

ಬೆಂಗಳೂರು: ಸೋಷಿಯಲ್ ಮೀಡಿಯಾದಲ್ಲಿ ಅತೀ ಹೆಚ್ಚು ಬಳಕೆಯಲ್ಲಿ ಇರುವುದು 'ಎಕ್ಸ್' (ಈ ಹಿಂದಿನ ಟ್ವಿಟರ್) ಯಾಕಂದ್ರೆ, ಈ ಪ್ಲಾಟ್ಫಾರ್ಮ್ ಅನ್ನು ಜಾಗತಿಕ ಮಟ್ಟದಲ್ಲಿ ಬಳಸಲಾಗುತ್ತಿದೆ. ಟ್ವಿಟರ್ ಮಾಲೀಕತ್ವವನ್ನು ಎಲೋನ್ ಮಸ್ಕ್ ವಹಿಸಿಕೊಂಡ ಬೆನ್ನಲ್ಲೇ ಎಕ್ಸ್ ಎಂದು ಮರುನಾಮಕರಣ ಆಗುವುದರ ಜತೆಗೆ ಅದರ ಅಧಿಕೃತ ಲೋಗೋ ಕೂಡ ಬದಲಾಯಿತು.
ಜಗತ್ತಿನ ಟಾಪ್ ಉದ್ಯಮಿಗಳಿಂದ ಹಿಡಿದು ಹಲವು ಕ್ಷೇತ್ರಗಳಲ್ಲಿ ಖ್ಯಾತಿಗಳಿಸಿರುವ ಗಣ್ಯ ವ್ಯಕ್ತಿಗಳು ಎಕ್ಸ್ನಲ್ಲಿ ತಮ್ಮದೇ ಅಧಿಕೃತ ಖಾತೆಯನ್ನು ಹೊಂದಿದ್ದಾರೆ. ಇವರ ಅಕೌಂಟ್ಗಳನ್ನು ವಿಶ್ವಾದ್ಯಂತ ಬಳಕೆದಾರರು ಅನುಸರಿಸುತ್ತಿದ್ದು, ಮಾಡುವ ಪ್ರತಿ ಪೋಸ್ಟ್ಗಳನ್ನು ತಪ್ಪದೇ ನೋಡುತ್ತಾರೆ. ಅಸಲಿಗೆ ಎಕ್ಸ್ನಲ್ಲಿ ಯಾರಿಗೆ ಅತೀ ಹೆಚ್ಚು ಫಾಲೋವರ್ಸ್ ಇದ್ದಾರೆ. 2023 ಹಾಗೂ 2024ರಲ್ಲಿ ಯಾರ ಖಾತೆಯನ್ನು ಅಧಿಕ ಸಂಖ್ಯೆಯಲ್ಲಿ ಅನುಸರಿಸಲಾಗಿದೆ ಎಂಬುದರ ವಿವರ ಹೀಗಿದೆ.
ಜನವರಿ 2023:
1. ಬರಾಕ್ ಒಬಾಮ: 133.5 ಮಿಲಿಯನ್
2. ಎಲೋನ್ ಮಸ್ಕ್: 126.9 ಮಿಲಿಯನ್
3. ಜಸ್ಟಿನ್ ಬೈಬರ್: 113.8 ಮಿಲಿಯನ್
4. ಕೇಟಿ ಪೆರ್ರಿ: 108.9 ಮಿಲಿಯನ್
5. ರಿಹಾನ್ನಾ: 107.9 ಮಿಲಿಯನ್
6. ಕ್ರಿಸ್ಟಿಯಾನೋ ರೊನಾಲ್ಡೊ: 107.5 ಮಿಲಿಯನ್
7. ಟೇಲರ್ ಸ್ವಿಫ್ಟ್: 92.4 ಮಿಲಿಯನ್
8. ಡೊನಾಲ್ಡ್ ಟ್ರಂಪ್: 87.7 ಮಿಲಿಯನ್
9. ನರೇಂದ್ರ ಮೋದಿ: 86 ಮಿಲಿಯನ್
10. ಲೇಡಿ ಗಾಗಾ: 85.1 ಮಿಲಿಯನ್
ಜನವರಿ 2024:
1. ಎಲೋನ್ ಮಸ್ಕ್: 170.1 ಮಿಲಿಯನ್
2. ಬರಾಕ್ ಒಬಾಮಾ: 131.9 ಮಿಲಿಯನ್
3. ಜಸ್ಟಿನ್ ಬೈಬರ್: 111.3 ಮಿಲಿಯನ್
4. ಕ್ರಿಸ್ಟಿಯಾನೋ ರೊನಾಲ್ಡೊ: 110.4 ಮಿಲಿಯನ್
5. ರಿಹಾನ್ನಾ: 108.2 ಮಿಲಿಯನ್
6. ಕೇಟಿ ಪೆರ್ರಿ: 106.8 ಮಿಲಿಯನ್
7. ಟೇಲರ್ ಸ್ವಿಫ್ಟ್: 94.9 ಮಿಲಿಯನ್
8. ನರೇಂದ್ರ ಮೋದಿ: 94.8 ಮಿಲಿಯನ್
9. ಡೊನಾಲ್ಡ್ ಟ್ರಂಪ್: 87.4 ಮಿಲಿಯನ್
10. ಲೇಡಿ ಗಾಗಾ: 83.6 ಮಿಲಿಯನ್