

ಕೋಲಾರ:ರಾಜ್ಯದ ಅಭಿವೃದ್ಧಿ ವಿಚಾರದಲ್ಲಿ ಕಾಂಗ್ರೆಸ್ ಸರ್ಕಾರ ನಾಟಕ ಮಾಡುತ್ತಿದೆ. ಅಧಿಕಾರ ಉಳಿಸಿಕೊಳ್ಳಲು ಸಿದ್ದರಾಮಯ್ಯ ಪರಿತಪಿಸುತ್ತಿದ್ದಾರೆ. ಬಿಟ್ಟಿ ಗ್ಯಾರಂಟಿಗಳಿಂದ ತಾಯಂದಿರನ್ನು ಸರ್ಕಾರ ಸಂಕಷ್ಟಕ್ಕೆ ದೂಡುತ್ತಿದೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಆರೋಪಿಸಿದರು.
ನಗರದಲ್ಲಿ ಸೋಮವಾರ ಜೆಡಿಎಸ್-ಬಿಜೆಪಿ ಅಭ್ಯರ್ಥಿ ಪರ ಹಮ್ಮಿಕೊಂಡಿದ್ದ ಪ್ರಚಾರ ಸಭೆಯಲ್ಲಿ ಮಾತನಾಡಿ, ನರೇಂದ್ರ ಮೋದಿ ಅವರ ನಾಯಕತ್ವದಿಂದ ದೇಶದ ಅಭಿವೃದ್ಧಿ, ಆರ್ಥಿಕ ಪರಿಸ್ಥಿತಿ ಸುಧಾರಣೆಯಾಗಿದೆ. ಕಾಂಗ್ರೆಸ್ ನಾಯಕರು ಗ್ಯಾರಂಟಿಗಳ ಬಗ್ಗೆ ಮಾತನಾಡುತ್ತಾರೆ ಹೊರತು ಬೇರೆ ವಿಷಯ ಗೊತ್ತಿಲ್ಲ. ಇದನ್ನು ನಂಬಿ ಮುಂದಿನ ದಿನಗಳಲ್ಲಿ ಮಹಿಳೆಯರು ಸಂಕಷ್ಟಕ್ಕೆ ಒಳಗಾಗಬೇಡಿ ಎಂದು ಸಲಹೆ ನೀಡಿದರು.
ನಮ್ಮ ನೀರು ನಮ್ಮ ಹಕ್ಕು' ಷೋಷ ವಾಕ್ಯದೊಂದಿಗೆ ಕಾಲ್ನಡಿಗೆ ಮಾಡಿದ ಸರ್ಕಾರ ಈಗನಮ್ಮ ನೀರನ್ನು ತಮಿಳುನಾಡಿಗೆ ಹರಿಸುತ್ತಿದ್ದಾರೆ. ಮೇಕೆದಾಟಿಗೆ ಅನುಮತಿ ನೀಡಲು ತಕರಾರು ತೆಗೆದಿರುವುದು ಸಿದ್ದರಾಮಯ್ಯ ಅವರ ತಮಿಳುನಾಡಿನ ಸ್ನೇಹಿತರೇ. ಮೊದಲು ತಮಿಳುನಾಡಿನಿಂದ ಅನುಮತಿ ತನ್ನಿ, ನರೇಂದ್ರ ಮೋದಿ ಅವರಿಂದ 5 ಸೆಕೆಂಡಿನಲ್ಲಿ ಕೊಡಿಸುತ್ತೇವೆ ಎಂದು ಸಿದ್ದರಾಮಯ್ಯಗೆ ಎಚ್‌ಡಿಕೆ ಸವಾಲು ಹಾಕಿದರು.ಶಾಸಕರಾದ ಜಿ.ಕೆ.ವೆಂಕಟಶಿವಾರೆಡ್ಡಿ, ಸಮೃದ್ಧಿ ಮಂಜುನಾಥ್, ರವಿಕುಮಾರ್, ಸಿಮೆಂಟ್ ಮಂಜುನಾಥ್, ಜೆಡಿಎಸ್ ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ರಶ್ಮಿ ರಾಮೇಗೌಡ, ಎಂಎಲ್ಸಿ ಇಂಚರ ಗೋವಿಂದ ರಾಜು, ಬಿಜೆಪಿ ಜಿಲ್ಲಾಧ್ಯಕ್ಷ ಡಾ.ಕೆ.ಎನ್.ವೇಣುಗೋಪಾಲ್, ಜೆಡಿಎಸ್ ತಾಲೂಕು ಅಧ್ಯಕ್ಷ ಕಾಡೇನಹಳ್ಳಿ ನಾಗರಾಜ್, ಮಾಜಿ ಶಾಸಕರಾದ ವರ್ತೂರು ಆರ್.ಪ್ರಕಾಶ್, ಕೆ.ಎಸ್.ಮಂಜುನಾಥ್ ಗೌಡ, ಜೆ.ಕೆ.ಕೃಷ್ಣಾರೆಡ್ಡಿ, ವೆಂಕಟಮುನಿಯಪ್ಪ, ಎಂ.ನಾರಾಯಣಸ್ವಾಮಿ, ಮುಖಂಡರಾದ ಹೂಡಿ ವಿಜಯ್‌ಕುಮಾರ್, ಸಿಎಂಆರ್ ಶ್ರೀನಾಥ್ ಇದ್ದರು.
ಸಿದ್ದರಾಮಯ್ಯ ಅವರು ಟಿಎಸ್‌ಪಿ, ಎಸ್‌ಟಿಪಿ ಯೋಜನೆಯಡಿ ಕೋಲಾರ ಅಲ್ಪಸಂಖ್ಯಾತರಿಗೆ 10 ಕೋಟಿ, ಬಂಗಾರಪೇಟೆ, ಕೋಲಾರಕ್ಕೆ ಕೊಟ್ಟಿದ್ದು 1.50 ಕೋಟಿ ರೂ.! ಮುಳಬಾಗಿಲಿಗೆ ಏನು ಕೊಟ್ಟಿದ್ದೀರಿ ?, ಆ ಶಾಸಕರು ಯಾರ ಮಕ್ಕಳು, ನಾವು ಯಾರ ಮಕ್ಕಳು? ನೀವು ಇಡೀ ರಾಜ್ಯಕ್ಕೆ ಮುಖ್ಯಮಂತ್ರಿ ಎಂಬುದನ್ನು ಮರೆತಿದ್ದೀರಿ. ಚುನಾವಣೆ ವೇಳೆ ದಲಿತರು, ಮುಸ್ಲಿಂರನ್ನು ನೆನಪಿಸಿಕೊಳ್ಳುವ ಕಾಂಗ್ರೆಸ್‌ನವರು ಬೇರೆ ಸಮಯದಲ್ಲಿ ಮುಸ್ಲಿಮರನ್ನು ಚಿನ್ನದಂಗಡಿಯಲ್ಲಿ ಅಡ ಇಡುತ್ತಾರೆ.
| ಸಮೃದ್ಧಿ ಮಂಜುನಾಥ್, ಶಾಸಕ, ಮುಳಬಾಗಿಲು