ಮೊಬೈಲ್ ಚಾರ್ಜಿಗೆ ಇಟ್ಟು ಮಲಗಿದ್ರು- ಮನೆ ಸಹಿತ ಸಜೀವ ದಹಿಸಿ ಹೋದ್ರು ಅಮ್ಮ-ಮಕ್ಕಳು..

Woman
Published on

ಕರೂರ್​: ರಾತ್ರೋರಾತ್ರಿ ಮನೆಗೆ ಬೆಂಕಿ ತಗುಲಿ ಮಹಿಳೆ ಹಾಗೂ ಅವರ ಅವಳಿ ಗಂಡು ಮಕ್ಕಳು ಮೃತಪಟ್ಟ ದುರ್ಘಟನೆ ತಮಿಳುನಾಡಿನ ಕರೂರ್​​ನಲ್ಲಿ ನಡೆದಿದೆ.

ಮುತ್ತುಲಕ್ಷ್ಮೀ (29) ಮೃತ ಮಹಿಳೆ. ಕರೂರ್​​​ನ ರಾಯನೂರ್​ ಸಮೀಪದ ಪಟ್ಟಣದಲ್ಲಿ ತನ್ನಿಬ್ಬರು ಅವಳಿ ಮಕ್ಕಳೊಂದಿಗೆ ವಾಸವಾಗಿದ್ದರೂ. ಇವರಿಬ್ಬರಿಗೂ ಇನ್ನೂ 3 ವರ್ಷ. ಈಕೆಗೆ ಕಳೆದ ಆರು ವರ್ಷಗಳ ಹಿಂದೆ ಬಾಲಕೃಷ್ಣನ್​ ಎಂಬುವರೊಂದಿಗೆ ವಿವಾಹವಾಗಿದೆ. ಅವರು ಸಣ್ಣ ಹೋಟೆಲ್​​ನಲ್ಲಿ ಕೆಲಸ ಮಾಡುತ್ತಿದ್ದಾರೆ. ಆದರೆ ಕಳೆದ ಎರಡೂವರೆ ವರ್ಷಗಳ ಹಿಂದೆ ಪತಿಯೊಂದಿಗೆ ಜಗಳವಾಡಿ, ಬೇರ್ಪಟ್ಟು ಮಕ್ಕಳೊಂದಿಗೆ ವಾಸವಾಗಿದ್ದರು. ತನ್ನ ತಾಯಿಯ ಮನೆಯಲ್ಲೇ ಇದ್ದರು.

ಈ ಕರೊನಾ-ಲಾಕ್​ಡೌನ್​ ಕಾರಣಗಳಿಂದಾಗಿ ಮುತ್ತುಲಕ್ಷ್ಮೀ ಹಣವಿಲ್ಲದೆ ಕಷ್ಟಪಡುತ್ತಿದ್ದರು. ಹಾಗಾಗಿ ತನ್ನ ತಂದೆ-ತಾಯಿಯನ್ನು ರಾಮನಾಥಪುರದ ಸಂಬಂಧಿಯೋರ್ವರ ಮನೆಗೆ, ಸ್ವಲ್ಪ ಹಣ ತರುವಂತೆ ಹೇಳಿ ಕಳಿಸಿದ್ದರು. ಇದನ್ನೂ ಓದಿ: ಗಿಡ ನೆಡುವುದು ಇಸ್ಲಾಂ ವಿರೋಧಿಯೇ? ಪಾಕಿಸ್ತಾನದಲ್ಲಿ ಸಸಿಗಳನ್ನು ಕಿತ್ತು ಹಾಕಿದ್ಯಾಕೆ ಜನರು?

ಮನೆಯಲ್ಲಿ ತಂದೆ-ತಾಯಿಯಿಲ್ಲದಾಗ ಬೆಂಕಿ ಅವಘಡ ಸಂಭವಿಸಿದೆ. ಈ ಬೆಂಕಿ ಹೊತ್ತಿಕೊಳ್ಳಲು ಚಾರ್ಜ್​​ಗೆ ಹಾಕಿದ್ದ ಮೊಬೈಲ್​ ಫೋನ್​ ಕಾರಣ ಎನ್ನಲಾಗಿದೆ. ಚಾರ್ಜ್​ಗೆ ಹಾಕಿದ್ದ ಮೊಬೈಲ್​ನಲ್ಲಿ ಮೊದಲು ಕಿಡಿ ಕಾಣಿಸಿಕೊಂಡು ಅವಘಡ ಸಂಭವಿಸಿದೆ.

ಮಹಿಳೆ ಸ್ಥಳದಲ್ಲೇ ಸಾವನ್ನಪ್ಪಿದ್ದು, ಇಬ್ಬರೂ ಮಕ್ಕಳನ್ನು ಆಸ್ಪತ್ರೆಗೆ ದಾಖಲಿಸಲು ಕರೆದುಕೊಂಡು ಹೋಗುತ್ತಿರುವಾಗ ಮೃತಪಟ್ಟಿದ್ದಾರೆ.

ಮುತ್ತುಲಕ್ಷ್ಮೀ ಭಾನುವಾರ ಸಂಜೆ ಸೋಫಾ ಮೇಲೆ ಮಲಗಿದ್ದರು. ಅಲ್ಲೇ ಸಮೀಪದಲ್ಲಿ ಮೊಬೈಲ್​ ಚಾರ್ಜ್​ಗೆ ಹಾಕಿದ್ದರು. ಸೋಮವಾರ ಮುಂಜಾನೆ ಅವರ ಮನೆಯಿಂದ ಹೊಗೆ ಬರುತ್ತಿರುವುದನ್ನು ನೋಡಿದ ನೆರಮನೆಯವರು ಅಗ್ನಿಶಾಮಕ ದಳದ ಸಿಬ್ಬಂದಿಗೆ ಕರೆ ಮಾಡಿ ತಿಳಿಸಿದ್ದಾರೆ.

ಸ್ಥಳಕ್ಕೆ ಬಂದ ಅಗ್ನಿಶಾಮಕ ಮತ್ತು ರಕ್ಷಣಾ ಸಿಬ್ಬಂದಿ ಮನೆಯ ಬಾಗಿಲನ್ನು ಮುರಿದು ಒಳಹೋಗಿ, ಮಹಿಳೆ ಮತ್ತವಳ ಇಬ್ಬರು ಮಕ್ಕಳನ್ನು ಹೊರತಂದಿದ್ದಾರೆ. ಅವರಾಗಲೇ ಎಚ್ಚರ ತಪ್ಪಿದ್ದರು ಎಂದು ಪೊಲೀಸರು ಹೇಳಿದ್ದಾರೆ. ಮೃತದೇಹಗಳನ್ನು ಮುತ್ತುಲಕ್ಷ್ಮೀಯವರ ತಂದೆ-ತಾಯಿಗೆ ಹಸ್ತಾಂತರಿಸಲಾಗಿದೆ. ಪ್ರಕರಣ ದಾಖಲಾಗಿದೆ. (ಏಜೆನ್ಸೀಸ್​).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net