ್​ಸ್ಟಾಗ್ರಾಮ್​ನಲ್ಲಿ ಫೋಟೋ ಸಹಿತ ಮಾಹಿತಿ ನೀಡಿದ್ದು ಫ್ಯಾನ್ಸ್​ ಶಾಕ್​ ಆಗಿದ್ದಾರೆ. ಈ ಪೋಸ್ಟ್​​ಗೆ ಅಭಿಮಾನಿಗಳು ಕಾಮೆಂಟ್​​ ಮಾಡುವ ಮೂಲಕವಾಗಿ ಆರೋಗ್ಯ ವಿಚಾರಿಸುತ್ತಿದ್ದಾರೆ.

ಒಂಬತ್ತು ದಿನಗಳವರೆಗೆ ಆಸ್ಪತ್ರೆಯಲ್ಲಿ ಇದ್ದೆ. ಇಂದು ಡಿಸ್​ಚಾರ್ಜ್​ ಆಗಿದ್ದೇನೆ ಎಂದಿದ್ದಾರೆ. ತಾವು ಆಸ್ಪತ್ರೆಗೆ ದಾಖಲಾಗಿದ್ದ ಕಾರಣವನ್ನು ನೀಡಲಿಲ್ಲ. ಬದಲಿಗೆ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿರುವುದಾಗಿ ತಿಳಿಸಿ ಪೋಸ್ಟ್ ಮಾಡಿದ್ದಾರೆ. ತಮ್ಮ ಪತಿಯ ಜತೆಗಿರುವ ಫೋಟೋ ಶೇರ್​ ಮಾಡಿಕೊಂಡಿದ್ದಾರೆ.

ನಟಿ ಆಸ್ಪತ್ರೆಗೆ ದಾಖಲಾಗಿದ್ದ ವಿಷಯ ಕೇಳಿ ಫ್ಯಾನ್ಸ್ ಹಲವಾರು ಪ್ರಶ್ನೆಗಳನ್ನು ಕೇಳುತ್ತಿದ್ದಾರೆ. ಆದರೆ ಅದಕ್ಕೆ ನಟಿ ಉತ್ತರಿಸಿಲ್ಲ. ಬದಲಿಗೆ ನಾನು ನಿಧಾನವಾಗಿ ಚೇತರಿಸಿಕೊಳ್ಳುತ್ತಿದ್ದೇನೆ ಎಂದಿದ್ದಾರೆ.

ಕಾರಣ ಕೇಳಲು ಅಭಿಮಾನಿಗಳು ಕಾತರರಾಗಿದ್ದರೂ, ಶೀಘ್ರದಲ್ಲೇ ಗುಣವಾಗಲಿ ಎಂಬ ಸಂದೇಶ ಕಳಿಸುತ್ತಿದ್ದಾರೆ. ಕಿರುತೆರೆ ಕಲಾವಿದರಾದ ನಿಯಾ ಶರ್ಮಾ, ದಿಶಾ ಪರ್ಮಾರ್‌, ಕರಣ್ ಟ್ಯಾಕರ್‌ ಸೇರಿದಂತೆ ಹಲವು ಸೆಲೆಬ್ರಿಟಿಗಳು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಹಾರೈಸಿದ್ದಾರೆ.

2022ರ ಜನವರಿಯಲ್ಲಿ ನಟಿ, ಉದ್ಯಮಿ ಸೂರಜ್ ನಂಬಿಯಾರ್ ಅವರೊಂದಿಗೆ ವಿವಾಹವಾದರು. ದಾಂಪತ್ಯ ಜೀವನದ ಜತೆಗೆ ಕೆಲವು ಸಿನಿಮಾಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net