ಒಂದೇ ದಿನದಲ್ಲಿ 2,300ಕ್ಕೂ ಅಧಿಕ ಮಂದಿ ಸಾವು; ಒಂದರ ಹಿಂದೊಂದರಂತೆ ಸಂಭವಿಸಿದ ಮೂರು ಭೀಕರ ಭೂಕಂಪ

Turkey 3
Published on

ಟರ್ಕಿ: ಒಂದೇ ದಿನದಲ್ಲಿ ಟರ್ಕಿ-ಸಿರಿಯಾದಲ್ಲಿ ಒಂದರ ಹಿಂದೊಂದರಂತೆ ಸಂಭವಿಸಿದ ಮೂರು ಭೀಕರ ಭೂಕಂಪದಲ್ಲಿ 2,300ಕ್ಕೂ ಅಧಿಕ ಮಂದಿ ಸಾವಿಗೀಡಾಗಿದ್ದಾರೆ. ಟರ್ಕಿಯಲ್ಲಿ ಶತಮಾನದ ಬಳಿಕ ಸಂಭವಿಸಿದ ಈ ಭಯಂಕರ ಭೂಕಂಪಕ್ಕೆ ನೂರಾರು ಕಟ್ಟಡಗಳು ನೆಲಸಮವಾಗಿದ್ದು, ಅಪಾರ ಸಾವು-ನೋವು ಉಂಟಾಗಿದೆ.

ಟರ್ಕಿಯಲ್ಲಿ ಇಂದು ಬೆಳಗಿನ ಜಾವ ಮೊದಲಿಗೆ ಶತಮಾನದ ಬಳಿಕ ಸಂಭವಿಸಿದ ಅತ್ಯಂತ ಭಯಂಕರ ಎನ್ನಲಾದ ಭೂಕಂಪ ಆಗಿತ್ತು. ಪರಿಣಾಮವಾಗಿ ರಾತ್ರಿ ಬೆಳಗಾಗುವುದರೊಳಗೆ ಸಾವಿರಾರು ಮಂದಿ ಮಲಗಿದ್ದಲ್ಲೇ ಹೆಣವಾಗಿ ಹೋದರು. ಮಾತ್ರವಲ್ಲ, ದೊಡ್ಡ ದೊಡ್ಡ ಕಟ್ಟಡಗಳು ಜನರ ಸಮೇತ ನೆಲಸಮವಾಗಿ ಹೋದವು. ಈ ಭೀಕರ ಭೂಕಂಪದ ತೀವ್ರತೆ ರಿಕ್ಟರ್ ಮಾಪಕದಲ್ಲಿ 7.8 ಇತ್ತು.

ನಂತರ ಸಂಜೆ ಸುಮಾರಿಗೆ ಮತ್ತೊಂದು ಭೀಕರ ಭೂಕಂಪವಾಗಿದ್ದು, ಇದರ ತೀವ್ರತೆ ರಿಕ್ಟರ್ ಮಾಪಕದಲ್ಲಿ 7.6 ಇತ್ತು. ಅದಾದ ಕೆಲವೇ ಹೊತ್ತಲ್ಲಿ ಇನ್ನೊಂದು ಭೂಕಂಪ ಸಂಭವಿಸಿದ್ದು, ಅದರ ತೀವ್ರತೆ 6 ಇತ್ತು. ಹೀಗೆ ಒಟ್ಟು ಮೂರು ಭೂಕಂಪದಿಂದಾಗಿ ಒಂದೇ ದಿನದಲ್ಲಿ 2,300ಕ್ಕೂ ಅಧಿಕ ಮಂದಿ ಸಾವಿಗೀಡಾಗಿದ್ದು, ಸತ್ತವರ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net