ದೆಹಲಿಯಲ್ಲಿ ಮುಂದುವರಿದ ದಟ್ಟ ಮಂಜು; 100ಕ್ಕೂ ಅಧಿಕ ವಿಮಾನ, 18 ರೈಲುಗಳು ವಿಳಂಬ!

ವಿಜಯವಾಣಿ - 2024-01-15T105655.313
Published on

ಹೊಸದಿಲ್ಲಿ: ಇಂದು ಬೆಳಗ್ಗೆ ದೆಹಲಿ-ಎನ್‌ಸಿಆರ್ ಪ್ರದೇಶದಲ್ಲಿ ದಟ್ಟವಾದ ಮಂಜು ಆವರಿಸಿದ್ದು, ದೆಹಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 100ಕ್ಕೂ ಹೆಚ್ಚು ವಿಮಾನಗಳು ವಿಳಂಬವಾಗಿದೆ. ರಸ್ತೆಗಳು ಗೋಚರವಾಗದಂತ ಪರಿಸ್ಥಿತಿ ನಿರ್ಮಾಣವಾದ ಕಾರಣ ವಿಮಾನ ಸೇರಿದಂತೆ ರೈಲುಗಳ ವೇಳಾಪಟ್ಟಿಯಲ್ಲಿಯೂ ಕೂಡ ಬದಲಾವಣೆಗೊಂಡಿದೆ.

ದೆಹಲಿಯಿಂದ ದೇಶದ ವಿವಿಧ ಭಾಗಗಳಿಗೆ ಸಂಪರ್ಕ ಕಲ್ಪಿಸುವ ಹದಿನೆಂಟು ರೈಲುಗಳು ಇಂದು ಕೂಡ ವಿಳಂಬಗೊಂಡಿದ್ದು, ಮುಂಜಾನೆ 3 ಗಂಟೆಗೆ, ದೆಹಲಿ ವಿಮಾನ ನಿಲ್ದಾಣದಲ್ಲಿ ಗೋಚರತೆ ಲಭಿಸದ ಕಾರಣ ವಿಮಾನಗಳ ಸಮಯದಲ್ಲಿ ವ್ಯತ್ಯಾಸ ಉಂಟಾಗಿದೆ. ದೆಹಲಿಯ ಹಲವು ಪ್ರದೇಶಗಳಲ್ಲಿ ಇಂದು ಸಹ ದಟ್ಟ ಮಂಜು ಆವರಿಸಿದೆ.

"ದಟ್ಟವಾದ ಮಂಜಿನಿಂದಾಗಿ, ದೆಹಲಿ ವಿಮಾನ ನಿಲ್ದಾಣದಲ್ಲಿ ಹಾರಾಟದ ಕಾರ್ಯಾಚರಣೆಗಳು ಪರಿಣಾಮ ಬೀರಬಹುದು. ಫ್ಲೈಟ್​ನ​ ಮಾಹಿತಿ ಪಡೆಯಲು ಸಂಬಂಧಿಸಿದ ವಿಮಾನಯಾನ ಸಂಸ್ಥೆಯನ್ನು ಸಂಪರ್ಕಿಸಲು ಪ್ರಯಾಣಿಕರಿಗೆ ವಿನಂತಿಸಲಾಗಿದೆ" ಎಂದು ಏರ್​ಪೋರ್ಟ್​ ಪ್ರಾಧಿಕಾರ ತಿಳಿಸಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net