ಕಾಡಿನಲ್ಲಿ ನೂರಾರು ಜಾನುವಾರುಗಳ ಶವ ಪತ್ತೆ! ಕಾರಣ ನಿಗೂಢ

Untitled design - 2024-02-18T201458.501
Published on

ಮಧ್ಯಪ್ರದೇಶ: ಇತ್ತೀಚೆಗೆ ಮಧ್ಯಪ್ರದೇಶದ ಹಳ್ಳಿಯೊಂದರ ಸಮೀಪದ ಕಾಡಿನಲ್ಲಿ ನೂರಾರು ಜಾನುವಾರಗಳ ಶವಗಳು ಪತ್ತೆಯಾಗಿದ್ದು, ಈ ಸಂಗತಿ ತಿಳಿದ ಗ್ರಾಮಸ್ಥರು ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ. ಅಷ್ಟು ಸತ್ತ ಹಸುಗಳ ಶವ ಒಂದೇ ಸ್ಥಳದಲ್ಲಿ ಇರಲು ಕಾರಣವೇನು ಎಂಬುದು ಇನ್ನೂ ಖಚಿತವಾಗಿಲ್ಲ ಎಂಬುದು ಸದ್ಯ ಭಾರೀ ಅನುಮಾನಕ್ಕೆ ಕಾರಣವಾಗಿದೆ.

ಈ ಪ್ರಾಣಿಗಳನ್ನು ನಗರ ಪ್ರದೇಶಗಳಿಂದ ಸಾಗಿಸಿ ರಾತ್ರಿ ವೇಳೆ ಅರಣ್ಯದಲ್ಲಿ ಬಿಸಾಡಿರುವ ಶಂಕೆಯಿದೆ ಎಂದು ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಆಡಳಿತಕ್ಕೆ ತಿಳಿಸಿದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಸಿಲ್ಲರಪುರ ಗ್ರಾಮದ ಮುಖಂಡರು ಬೇಸರ ವ್ಯಕ್ತಪಡಿಸಿದ್ದಾರೆ. ನೂರಾರು ದನಗಳು ಸ್ಥಳದಲ್ಲೇ ಬಿದ್ದಿದ್ದು, ಈ ಬಗ್ಗೆ ಮಾಹಿತಿ ನೀಡಿದರೂ ಇಲ್ಲಿನ ಆಡಳಿತ ಕಿಂಚಿತ್ತು ತಲೆಕಡಿಸಿಕೊಂಡಿಲ್ಲ ಎನ್ನಲಾಗಿದೆ.

ಇದಕ್ಕೆ ತಣ್ಣನೆಯ ವಾತಾವರಣವೇ ಕಾರಣ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದು, ಹಸುಗಳು ಚಳಿಯಿಂದಾಗಿ ಸತ್ತಿರಬಹುದು ಎಂದು ಶಂಕಿಸಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net