ಅಂಗವಿಕಲ ಮಗಳನ್ನು ಕೊಂದು ಆತ್ಮಹತ್ಯೆಗೆ ಯತ್ನಿಸಿ ಬದುಕುಳಿದ ತಾಯಿ; ವರ್ಷದ ಹಿಂದೆ ಪತಿ-ಮಗುವನ್ನು ಕಳೆದುಕೊಂಡಿದ್ದ ಮಹಿಳೆ!

Priyanka
Published on

ಬೆಂಗಳೂರು: ತಾಯಿಯೊಬ್ಬಳು ತನ್ನ ಹತ್ತು ವರ್ಷದ ಅಂಗವಿಕಲ ಮಗಳನ್ನು ಕೊಲೆ ಮಾಡಿ ಕೊನೆಗೆ ತಾನೂ ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಆದರೆ ಆಕೆ ಬದುಕುಳಿದಿದ್ದು, ಈಗ ಪರಿತಪಿಸುವಂತಾಗಿದೆ. ನಗರದ ಬ್ಯಾಡರಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ತಾಯಿ ಸುಮಾ ಎಂಬಾಕೆ ತನ್ನ 10 ವರ್ಷದ ವಿಕಲಚೇತನ ಪುತ್ರಿ ಪ್ರಿಯಾಂಕಾಳನ್ನು ಕೊಂದು ಬಳಿಕ ತಾನೂ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದಳು. ಫ್ಯಾನ್​ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾಕೆ ಬದುಕುಳಿದಿದ್ದಾಳೆ.

ಒಂದು ವರ್ಷದ ಹಿಂದೆ ಪತಿ ಹಾಗೂ ಮೊದಲನೇ ಮಗುವನ್ನ ಕಳೆದುಕೊಂಡಿದ್ದ ಸುಮಾ ಖಿನ್ನತೆಗೆ ಒಳಗಾಗಿದ್ದಳು. ಜತೆಗಿದ್ದ ಎರಡನೇ ಪುತ್ರಿ ಅಂಗವಿಕಲಳಾದ್ದರಿಂದ ಮತ್ತಷ್ಟು ನೊಂದಿದ್ದಳು. ಹೀಗಾಗಿ ಮಗುವನ್ನ ಕೊಲೆ ಮಾಡಿ ಆತ್ಮಹತ್ಯೆಗೆ ಯತ್ನಿಸಿದ್ದಳು. ಬದುಕುಳಿದಿರುವ ಸುಮಾಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಬ್ಯಾಡರಹಳ್ಳಿ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net