ತನ್ನ ಗೆಳೆಯನೊಂದಿಗೆ ಸೇರಿ ತಾಯಿಯನ್ನು ಕೊಂದ ಮಗಳು! ಕಾರಣವೇನು ಗೊತ್ತಾ?.. Mother

hand-dead-victim-woman-covered-600nw-2193737127
Published on

ಹೈದರಾಬಾದ್​: ( Mother)  10 ನೇ ತರಗತಿ ಓದುತ್ತಿದ್ದ ಬಾಲಕಿಯೊಬ್ಬಳು ಪ್ರಿಯಕರನೊಂದಿಗೆ ಸೇರಿ ತನ್ನ ತಾಯಿಯನ್ನು ಕೊಂದಿದ್ದಾಳೆ. ಹೈದರಾಬಾದ್ ನಗರದ ಜೀಡಿಮೆಟ್ಲಾದ ಎನ್‌ಎಲ್‌ಬಿ ನಗರದಲ್ಲಿ ಈ ಭೀಕರ ಘಟನೆ ನಡೆದಿದೆ.

ಅಂಜಲಿ ಮೃತ ಮಹಿಳೆ. ಈಕೆ ಮಗಳು ತೇಜಶ್ರೀ , ಪ್ರಿಯಕರ ಶಿವ ಮತ್ತು ಈತನ ತಮ್ಮ ಯಶವಂತ್ ಕೊಲೆ ಆರೋಪಿಗಳಾಗಿದ್ದಾರೆ. ತೇಜಶ್ರೀ ಅವರ ತಾಯಿ ಅಂಜಲಿ ತೆಲಂಗಾಣ ಸಾಂಸ್ಕೃತಿಕ ಗುಂಪಿನಲ್ಲಿ ಜಾನಪದ ಗಾಯಕಿ.

10 ನೇ ತರಗತಿಯ ವಿದ್ಯಾರ್ಥಿನಿ ತೇಜಶ್ರೀ 8 ತಿಂಗಳ ಹಿಂದೆ ಇನ್‌ಸ್ಟಾಗ್ರಾಮ್‌ನಲ್ಲಿ ನಲ್ಗೊಂಡದ ಪಗಿಲ್ಲ ಶಿವ (19) ಎಂಬ ಯುವಕನನ್ನು ಭೇಟಿಯಾದಳು. ಆ ಪರಿಚಯವು ಕೊನೆಗೆ ಪ್ರೀತಿಗೆ ಕಾರಣವಾಯಿತು. ಶಿವ ಮತ್ತು ತೇಜಶ್ರೀ ಫೋನ್ ಕರೆಗಳು ಮತ್ತು ಸಂದೇಶಗಳ ಮೂಲಕ ಪ್ರೀತಿಸುತ್ತಿದ್ದರು. ಈ ವಿಚಾರ ಬಾಲಕಿಯ ತಾಯಿಗೆ ಗೊತ್ತಾಗಿದೆ. ಈ ವಯಸ್ಸಿನಲ್ಲಿ ಇದು ಸರಿಯಾದ ನಿರ್ಧಾರವಲ್ಲ ಚೆನ್ನಾಗಿ ಓದು ಎಂದು ಮಗಳಿಗೆ ಬುದ್ಧಿ ಮಾತು ಹೇಳಿದ್ದಳು.

ಪ್ರೀತಿಗೆ ಅಡ್ಡಿಯಾಗಿ ತಾಯಿ ನಿಂತಿದ್ದು ಮಗಳು ಕೋಪಗೊಂಡ ಮಗಳು, ತನ್ನ ಪ್ರಿಯಕರ ಮತ್ತು ಅವನ ಕಿರಿಯ ಸಹೋದರನೊಂದಿಗೆ ತನ್ನ ಪ್ರಿಯಕರ ತಾಯಿಯ ಕಥೆ ಮುಗಿಸಲು ಪ್ಲ್ಯಾನ್​​ ಮಾಡಿದ್ದಾಳೆ. ಶಿವ ತನ್ನ ಕಿರಿಯ ಸಹೋದರ ಪಗಿಲ್ಲ ಯಶವಂತ್ (18) ಸಹಾಯ ಪಡೆದ. ಶಿವ ಮತ್ತು ಯಶವಂತ್ ಮನೆಗೆ ಬಂದಾಗ, ತೇಜಶ್ರೀ ಮತ್ತು ಮೂವರು ಸೇರಿ ತಾಯಿಯನ್ನು ಕ್ರೂರವಾಗಿ ಕೊಂದಿದ್ದಾರೆ. ಈ ವಿಚಾರ ತಿಳಿದ ಸ್ಥಳೀಯರು ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಅಂಜಲಿ ಸಾವಿನಿಂದ ಕುಟುಂಬಸ್ಥರು ದುಃಖತಪ್ತರಾಗಿದ್ದಾರೆ. ತೇಜಶ್ರೀ ಐದು ದಿನಗಳ ಹಿಂದೆ ತನ್ನ ಗೆಳೆಯನೊಂದಿಗೆ ಮನೆ ಬಿಟ್ಟು ಹೋಗಿದ್ದರು ಎಂದು ಕುಟುಂಬ ಸದಸ್ಯರು ತಿಳಿಸಿದ್ದಾರೆ. ಈ ಬಗ್ಗೆ ಪೊಲೀಸರಿಗೆ ದೂರು ಕೂಡ ನೀಡಿದ್ದಾರೆ.

ಪ್ರಸ್ತುತ, ಮೂವರು ಆರೋಪಿಗಳು ಪೊಲೀಸ್ ವಶದಲ್ಲಿದ್ದಾರೆ. ಜೀಡಿಮೆಟ್ಲಾ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಘಟನೆಯ ತನಿಖೆ ನಡೆಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net