ಬಡತನಕ್ಕೆ ಬೇಸತ್ತು ಇಬ್ಬರು ಮಕ್ಕಳೊಂದಿಗೆ ನಾಲೆಗೆ ಹಾರಿದ ತಾಯಿ: ನೀರಿನಲ್ಲಿ ಕೊಚ್ಚಿಹೋದ ಮಕ್ಕಳು, ಬದುಕಿ ಉಳಿದ ತಾಯಿ

Water death
Published on

ಮಂಡ್ಯ:ಬಡತನದ ಬೇಗೆಯಿಂದ ಬೇಸತ್ತ ತಾಯಿ ತನ್ನ ಇಬ್ಬರು ಮಕ್ಕಳೊಂದಿಗೆ ನಾಲೆಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ತಿಬ್ಬನಹಳ್ಳಿಯಲ್ಲಿ ನಡೆದಿದೆ.

ವಿಶ್ವೇಶ್ವರಯ್ಯ ನಾಲೆಗೆ ಹಾರಿದ ತಾಯಿ ಜ್ಯೋತಿ (33) ಬದುಕಿದರೆ, ಮಕ್ಕಳಾದ ನಿಸರ್ಗ (7) ಹಾಗೂ ಪವನ್​ (4) ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ.

ಜ್ಯೋತಿ ಮಂಡ್ಯ ತಾಲೂಕಿನ ಹುಳ್ಳೇನಹಳ್ಳಿಯವರು. ಪತಿ ಅನಾರೋಗ್ಯಕ್ಕೆ ತುತ್ತಾಗಿದ್ದರು. ಇದರಿಂದ ಕುಟುಂಬದ ನಿರ್ವಹಣೆ ಕಷ್ಟವಾಗಿತ್ತು.   ಹೀಗಾಗಿ ಆಕೆ ಇಬ್ಬರು ಮಕ್ಕಳೊಂದಿಗೆ ವಿ.ಸಿ.ನಾಲೆಗೆ ಹಾರಿದರು. ಇದನ್ನು ನೋಡಿದ ಸ್ಥಳೀಯರು ಕೂಡಲೆ ನಾಲೆಗೆ ಇಳಿದು ಜ್ಯೋತಿಯನ್ನು ರಕ್ಷಿಸಿದರು. ಮಕ್ಕಳು ಅಷ್ಟರಲ್ಲಿ ನೀರಿನಲ್ಲಿ ಕೊಚ್ಚಿ ಹೋಗಿದ್ದರು. ಮಕ್ಕಳಿಗಾಗಿ ಪೊಲೀಸರು ಶೋಧನೆ ನಡೆಸುತ್ತಿದ್ದಾರೆ. ಶಿವಳ್ಳಿ ಠಾಣೆಯಲ್ಲಿ ಕೇಸು ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net