ಪರ ಊರಿಗೆ ಬಂದು ಕೆರೆಗೆ ಹಾರಿ ಪ್ರಾಣಬಿಟ್ಟ ತಾಯಿ-ಮಗಳು!

death
Published on

ಕೋಲಾರ: ಕೆರೆಗೆ ಹಾರಿ ತಾಯಿ-ಮಗಳು ಆತ್ಮಹತ್ಯೆ ಮಾಡಿಕೊಂಡ ದುರ್ಘಟನೆ ತಾಲೂಕಿನ ನರಸಾಪುರದಲ್ಲಿ ಸಂಭವಿಸಿದೆ.

ತಾಯಿ ನಂದಿತಾ(42) ಮತ್ತು ಮಗಳು ಪ್ರಗತಿ(21) ಮೃತ ದುರ್ದೈವಿಗಳು. ಇವರಿಬ್ಬರೂ ಬೆಂಗಳೂರಿನ ಹೊರಮಾವು ಮೂಲದ ನಿವಾಸಿಗಳು. ಬೆಂಗಳೂರಿಂದ ನರಾಸಪುರಕ್ಕೆ ಬಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಮೂರು ತಿಂಗಳ ಹಿಂದೆ ನಂದಿತಾ ಅವರ ಗಂಡ ಮೃತಪಟ್ಟಿದ್ದರು. ಗಂಡನ ಮನೆಯವರ ಕಿರಕುಳ ಹಾಗೂ ಸಾಲಗಾರರ ಕಾಟಕ್ಕೆ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಸಂಬಂಧಿಕರು ಆರೋಪಿಸಿದ್ದಾರೆ. ತನಿಖೆ ಬಳಿಕ ಸಾವಿನ ಕಾರಣ ತಿಳಿಯಲಿದೆ. ವೇಮಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇನ್ನು ಸಾವಿಗೂ ಮುನ್ನ ತಾಯಿ-ಮಗಳು ಡೆತ್​ನೋಟ್​ ಬರೆದಿಟ್ಟಿದ್ದಾರೆ ಎನ್ನಲಾಗಿದ್ದು, ಈ ಬಗ್ಗೆ ಖಚಿತ ಮಾಹಿತಿ ಲಭ್ಯವಾಗಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net