ಹಾಲು ಕುಡಿಯೋ ಮಗುವಿಗೆ 'ಆಲ್ಕೋಹಾಲ್​'..!

f1c
Published on

ಅಳ್ತಿರೋ ಮಗುವನ್ನು ಸಮಾಧಾನ ಮಾಡೋಕೆ ತಾಯಿಯಾದವಳು ಪಡನ್ನ ಪಡ್ತಾರೆ. ಮಗು ಅಳೋದನ್ನ ನಿಲ್ಲಿಸ್ಲಿ ಅಂತ್ಹೇಳಿ ಆಕೆ ಚಾಕ್ಲೇಟ್​​, ಟಾಯ್ಸ್​, ಬೊಂಬೆ ಹೀಗೆ ನಾನಾ ವಸ್ತುಗಳನ್ನ ಖರೀದಿಸಿ ಕೊಡೋದು ಇದೆ. ಆದ್ರೆ ಅಳುತ್ತಿರುವ ಪುಟ್ಟ ಮಗುವಿಗೆ ಹಾಲು ನೀಡೋ ಬದಲು ಅಲ್ಕೋಹಾಲ್‌ ಕುಡಿಸಿದ್ದಾಳೆ.


ಕ್ಯಾಲಿಫೋರ್ನಿಯಾ: ಕಾರು ಚಾಲನೆಯ ವೇಳೆ ಹಠ ಮಾಡುತ್ತಿದ್ದ ಮಗುವಿನ ಅಳು ನಿಲ್ಲಿಸಲು ತಾಯಿಯೊಬ್ಬಳು ಮಗುವಿಗೆ ಅಲ್ಕೋಹಾಲ್‌ ಕುಡಿಸಿದ ಘಟನೆ ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ನಡೆದಿದೆ. ಈ ಘಟನೆಗೆ ಸಂಬಂಧಿಸಿದಂತೆ ತಾಯಿಯನ್ನು ಬಂಧಿಸಿರುವ ಪೊಲೀಸರು, ಮಗುವಿಗೆ ಚಿಕಿತ್ಸೆ ಕೊಡಿಸಿದ್ದಾರೆ. ಹಾನ್ಸೇಟಿ ಡಿ ಲಾ ಟೊರೆ ಎಂಬ ಮಹಿಳೆ ಸ್ಯಾನ್‌ ಬೆರ್ನಾರ್ಡಿನೋದಿಂದ ರಿಯಾಲ್ಟೋಗೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದಳು.

ಈ ವೇಳೆ ಕಾರಿನಲ್ಲಿದ್ದ ಮಗು ಅಳಲು ಶುರುಮಾಡಿದ್ದರಿಂದ ಮದ್ಯ ಕುಡಿಸಿ ಮಗುವನ್ನು ಸುಮ್ಮನಾಗಿಸಲು ಪ್ರಯತ್ನಿಸಿದ್ದಾಳೆ. ಆದರೆ ಅನಾರೋಗ್ಯಕ್ಕೆ ತುತ್ತಾದ ಮಗುವನ್ನು ಆಸ್ಪತ್ರೆಗೆ ದಾಖಲಿಸಿದಾಗ ಮಗುವಿನ ದೇಹದಲ್ಲಿ ಮದ್ಯ ಪತ್ತೆಯಾಗಿದೆ. ಮಗುವಿನ ಜೀವವನ್ನು ಅಪಾಯಕ್ಕೆ ದೂಡಿದ ಹಿನ್ನೆಲೆಯಲ್ಲಿ ಪೊಲೀಸರು ಹಾನ್ಸೇಟಿಳಾನ್ನ ಬಂಧಿಸಿದ್ದಾರೆ.

ಹಾಲಿನ ಬಾಟಲಿಗೆ ಅಲ್ಕೋಹಾಲ್ ತುಂಬಿದ ತಾಯಿ
ಆಘಾತಕಾರಿ ಸಂಗತಿಯೆಂದರೆ, ಮಗು ಅಳುವುದನ್ನು ನಿಲ್ಲಿಸುವ ಉದ್ದೇಶದಿಂದ ತಾಯಿ (Mother) ಡಿ ಲಾ ಟೊರ್ರೆ ಮಗುವಿನ ಹಾಲಿನ ಬಾಟಲಿಗೆ ಅಲ್ಕೋಹಾಲ್ ತುಂಬಿದ್ದಾಳೆ ಎಂದು ಅಧಿಕಾರಿಗಳು (Officers) ಆರೋಪಿಸಿದ್ದಾರೆ. ಈ ಘಟನೆಯ ನಂತರ ಶಿಶುವಿನ ಸ್ಥಿತಿಯನ್ನು ಸಾರ್ವಜನಿಕವಾಗಿ ಬಹಿರಂಗಪಡಿಸಲಾಗಿಲ್ಲ. ಮಗುವಿನ ವರ್ತನೆ ಮತ್ತು ಶಿಶುವಿನ ಯೋಗಕ್ಷೇಮದ ಬಗ್ಗೆ ಅನೇಕರು ಕಳವಳ ವ್ಯಕ್ತಪಡಿಸಿದ್ದಾರೆ.


ಪ್ರಸ್ತುತ, ಹೊನೆಸ್ಟಿ ಡಿ ಲಾ ಟೊರ್ರೆ ವೆಸ್ಟ್ ವ್ಯಾಲಿ ಡಿಟೆನ್ಶನ್ ಸೆಂಟರ್‌ನಲ್ಲಿ ಬಂಧನದಲ್ಲಿದ್ದಾರೆ, ಅಲ್ಲಿ ಆಕೆಯನ್ನು ಸುಮಾರು 50 ಲಕ್ಷ ಬಾಂಡ್‌ನಲ್ಲಿ ಇರಿಸಲಾಗಿದೆ ಎಂದು ಫಾಕ್ಸ್ ನ್ಯೂಸ್ ವರದಿ ಮಾಡಿದೆ. ಮಂಗಳವಾರ ಆಕೆಯನ್ನು ನ್ಯಾಯಾಲಯದ ಮುಂದೆ ಹಾಜರು ಪಡಿಸಲು ನಿರ್ಧರಿಸಲಾಗಿದ್ದು, ಕಾನೂನು ಪ್ರಕ್ರಿಯೆಯಲ್ಲಿ ಪ್ರಕರಣದ ಕುರಿತು ಹೆಚ್ಚಿನ ವಿವರಗಳು ತಿಳಿದುಬರಬೇಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net