ಪಿಯು ವಿದ್ಯಾರ್ಥಿಗಳಿಗೆ ಕನ್ನಡ, ಇಂಗ್ಲೀಷೇ ಕಷ್ಟ! ಆಂಗ್ಲಭಾಷೆಯಲ್ಲಿ 1 ಲಕ್ಷ ಅಭ್ಯರ್ಥಿಗಳು ಫೇಲ್; 2020ರ ಫಲಿತಾಂಶದ ಅವಲೋಕನ

page 7 1
Published on

ದೇವರಾಜ್ ಎಲ್. ಬೆಂಗಳೂರು

ದ್ವಿತೀಯ ಪಿಯು ವಿದ್ಯಾರ್ಥಿಗಳಿಗೆ ವಿಜ್ಙಾನ ಮತ್ತು ಗಣಿತ ವಿಷಯಕ್ಕಿಂತ ಆಂಗ್ಲಭಾಷೆಯಲ್ಲಿ ಪಾಸಾಗುವುದೇ ಕಷ್ಟ.ಏಕೆಂದರೆ, 2020ನೇ ಸಾಲಿನ ಪರೀಕ್ಷೆಯಲ್ಲಿ 1.10 ಲಕ್ಷ ವಿದ್ಯಾರ್ಥಿಗಳು ಇಂಗ್ಲಿಷ್ ಹಾಗೂ 50 ಸಾವಿರ ಕನ್ನಡ ಭಾಷೆಯಲ್ಲಿ ಅನುತ್ತೀರ್ಣರಾಗಿದ್ದಾರೆ. ಭೌತಶಾಸ್ತŠ 20,986, ರಸಾಯನಶಾಸ್ತŠ 17,719, ಗಣಿತ 23,061, ಜೀವಶಾಸ್ತŠ 9,290 ವಿದ್ಯಾರ್ಥಿಗಳು ಮಾತ್ರ ಉತ್ತೀರ್ಣರಾಗಿದ್ದಾರೆ.

2020ರಲ್ಲಿ 5,40,572 ವಿದ್ಯಾರ್ಥಿಗಳು ಆಂಗ್ಲಭಾಷೆ ನೋಂದಾಯಿಸಿದ್ದರು. ಇದರಲ್ಲಿ 4,30,009 ಉತ್ತೀರ್ಣ ರಾಗಿದ್ದಾರೆ. 1,10,563 ವಿದ್ಯಾರ್ಥಿಗಳು ಅನುತ್ತೀರ್ಣರಾಗಿದ್ದು, ಉತ್ತೀರ್ಣ ಪ್ರಮಾಣ ಶೇ.79.66 ಇದೆ.

ಕರ್ನಾಟಕದಲ್ಲೇ ನೆಲಸಿ ವ್ಯಾಸಂಗ ಮಾಡಿರುವ ವಿದ್ಯಾರ್ಥಿಗಳು ಕನ್ನಡ ಭಾಷೆ ಪಾಸ್ ಮಾಡುವುದೇ ಕಷ್ಟವಾಗಿದೆ. ಈ ಬಾರಿ 4,39,690 ವಿದ್ಯಾರ್ಥಿಗಳು ಕನ್ನಡ ಪರೀಕ್ಷೆ ಬರೆದಿದ್ದರು,. 3,85,875 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, 53,815 (ಶೇ.87.76 ) ಮಂದಿ ಅನುತ್ತೀರ್ಣರಾಗಿದ್ದಾರೆ. ಆದರೆ, ಹಿಂದಿಯಲ್ಲಿ ಶೇ.92 ಫಲಿತಾಂಶವಿದೆ. ದ್ವಿತೀಯ ಪಿಯುನಲ್ಲಿ ಭಾಷೆ ಸೇರಿ 38 ವಿಷಯಗಳಿಗೆ ಪರೀಕ್ಷೆ ನಡೆದಿದೆ. ಇದರಲ್ಲಿ 22 ವಿಷಯಗಳಲ್ಲಿ ಶೇ.90 ಫಲಿತಾಂಶ ಲಭಿಸಿದೆ. ಮಲಯಾಳದಲ್ಲಿ ಮಾತ್ರ ಶೇ.100ಕ್ಕೆ 100 ಫಲಿತಾಂಶ ಬಂದಿದೆ. ಈ ಭಾಷೆಯನ್ನು 52 ವಿದ್ಯಾರ್ಥಿಗಳು ತೆಗೆದುಕೊಂಡಿದ್ದರು.

ವಿಶ್ವಾಸ ಕಿರಣವೂ ವೃದ್ಧಿಸುತ್ತಿಲ್ಲ: ರಾಜ್ಯ ಸರ್ಕಾರ ವಿದ್ಯಾರ್ಥಿಗಳ ವ್ಯಾಸಂಗಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡಬೇಕೆಂಬ ಉದ್ದೇಶದಿಂದ 2017ರಲ್ಲಿ ‘ವಿಶ್ವಾಸ ಕಿರಣ’ ಯೋಜನೆ ಜಾರಿಗೆ ತಂದಿದೆ. ಇದರಲ್ಲಿ ವಿದ್ಯಾರ್ಥಿಗಳಿಗೆ ಆಂಗ್ಲಭಾಷೆ, ಸಂವಹನಕ್ಕಾಗಿ ಆಂಗ್ಲಭಾಷೆಯನ್ನು ಪ್ರತಿ ಭಾನುವಾರ ಕಲಿಸಿಕೊಡಲಾಗುತ್ತಿತ್ತು. ಪಿಯು ಇಲಾಖೆ ಈ ಕಾರ್ಯಕ್ರಮದ ನಡೆಸುತ್ತಾ ಬಂದಿದ್ದು, ಪ್ರತಿವರ್ಷ 1.80 ಲಕ್ಷ ಪರಿಶಿಷ್ಟ ಜಾತಿ ಮತು ಪಂಗಡದ ವಿದ್ಯಾರ್ಥಿಗಳು ಇತರ 4 ಲಕ್ಷ ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆಯುತ್ತಿದ್ದಾರೆ. ಆದರೂ, ಆಂಗ್ಲಭಾಷೆಯಲ್ಲಿ ಉತ್ತೀರ್ಣರಾಗುವ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗುತ್ತಿಲ್ಲ. ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಆಂಗ್ಲಭಾಷೆ ಇನ್ನೂ ಕಬ್ಬಿಣದ ಕಡಲೆ ಎಂಬಂತಾಗಿರುವುದು ನಿಜ ಎಂದು ಅಂಕಿ-ಅಂಶಗಳು ದೃಢಪಡಿಸಿವೆ. 2020ರಲ್ಲಿ ಶೇ.61.80 ಫಲಿತಾಂಶ ದಾಖಲಿಸಿದೆ. ಪರೀಕ್ಷೆ ಬರೆದ 6.75 ಲಕ್ಷದಲ್ಲಿ 2.57 ಲಕ್ಷ ವಿದ್ಯಾರ್ಥಿಗಳು ಅನುತ್ತೀರ್ಣರಾಗಿದ್ದಾರೆ. 2019ಕ್ಕೆ ಹೋಲಿಸಿದರೆ, ಶೇ.0.07 ಅಷ್ಟೇ ಹೆಚ್ಚಳ.

ಹೆಚ್ಚು ವಿಷಯಗಳಲ್ಲಿ ಅನುತ್ತೀರ್ಣರಾಗುತ್ತಿರುವ ಬಗ್ಗೆ ಗಮನಹರಿಸಿ ಈ ವಿಷಯವನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಬೋಧನೆ ಮಾಡಲು ಉಪನ್ಯಾಸಕರಿಗೆ ತರಬೇತಿ ನೀಡುತ್ತಿದ್ದೇವೆ. ಎಂ.ಕನಗವಲ್ಲಿ ನಿರ್ದೇಶಕಿ, ಪದವಿ ಪೂರ್ವ ಶಿಕ್ಷಣ ಇಲಾಖೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net