

ಕೇರಳ: ಮಾಟಮಮಂತ್ರದ ಉದ್ದೇಶದಿಂದ 6 ವರ್ಷದ ಮಗಳನ್ನು ಮಲತಾಯಿ ಕತ್ತು ಹಿಸುಕಿ ಕೊಂದ ಘಟನೆ ಕೇರಳದ ಕೋತಮಂಗಲದ ನೆಲ್ಲಿಕುಜಿ ಎಂಬಲ್ಲಿ ಗುರುವಾರ ನಡೆದಿದೆ.
ಉತ್ತರಪ್ರದೇಶದ ಮೂಲದ ಅಜಾಜ್ ಖಾನ್ ಪುತ್ರಿ ಮುಸ್ಕಾನ್(6) ಮೃತ ಬಾಲಕಿ. ಮಲತಾಯಿ ಅನೀಶಾ ಬಂಧನ ಮಾಡಲಾಗಿದ್ದು, ವಿಚಾರಣೆ ಬಳಿಕ ತಪ್ಪೊಪ್ಪಿಕೊಂಡಿದ್ದಾರೆ. ಮಾಟಮಂತ್ರ ಮಾಡುತ್ತಿದ್ದ ಕೋತಮಂಗಲದ ನಿವಾಸಿ ನೌಶಾದ್ ಎಂಬುವವರನ್ನು ವಶಕ್ಕೆ ಪಡೆಯಲಾಗಿದೆ. ಸಾವಿನ ನಿಗೂಢತೆಯನ್ನು ಬಯಲಿಗೆಳಯಲು ನೌಶಾದ್ ಅನ್ನು ತೀವ್ರ ವಿಚಾರಣೆ ಒಳಪಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಕರಣ ಹಿನ್ನೆಲೆ...
ಬಾಲಕಿ ಮುಸ್ಕಾನ್ ಬಾಡಿಗೆ ಮನೆಯೊಂದಂರಲ್ಲಿ ಶವವಾಗಿ ಪತ್ತೆಯಾಗಿದ್ದಾಳೆ. ಬೆಳಗ್ಗೆ ತಂದೆ ಅಜಾಜ್ ಖಾನ್ ಮಗಳನ್ನು ಎಚ್ಚರಿಸಿದ್ದರು. ಎಚ್ಚರಗೊಳ್ಳಲಿಲ್ಲ. ಸುತ್ತಮುತ್ತಲಿನ ಜನರು ಸೇರಿದ ಬಳಿಕ ಮಗು ಸತ್ತು ಹೊಗಿದೆ ಎಂದು ತಿಳಿದಿದೆ. ಬಳಿಕ ಪೊಲೀಸರು ಅನುಮಾನಗೊಂಡು ಮರಣೋತ್ತರ ಪರೀಕ್ಷೆಗೆ ಶವ ಕಳುಹಿಸಿದಾಗ ವರದಿಯಲ್ಲಿ ಉಸಿರುಗಟ್ಟಿ ಕೊಲ್ಲಲಾಗಿದೆ ಎಂದು ವರದಿಯಾಗಿದೆ. ಕೂಡಲೇ ಇಬ್ಬರನ್ನು ಅಧಿಕಾರಿಗಳು ಬಂಧಿಸಿದ್ದಾರೆ.
ವಿಚಾರಣೆ ಸಮಯದಲ್ಲಿ ಬಾಯ್ಬಿಟ್ಟ ಮಲತಾಯಿ ಅನೀಶಾ, ಮಾಟಮಂತ್ರಕ್ಕಾಗಿ ನಾನು ಮತ್ತು ಮಂತ್ರವಾದಿ ನೌಶಾದ್ ಜೊತೆಗೂಡಿ ಮುಸ್ಕಾನ್ ಕೊಲೆ ಮಾಡಿರುವುದಾಗಿ ತಪ್ಪು ಒಪ್ಪಿಕೊಂಡಿದ್ದಾಳೆ. ಅಲ್ಲದೆ, ಅಜಾಜ್ ರಾತ್ರಿ 8.30ಕ್ಕೆ ಮನೆಯಿಂದ ಹೊರ ತೆರಳಿದ್ದು, ಮಧ್ಯರಾತ್ರಿ 12.30ಕ್ಕೆ ಮನೆಗೆ ಬಂದಿದ್ದಾನೆ. ಇದೇ ಸಮಯದಲ್ಲಿ ಈ ಕೃತ್ಯ ನಡೆದಿದೆ ಎಂದು ಪೊಲಿಸರು ಕಂಡುಕೊಂಡಿದ್ದಾರೆ. ಹೆಚ್ಚಿನ ತನಿಖೆಗಾಗಿ ವಿಚಾರಣೆ ಮುಂದುವರೆದಿದೆ,(ಏಜೆನ್ಸೀಸ್).