ಮನೆ ಕುಸಿದು ಐದು ವರ್ಷದ ಮಗು ಸಹಿತ ತಾಯಿ ಸಾವು!

House
ಸ್ಥಳ ಪರಿಶೀಲನೆ ನಡೆಸುತ್ತಿರುವ ಪೊಲೀಸರು.
Published on

ಬೆಳಗಾವಿ: ಮಳೆಗಾಲದಲ್ಲಿ ನಾನಾ ರೀತಿಯ ದುರಂತಗಳು ಸಂಭವಿಸುತ್ತಿರುತ್ತವೆ, ಸಾವು-ನೋವುಗಳು ಕೂಡ. ಅಂಥದ್ದೇ ಒಂದು ಪ್ರಕರಣದಲ್ಲಿ ಐದು ವರ್ಷದ ಮಗುವಿನ ಜತೆಗೆ ತಾಯಿ ಕೂಡ ಸಾವಿಗೀಡಾದ ದುರಂತವೊಂದು ನಡೆದಿದೆ.

ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಮಾಡಮಗೇರಿ ಗ್ರಾಮದಲ್ಲಿ ಭಾರಿ ಮಳೆಗೆ ಮನೆ ಕುಸಿದು ಈ ದುರಂತ ಸಂಭವಿಸಿದೆ. ಇದರಲ್ಲಿ ಐದು ವರ್ಷದ ಪ್ರಜ್ವಲ್​ ಹಾಗೂ ಆತನ ತಾಯಿ ಯಲ್ಲವ್ವ ಮಹಾದೇವ ಬಾಗಿಲದ (40) ವರ್ಷ ಸಾವಿಗೀಡಾಗಿದ್ದಾರೆ.

ಮಹಾದೇವ ಲಕ್ಷ್ಮಪ್ಪ ಬಾಗಿಲದ ಇವರಿಗೆ ಈ ಮನೆ ಸೇರಿದ್ದು, ದುರಂತ ಸಂಭವಿಸಿದ ‌ಸ್ಥಳಕ್ಕೆ ತಹಶೀಲ್ದಾರ್ ಮಹಾಂತೇಶ ಮಠದ, ಸಿಪಿಐ ಮೌನೇಶ್ವರ ಮಾಲಿಪಾಟೀಲ, ಪಿಎಸ್ಐ ಬಸನಗೌಡ ನಿರ್ಲಿ, ಎಎಸ್ಐ ವೈ.ಎಂ. ಕಡಕೋಳ, ಕಂದಾಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮುರಗೋಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net