ಉನ್ನತ ಸಾಧನೆ ಮಾಡಲು ಪ್ರೇರೇಪಿಸಿ

11THYAGARTHI
ತ್ಯಾಗರ್ತಿ ಸಮೀಪದ ಇಡುವಳ್ಳಿ ಸೇಂಟ್ ಆಂತೋನಿ ಶಾಲೆ ಸಭಾಂಗಣದಲ್ಲಿ ಏರ್ಪಡಿಸಿದ್ದ ಬರೂರು ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮವನ್ನು ಬರೂರು ಗ್ರಾಪಂ ಅಧ್ಯಕ್ಷ ಖಂಡೋಜಪ್ಪ ಉದ್ಘಾಟಿಸಿದರು. ಪರಶುರಾಮಪ್ಪ, ಡಾ. ಅನ್ನಪೂರ್ಣಾ, ಜೋಗಿನಾ ಆಂತೋನಿ, ಗಣಪತಿ, ಇಸಾಕ್ ಇತರರಿದ್ದರು.
Published on

ತ್ಯಾಗರ್ತಿ: ಮಕ್ಕಳ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸುವ ಕೆಲಸ ಆಗಬೇಕು ಎಂದು ಬರೂರು ಗ್ರಾಪಂ ಅಧ್ಯಕ್ಷ ಖಂಡೋಜಪ್ಪ ಹೇಳಿದರು.

ಸಮೀಪದ ಇಡುವಳ್ಳಿ ಸೇಂಟ್ ಆಂತೋನಿ ಶಾಲೆ ಸಭಾಂಗಣದಲ್ಲಿ ಏರ್ಪಡಿಸಿದ್ದ ಬರೂರು ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳಲ್ಲಿರುವ ಪ್ರತಿಭೆ ಗುರುತಿಸಿ ಉನ್ನತ ಸಾಧನೆ ಮಾಡಲು ಸೂಕ್ತ ಪ್ರೋತ್ಸಾಹ ಹಾಗೂ ಮಾರ್ಗದರ್ಶನ ನೀಡಬೇಕು ಎಂದು ತಿಳಿಸಿದರು.
ಬಿಇಒ ಪರಶುರಾಮಪ್ಪ ಮಾತನಾಡಿ, ಮಗುವಿನ ಮನಸ್ಸು ಅತ್ಯಂತ ಸೂಕ್ಷ್ಮ. ಅಂತಹ ಮನಸ್ಸು ಅರ್ಥ ಮಾಡಿಕೊಂಡು ಕಲಿಸುವ ಹಾಗೂ ಪ್ರೋತ್ಸಾಹಿಸುವ ಕಾರ್ಯವಾಗಬೇಕು. ಇಲಾಖೆಯು ಮಕ್ಕಳ ಸೃಜನಶೀಲ ಆಲೋಚನೆ ಬಗ್ಗೆ ವಿಶೇಷ ಗಮನ ಹರಿಸುತ್ತಿದೆ. ಈ ನಿಟ್ಟಿನಲ್ಲಿ ಸಮುದಾಯದ ಸಹಕಾರದೊಂದಿಗೆ ಉತ್ತಮವಾದ ಕಾರ್ಯಕ್ರಮ ಆಯೋಜಿಸಲಾಗುವುದು ಎಂದು ಮಾಹಿತಿ ನೀಡಿದರು.
ಶಿಕ್ಷಕರ ಸಂಘದ ಅಧ್ಯಕ್ಷ ಮಾಲತೇಶಪ್ಪ ಮಾತನಾಡಿ, ಮಕ್ಕಳ ಪ್ರತಿಭೆ ಅನಾವರಣಕ್ಕೆ ಪ್ರತಿಭಾ ಕಾರಂಜಿ ಸೂಕ್ತ ವೇದಿಕೆ. ಇಂತಹ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.
ಮುಖ್ಯಶಿಕ್ಷಕ ರೆವರೆಂಡ್ ಫಾದರ್ ಜೋಗಿನಾ ಅಂತೋನಿ, ಗ್ರಾಪಂ ಸದಸ್ಯರಾದ ಗಣಪತಿ, ಇಸಾಕ್, ಸಮನ್ವಯಾಧಿಕಾರಿ ಡಾ. ಅನ್ನಪೂರ್ಣಾ, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಭೂಮೇಶ್, ಎಸ್‌ಡಿಎಂಸಿ ಅಧ್ಯಕ್ಷ ಜಾನ್, ಪ್ರಮುಖರಾದ ಸೋಮಪ್ಪ, ಬಸವರಾಜಪ್ಪ, ಲಕ್ಷ್ಮಣ್, ಮನೋಹರಪ್ಪ, ನಾಗರಾಜ್, ಶೈಲಜಾ, ಪಾಲಾಕ್ಷಪ್ಪ, ಪಿಡಿಒ ರಾಜು, ಜ್ಯೋತಿ ರೀನಾ, ಡಿ.ಪರಶುರಾಮಪ್ಪ, ರೂಪಾ, ಸತೀಶ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net